ಮಂಗಳೂರಿನ ಬೆಲ್ಲ ಕ್ಯಾಂಡಿ ರುಚಿಯನ್ನು ಸವಿದವನೇ ಬಲ್ಲ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 12 : ಒಂದು ಕಾಲದಲ್ಲಿ ಐಡಿಯಲ್ ಐಸ್ ಐಸ್‍ಕ್ರೀಂರವರ ಬೆಲ್ಲ ಕ್ಯಾಂಡಿ ಐಸ್‍ಕ್ರೀಂ ಒಂದು ಕಾಲದಲ್ಲಿ ಬಲು ಪ್ರಸಿದ್ಧಿ. ಬೆಲ್ಲ ಕ್ಯಾಂಡಿ ಅಂದ್ರೆ ಸಾಕು ಕುಡ್ಲದ ಜನರ ಬಯಲ್ಲಿ ನೀರು ಬರಿಸುತ್ತೆ. ಇನ್ನು ಬೇಸಿಗೆ ಕಾಲದಲತೂ ಈ ಕ್ಯಾಂಡಿಗೆ ಎಲಿಲ್ಲದ ಬಲು ಬೇಡಿಕೆ.

ಆದರೆ, ಕಾರಣಾಂತರಗಳಿಂದ ರದ್ದು ಮಾಡಲಾಗಿದ್ದ ಈ ಬೆಲ್ಲ ಕ್ಯಾಂಡಿ ಈಗ ಮತ್ತೆ ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ. ಹೌದು ಐಸ್‍ಕ್ರೀಂ ಪ್ರಿಯರಿಗೆ ಈ ಬೆಲ್ಲ ಕ್ಯಾಂಡಿಯ ರುಚಿ ಅನುಭಹಿಸುವ ಅವಕಾಶವನ್ನು ಐಡಿಯಲ್ ಐಸ್‍ಕ್ರೀಂನ ಮಾಲೀಕರಾದ ಮುಕುಂದ ಕಾಮತರವರು ದೊರಕಿಸಿದ್ದಾರೆ. [ಐಸ್‍ಕ್ರೀಂ ಕ್ಷೇತ್ರದಲ್ಲಿ ಸಾಧನೆಗೈದ ಮಂಗ್ಳೂರ 'ಐಡಿಯಲ್ ಐಸ್ ಕ್ರೀಮ್ಸ್']

Bella candy Ice Cream all set to make a comeback in market today

ಮಂಗಳೂರಿನ ಪ್ರಖ್ಯಾತ ಐಸ್‍ಕ್ರೀಂ ಮಳಿಗೆಯ ಮಾಲಿಕರಾದ ಮುಕುಂದ್ ಕಾಮತ್ ತಮ್ಮ ಪ್ರಯೋಗಗಳಿಂದ ಇಡೀ ವಿಶ್ವದ ಗಮನ ಸೆಳೆದವರು. ನ್ಯೂಮರೋ ಯೂನೋ ಪ್ರಶಸ್ತಿಯನ್ನು ಪಡೆದುಕೊಂಡು ಎಲ್ಲರಿಗೂ ಚಿರಪರಿಚಿತರಾದವರು.

ಈಗ ಬೆಲ್ಲ ಕ್ಯಾಂಡಿಯನ್ನು ವಾಪಾಸ್ ಮರುಕಟ್ಟೆಗೆ ಹೊದಗಿಸಿ ಐಸ್‍ಕ್ರೀಂ ಪ್ರಿಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Bella candy Ice Cream all set to make a comeback in market today

ಇನ್ನು ಭಾನುವಾರ ನಗರದಲ್ಲಿ ನಡೆದ ಹರ್ಕ್ಯುಲಸ್ ಸೈಕಲ್ ಜಾಥದಲ್ಲಿ ಪಾಲ್ಗೊಂಡ ಸುಮಾರು 3೦೦೦ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಬೆಲ್ಲ ಕ್ಯಾಂಡಿಯನ್ನು ಉಚಿತವಾಗಿ ಕೂಡುವ ಮೂಲಕ ಮಕ್ಕಳಿಗೆ ಸೈಕಲ್ ತುಳಿಯಲು ಬಲ ನೀಡಿದಂತಾಯಿತು.

ಮಂಗಳೂರು ಹೇಳಿಕೇಳಿ ಬಾಯಲ್ಲಿ ನೀರೂರಿಸುವ ಖಾದ್ಯಗಳಿಗೆ ಪ್ರಖ್ಯಾತಿ ಪಡೆದ ನಗರ. ಇಲ್ಲಿನ ಪಾಕ ಪ್ರವೀಣರು ಖಾದ್ಯ ವಿಭಾಗದಲ್ಲಿ ಒಂದಿಲ್ಲೊಂದು ಪ್ರಯೋಗಗಳನ್ನು ಮಾಡಿ ಖಾದ್ಯಪ್ರಿಯರಿಗೆ ರುಚಿಕರವಾದ ಹೊಸತೊಂದು ಖಾದ್ಯವನ್ನು ಪರಿಚಯಿಸುತ್ತಾರೆ.

ಈ ಪ್ರಯೋಗ ಕ್ಷೇತ್ರಗಳ ಪೈಕಿ ಐಸ್‍ಕ್ರೀಂ ಕ್ಷೇತ್ರ ಕೂಡಾ ಹೊರತಾಗಿಲ್ಲ. ಇದಕ್ಕೆ ಸಾಕ್ಷಿ ಮಂಗಳೂರಿನ ಐಡಿಯಲ್ ಐಸ್‍ಕ್ರೀಂ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The famed 'bella candy' (jaggery candy) is back again in mangaluru. Thanks to the perseverance of city's award-winning ice-cream entrepreneur Mukund S Kamath.
Please Wait while comments are loading...