ಪಣಂಬೂರು ಕಡಲ ತೀರದಲ್ಲಿ 2016 ಬೀಚ್ ಉತ್ಸವ

Posted By: Ramesh
Subscribe to Oneindia Kannada

ಮಂಗಳೂರು, ಡಿಸೆಂಬರ್.31 : ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ 3 ದಿನಗಳ ಬೀಚ್ ಉತ್ಸವವನ್ನು ಶುಕ್ರವಾರ ಮಂಗಳೂರು ಸಹಾಯಕ ಕಮೀಶನರ್ ರೇಣುಕಾ ಪ್ರಸಾದ್ ಅವರು ಗಾಳಿ ಪಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದು, ಇದರ ಜೊತೆಗೆ ಶುಕ್ರವಾರ ಸಂಜೆ ಬೀಚ್ ಉತ್ಸವಕ್ಕೆ ಚಾಲನೆ ದೊರೆತಿದೆ. ಜನವರಿ 1ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಬೀಚ್ ಉತ್ಸವ ನಡೆಯಲಿದೆ.

Beach festival 2016 inaugurated at panambur beach in mangaluru

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬೀಚ್ ವಾಲಿಬಾಲ್, ನೃತ್ಯ, ಸ್ಕೇಟಿಂಗ್, ಬೀಚ್ ತ್ರೋಬಾಲ್, ಯೋಗ, ಉದಯ ರಾಗ, ಬೊಟ್ ರೇಸ್, ಆಹಾರೋತ್ಸವ, ಗಾಳಿಪಟ ಉತ್ಸವ ಮುಂತಾದ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಮಾರಂಭದಲ್ಲಿ ಬೀಚ್ ಉತ್ಸವ ಸಮಿತಿಯ ಸಂಘಟಕರಾದ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಮಹೇಶ್ ಕುಮಾರ್, ಮಾಜಿ ಉಪನಿರ್ದೇಶಕ ಸುರೇಶ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Beach festival 2016 inaugurated at panambur beach in Mangaluru. The inauguration was lead by Assistant commissioner Renuka prasad by flying kite.
Please Wait while comments are loading...