• search

ಸಂತ್ರಸ್ತರಿಗೆ ಪಿಗ್ಗಿ ಬ್ಯಾಂಕ್ ಮುಡುಪಿಟ್ಟ ಕಂದಮ್ಮಗಳು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮಂಗಳೂರು ಆಗಸ್ಟ್ 25: ಕೇರಳ ಹಾಗು ಕೊಡಗಿನಲ್ಲಿನಿರಂತರವಾಗಿ ಸುರಿದ ಮಳೆ ಅಪಾರ ನಷ್ಟವನ್ನು ಉಂಟು ಮಾಡಿದೆ. ಭೂ ಕುಸಿತ ಸೇರಿದಂತೆ ಸುರಿದ ಭಾರೀ ಮಳೆ ದುರಂತ ಪರಿಸ್ಥಿತಿಯನ್ನೇ ಸೃಷ್ಠಿಸಿದೆ. ಮಳೆಯ ತೀವ್ರತೆಗೆ ಕೊಡಗಿನಲ್ಲಿ ಭೂಮಿ ಕುಸಿಯುತ್ತಿದೆ. ಹಲವು ರಸ್ತೆಗಳು ಮುಚ್ಚಿ ಹೋಗಿವೆ , ಮನೆಗಳು ತರಗೆಲೆಗಳಂತೆ ಧರೆಗುರುಳಿವೆ.

  ಕೇರಳ ಸೇರದಂತೆ ಕೊಡಗಿನಲ್ಲಿ ಸಾವಿರಾರು ಜನ ಮನೆ ಮಠ ಕಳೆದುಕೊಂಡು ಅಕ್ಷರಸಹ ದಾರಿಗೆ ಬಿದ್ದಿದ್ದಾರೆ. ಸಂಭವಿಸಿರುವ ದುರಂತಕ್ಕೆ ಕೊಡಗು ಹಾಗು ಕೇರಳದ 13 ಜಿಲ್ಲೆಗಳು ನಲುಗಿ ಹೋಗಿದೆ.

  ಕೊಡಗು ಭೂಕುಸಿತಕ್ಕೆ ಭೂಕಂಪ ಕಾರಣವಲ್ಲ: ಭೂ ವಿಜ್ಞಾನ ಕೇಂದ್ರ ಸ್ಪಷ್ಟನೆ

  ಭಾರೀ ಮಳೆ ಹಾಗು ಬೂ ಕುಸಿತ ದಿಂದಾದ ನಷ್ಟಗಳ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ. ಕೊಡಗು ಹಾಗು ಕೇರಳದ ಸಂತ್ರಸ್ತರಿಗಾಗಿ ದೇಶದ ಮೂಲೆ ಮೂಲೆ ಯಿಂದ ಸಹಾಯ ಹಸ್ತ ಹರಿದು ಬರುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ,ಸಂಘಟನೆಗಳು ಟ್ರಸ್ಟ್ ಗಳು ನೆರೆ ಸಂತ್ರಸ್ತರ ನೆರವಿಗೆ ದಾವಿಸುತ್ತಿವೆ.

  Bengaluru kids sacrifice piggy bank account to flood relief

  ಎಲ್ಲೆಡೆಯಿಂದ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಈ ಮಧ್ಯೆ ಇಬ್ಬರು ಮುದ್ದು ಕಂದಮ್ಮಗಳ ಹೃದಯ ಈ ನೆರೆ ಸಂಗ್ರಸ್ತರಿಗಾಗಿ ಮಿಡಿದಿದೆ. ಈ ಮುದ್ದು ಕಂದಮ್ಮಗಳು ತಮ್ಮ ದೇಣಿಗೆ ಯನ್ನು ನೆರೆ ಸಂತೃಸ್ತರಿಗೆ ಅರ್ಪಿಸಿದ್ದಾರೆ. ಈ ಕಂದಮ್ಮಗಳ ನೆರವು ಸಾಮಜಿಕ ಜಾಲತಾಣಗಳಲ್ಲಿ ಬಾರಿ ಪ್ರಶಂಸೆಗೆ ಕಾರಣವಾಗಿದೆ.

  ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

  ಬೆಂಗಳೂರಿನಲ್ಲಿ ನೆಲೆಸಿರುವ , ಕರಾವಳಿ ಮೂಲದ ಇಬ್ಬರು ಎಲ್ ಕೆ ಜಿ ಓದುತ್ತಿರುವ ಕಂದಮ್ಮಗಳು ತಮ್ಮ ಪಿಗ್ಗಿ ಬ್ಯಾಂಕ್ ನಲ್ಲಿ ಕೂಡಿಟ್ಟ ಹಣವನ್ನು ನೆರೆ ಪೀಡಿತರಿಗಾಗಿ ನೀಡಿದ್ದಾರೆ.

  ಬೆಂಗಳೂರಿನಲ್ಲಿ ಸಿವಿಲ್ ಎಂಜೀನಿಯರ್ ಅಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಡ್ಪಿನಂಗಡಿಯ ಪ್ರಶಾಂತ್ ರೈ ಯವರ ಪುತ್ರಿ ಪ್ರಾಪ್ತಿ ರೈ ಹಾಗೂ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ ಕಾರ್ಕಳ ಮೂಲದ ಗೋಪಾಲ ಪೂಜಾರಿಯವರ ಮಗಳು ಜೀವಿತಾ ತಾವು ಉಳಿಸಿದ ಪಿಗ್ಗಿ ಬ್ಯಾಂಕಿನ ಹಣವನ್ನು ನೆರೆ ಸಂತ್ರಸ್ತರಿಗೆ ಕೊಡುವ ಮೂಲಕ ಕೇರಳ ಹಾಗು ಕೊಡಗಿನ ದುರಂತಕ್ಕೆ ಮಿಡಿದಿದ್ದಾರೆ.

  Bengaluru kids sacrifice piggy bank account to flood relief

  ಅಪ್ಪ, ಅಮ್ಮ, ಅಕ್ಕ,ಅಜ್ಜಾ, ಅಜ್ಜಿ , ಅಣ್ಣ, ಮಾಮ, ಹೀಗೆ ಪ್ರೀತಿಯಿಂದ ನೀಡಿದ ಚಿಕ್ಕ ಚಿಕ್ಕ ಮೊತ್ತವನ್ನು ಪಿಗ್ಗಿ ಬ್ಯಾಂಕ್ ನಲ್ಲಿ ಸಂಗ್ರಹಿಸಿದ್ದ ಈ ಪೋರಿಯರು ಹಣವನ್ನು ನೆರೆ ಸಂತ್ರಸ್ತರ ಪರವಾಗಿ ಧನ ಸಂಗ್ರಹ ಕ್ಕೆ ನೀಡಿದ್ದಾರೆ. ಈ ಮುದ್ದು ಮರಿಗಳ ಈ ಉದಾರತೆ ಇತರರಿಗೂ ಮಾದರಿ ಯಾಗಿದ್ದು ಸಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತ ವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Every human being is coming forward to help flood affected people in Karnataka and Kerala. State governments, central government, many organizations have joining hands to this noble cause. Here is a story about two kids who sacrificed their piggy bank to the same cause.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more