ಅಪ್ರಾಪ್ತೆ ಅತ್ಯಾಚಾರ ಯತ್ನ, ಭಜರಂಗದಳ ಕಾರ್ಯಕರ್ತನ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 28: ಇದೊಂದು ಹೇಯಕೃತ್ಯ. ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಭಜರಂಗದಳ ಕಾರ್ಯಕರ್ತನನ್ನು ಧರ್ಮಸ್ಥಳ ಪೋಲಿಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತನನ್ನು ನಿಡ್ಲೆ ನಿವಾಸಿ ರಿಕ್ಷಾ ಚಾಲಕ ಉಮೇಶ್ (25) ಎಂದು ಗುರುತಿಸಲಾಗಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯು ನಾಲ್ಕನೇ ತರಗತಿಯ ವಿದ್ಯಾರ್ಥಿನಿ. ಡಿಸೆಂಬರ್ 24ರಂದು ನಿಡ್ಲೆ ಗ್ರಾಮದ ಮಾಪಲಾಜೆ ಎಂಬಲ್ಲಿ ಬಾಲಕಿ ಒಬ್ಬಳೇ ಇದ್ದಾಗ ಈ ಆರೋಪಿಯು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಕುರಿತು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.[ಉಳ್ಳಾಲ ಪೌರಾಯುಕ್ತೆಯ ಮಗ ಸರಗಳ್ಳತನ ಕೇಸಲ್ಲಿ ಕಂಬಿ ಹಿಂದೆ]

Bhajarangadal member arrested in rape attempt case

ಈತ ಭಜರಂಗದಳದ ಸಕ್ರಿಯ ಕಾರ್ಯಕರ್ತ. ಬಾಲಕಿಯ ಅತ್ಯಾಚಾರಕ್ಕೆ ಈತ ಯತ್ನಿಸಿದ್ದಾನೆ ಎಂದು ದೂರನ್ನು ದಾಖಲಿಸಲು ತೆರಳಿದರೂ ಭಜರಂಗದಳದ ಮುಖಂಡರ ಒತ್ತಡಕ್ಕೆ ಮಣಿದು, ಈತನ ವಿರುದ್ಧ ದೂರು ದಾಖಲಿಸಿಕೊಳ್ಳಲು ಮೊದಲಿಗೆ ಪೊಲೀಸರು ಹಿಂದೇಟು ಹಾಕಿದ್ದರು.

ಆದರೆ, ಕೊನೆಗೆ ಆರೋಪಿಯ ವಿರುದ್ಧ ಧರ್ಮಸ್ಥಳ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Umesh, Bajarangdal member arrested by Dharmasthala police in an attempt to rape minor girl.
Please Wait while comments are loading...