ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್ ಬಂದ್: ದಕ್ಷಿಣ ಕನ್ನಡದಲ್ಲಿ ಕೆಲವೆಡೆ ಬೆಂಬಲ, ಹಲವೆಡೆ ವಿರೋಧ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 09: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಬೆಂಬಲ ವ್ಯಕ್ತವಾಗುವ ಸೂಚನೆ ದೊರಕಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಸೋಮವಾರ (ಸೆ.10) ಖಾಸಗಿ ಬಸ್

ಸೇವೆ, ಆಟೋರಿಕ್ಷಾ ಸೇರಿದಂತೆ ಕೆಎಸ್ ಆರ್ ಟಿಸಿ ಬಸ್ ಸೇವೆ ಬಂದ್ ಆಗಲಿದೆ.

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

ಟ್ಯಾಕ್ಸಿ ಅಸೋಸಿಯೇಷನ್ ಕೂಡ ಬೆಂಬಲ ಘೋಷಿಸಿದ್ದು, ಈ ನಡುವೆ ಮಂಗಳೂರು ನಗರದಲ್ಲಿ ಕೆಲವೆಡೆ ಬಂದ್ ಗೆ ಬೆಂಬಲ ನೀಡದಿರಲು ತೀರ್ಮಾನಿಸಲಾಗಿದೆ.

Bharat Bandh has received huge support from Dakshina Kannada

ನಗರದ ಹಂಪನಕಟ್ಟೆ, ರಥ ಬೀದಿ, ಬಂದರ್ ನ ಕೆಲಭಾಗ ಸೇರಿದಂತೆ ಇನ್ನಿತರ ಕಡೆ ಬಂದ್ ಗೆ ಬೆಂಬಲವಿಲ್ಲ ಎನ್ನುವ ಬರಹಗಳು ಪೋಸ್ಟರ್ ನಲ್ಲಿ ರಾರಾಜಿಸ ತೊಡಗಿವೆ. ನಾಳೆಯ ಭಾರತ್ ಬಂದ್ ಗೆ ನಮ್ಮ ಬೆಂಬಲವಿಲ್ಲ. ಸೆಪ್ಟೆಂಬರ್ 10 ರಂದು ನಮ್ಮ ಅಂಗಡಿ ಎಂದಿಗಿಂತಲೂ ಒಂದು ಗಂಟೆ ಹೆಚ್ಚು ತೆರೆದಿರುತ್ತದೆ ಎಂದು ಬರೆದ ಪೋಸ್ಟರ್ ಗಳನ್ನು ಅಂಗಡಿಗಳ ಮುಂದೆ ಅಂಟಿಸಲಾಗಿದೆ.

ಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣ

ಭಾರತ ಬಂದ್ ಸಂದರ್ಭದಲ್ಲಿ ನಾವು ಅಂಗಡಿ ಮುಂಗಟ್ಟು ತೆರೆದಿಟ್ಟು ವ್ಯಾಪಾರ ನಡೆಸಲು ನಿರ್ಧರಿಸಿದ್ದೇವೆ ಎಂದು ಓಲ್ಡ್ ಬಂದರ್ ಹೋಲ್ ಸೇಲ್ ಕಿರಾಣಿ ಅಂಡ್ ಅಲೈಟ್ ಮಾರ್ಚೆಂಟ್ಸ್ ಅಸೋಸಿಯೇಷನ್ ಘೋಷಿಸಿದೆ.

Bharat Bandh has received huge support from Dakshina Kannada

ನಾಳೆಯ ಭಾರತ್ ಬಂದ್ ರಾಜಕೀಯ ಪ್ರೇರಿತ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಆರೋಪಿಸಿದ್ದು, ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ರಾಜ್ಯದ ಕಾಂಗ್ರೆಸ್, ಜನತಾದಳ ಮೈತ್ರಿ ಸರ್ಕಾರ ಇಂಧನ ಬೆಲೆಯಲ್ಲಿ ಕಳೆದ ಬಾರಿ 2 ರೂಪಾಯಿ ಹೆಚ್ಚಿಸಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

ಈ ಕುರಿತು ಕಣ್ಣು ಮುಚ್ಚಿ ಕುಳಿತ ಕಾಂಗ್ರೆಸ್ ಮುಖಂಡರು ನಾಳೆ ಬಂದ್ ಕರೆ ನೀಡಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ.

English summary
Bharat Bandh has received huge support from Dakshina Kannada district. Including Mangalore in Dakshina kannada district private and KSRTC bus service, auto rickshaw service will be closed on Monday (September 10).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X