ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಉಡುಪಿ-ಮಂಗಳೂರಿನಲ್ಲಿ ಬಂದ್ ಹೇಗಿತ್ತು?

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಸೆ. 02 : ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರಾವಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಧವಾರ ಮುಂಜಾನೆ ನಗರಕ್ಕೆ ಆಗಮಿಸಿದವರು ಬಸ್ ಇಲ್ಲದೆ ಪರದಾಡಿದರು. ಅಲ್ಲಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಪಂಪ್ ವೆಲ್, ಮರೋಳಿ, ಕೂಳೂರು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಿಗಿ ಬಂದೋಬಸ್ತ್ ಕೈಗೊಂಡಿದ್ದರೂ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕಚೇರಿಗಳಿಗೆ ಹೋಗುವವರು ಪರದಾಡಿದರು. ಆಟೋ ಸಂಚಾರ ಮಾತ್ರ ಬಿರುಸಾಗಿತ್ತು. [ಭಾರತ್ ಬಂದ್ : ಬೆಂಗಳೂರಿನಲ್ಲಿ ಬಸ್ ಸಂಚಾರವಿಲ್ಲ]

ಗರೋಡಿ ಬಳಿ ಕಾಲೇಜಿನ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಅಳಪೆ ಪಡೀಲ್‌ನಲ್ಲಿ ನಗರಕ್ಕೆ ಬರುತ್ತಿದ್ದ ಮೈಸೂರು ಮತ್ತು ಶಂಬೂರ್ ಸರ್ಕಾರಿ ಬಸ್ಸಿಗೆ ಕಲ್ಲು ತೂರಲಾಯಿತು. ಬಸ್ ಚಾಲಕನ ಎದೆಗೆ ಕಲ್ಲು ಬಿದಿದ್ದರಿಂದ ಅವರು ಗಾಯಗೊಂಡರು. ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. [ಭಾರತ್ ಬಂದ್, ಕ್ಷಣ-ಕ್ಷಣದ ಮಾಹಿತಿ]

ಉಡುಪಿ ಜಿಲ್ಲಾದ್ಯಂತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉಡುಪಿ, ಕುಂದಾಪುರ, ಬೈಂದೂರು, ಕಾಪು ಹಾಗೂ ಕಾರ್ಕಳ ಸೇರಿದಂತೆ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಮಂಗಳೂರಿನಲ್ಲಿ ಬಂದ್ ಚಿತ್ರಗಳು......

ಅಂಗಡಿಗಳು ತೆರೆದಿವೆ ಜನರಿಲ್ಲ

ಅಂಗಡಿಗಳು ತೆರೆದಿವೆ ಜನರಿಲ್ಲ

ಭಾರತ್ ಬಂದ್ ಆದರೂ ಮಂಗಳೂರು ನಗರದಲ್ಲಿ ಅಂಗಡಿಗಳು ಎಂದಿನಂತೆಯೇ ತೆರೆದಿದ್ದವು. ಆದರೆ, ಜನಸಂಚಾರ ತೀರಾ ವಿರಳವಾಗಿದ್ದರಿಂದ ಅಂಗಡಿಗಳಿಗೆ ಜನರು ಬರುವುದು ಕಡಿಮೆ ಇತ್ತು. ಖಾಸಗಿ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಯಾರೂ ಅಡ್ಡಿ ಪಡಿಸಲಿಲ್ಲ.

ಸಂತೆಗೂ ತಟ್ಟಿದ ಮುಷ್ಕರದ ಬಿಸಿ

ಸಂತೆಗೂ ತಟ್ಟಿದ ಮುಷ್ಕರದ ಬಿಸಿ

ಸರಕು ತುಂಬಿದ ಲಾರಿಗಳು, ಗ್ಯಾಸ್ ಟ್ಯಾಂಕರ್ ಗಳು ಸಂಚಾರ ನಡೆಸುತ್ತಿದ್ದವು. ಸುರತ್ಕಲ್‌ನ ಬುಧವಾರದ ಸಂತೆಗೂ ಮುಷ್ಕರದ ಬಿಸಿ ತಟ್ಟಿತ್ತು, ವ್ಯಾಪಾರ ಇಲ್ಲದಿರುವುದರಿಂದ ಸಂತೆ ಬಿಕೋ ಎನ್ನುತ್ತಿತ್ತು.

ಆಟೋಗಳಿಗೆ ಶುಕ್ರದೆಸೆ

ಆಟೋಗಳಿಗೆ ಶುಕ್ರದೆಸೆ

ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಆಟೋ ಚಾಲಕರಿಗೆ ಶುಕ್ರ ದೆಸೆ. ಮಂಗಳೂರು ನಗರ, ಸುರತ್ಕಲ್, ಕೂಳೂರು, ಪಣಂಬೂರಿನಲ್ಲಿ ಆಟೋಗಳ ಸಂಚಾರ ಜೋರಾಗಿತ್ತು. ಜನರು ಪ್ರಯಾಣ ಬೆಳೆಸಲು ಆಟೋಗಳನ್ನು ಅವಲಂಬಿಸುವುದು ಅನಿವಾರ್ಯವಾಯಿತು.

ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ

ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ

ಉಡುಪಿ ಜಿಲ್ಲಾದ್ಯಂತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉಡುಪಿ, ಕುಂದಾಪುರ, ಬೈಂದೂರು, ಕಾಪು ಹಾಗೂ ಕಾರ್ಕಳ ಸೇರಿದಂತೆ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಮುಚ್ಚಿದ ಶಾಲಾ-ಕಾಲೇಜುಗಳ

ಮುಚ್ಚಿದ ಶಾಲಾ-ಕಾಲೇಜುಗಳ

ಉಡುಪಿಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಕೊಟ್ಟಿರಲಿಲ್ಲ. ಆದರೆ, ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಗೈರು ಹಾಜರಾದರು. ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಯಿತು.

English summary
The nationwide bandh called by trade unions on Wednesday September 2 received good response in Mangaluru and Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X