ಧರ್ಮಸ್ಥಳ ದೀಪೋತ್ಸವದಲ್ಲಿ ಬರೋಡ ಬಲೂನಗಳದ್ದೇ ಕಾರುಬಾರು

Posted By: ಭಾಗ್ಯಶ್ರೀ ಹೆಗಡೆ
Subscribe to Oneindia Kannada

ಉಜಿರೆ, ನವೆಂಬರ್ 16 : ಧರ್ಮಸ್ಥಳದಲ್ಲಿ ದೀಪೋತ್ಸವ ಪ್ರಾರಂಭವಾಗಿದೆ. ಅಲ್ಲಿ ಬರೋಡಾ ಬಲೂನ್‍ಗಳು ಜನರನ್ನು ಆಕರ್ಷಿಸುತ್ತಿವೆ. ಸಾಮಾನ್ಯವಾಗಿ ಪೇಟೆಯಲ್ಲಿ ಸಿಗುವ ಬಲೂನ್‍ಗಳಿಗಿಂತ ಇವು ದೊಡ್ಡಗಾತ್ರದವು.

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ಧರ್ಮಸ್ಥಳದ ಮುಖ್ಯದ್ವಾರದದಿಂದ ಹಲವು ಕಡೆ ಕೈಯಲ್ಲಿ ದೊಡ್ಡದಾದ ಬಣ್ಣ ಬಣ್ಣದ ಬಲೂನ್‍ಗಳನ್ನು ಹಿಡಿದು ಬರೋಡಾದ ವ್ಯಾಪಾರಿಗಳು ಜನರನ್ನು ಆಕರ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಜಾತ್ರೆಯ ಸಂದರ್ಭದಲ್ಲಿ ಬಣ್ಣದ ಪುಟ್ಟ ಬಲೂನ್‍ಗಳು ಕಾಣಸಿಗುತ್ತವೆ. ಆದರೆ ಇವರು ಪ್ಲಾಸ್ಟಿಕ್‍ನಲ್ಲಿ ದೊರೆಯುವ ಬಲೂನ್‍ಗಳಿಗಿಂತಲೂ ದೊಡ್ಡ ಬಲೂನ್ ಹಿಡಿದು ಮಾರಾಟ ಮಾಡುತ್ತಿದ್ದಾರೆ. ಬಲೂನ್‍ಗಳ ಗಾತ್ರಕ್ಕೆ ಮರುಳಾಗಿ ಜನರು ಕೊಂಡುಕೊಳ್ಳುತ್ತಿದ್ದಾರೆ.

ಮಂಗಳೂರು: ಲಕ್ಷದೀಪೋತ್ಸವದಲ್ಲಿ ಸೈಕಲ್ ಮೂಲಕ ಸ್ವಚ್ಛಭಾರತ ಅಭಿಯಾನ

Baroda baloons in Dharmasthala Deepotsava

ಗುಜರಾತಿನ ಬರೋಡಾದ ವ್ಯಾಪಾರಿಯೊಬ್ಬರು ಈ ಬಲೂನ್‍ಗಳನ್ನು ಏಳು ಜನರಿಗೆ ಕೊಟ್ಟು ಮಾರುವಂತೆ ಕಳುಹಿಸಿದ್ದಾರೆ. ಏಳು ಜನರ ಈ ತಂಡದವರು ಗುಜರಾತಿ ಮಿಶ್ರಿತ ಹಿಂದಿ ಮಾತನಾಡುತ್ತಾರೆ. ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿ ಬಲೂನ್‍ಗಳ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

Baroda baloons in Dharmasthala Deepotsava

ಇದೇ ಮೊದಲ ಬಾರಿಗೆ ತಮ್ಮ ಊರು ಬಿಟ್ಟು ಬೇರೆ ರಾಜ್ಯಕ್ಕೆ ಬಂದು ವ್ಯಾಪಾರ ಮಾಡುತ್ತಿರುವ ಇವರ ಮೂಲ ಕಸುಬು ಬಲೂನು ಮಾರಾಟವಲ್ಲ. ಬರೋಡಾದಲ್ಲಿ ಒಬ್ಬರ ಕೈ ಕೆಳಗೆ ಕೆಲಸ ಮಾಡುವವರು. ಬಟ್ಟೆ ಹೊಲಿಯುವುದು, ಹಾಳಾದ ಪ್ಲಾಸ್ಟಿಕ್ ಬಕೆಟ್‍ಗಳ ರಿಪೇರಿ ಇಂತಹ ಕೆಲಸಗಳನ್ನು ನಿರ್ವಹಿಸುವರರು. ಬಲೂನ್ ಮಾರಾಟದಲ್ಲಿ ದುಡಿದ ಹಣವೂ ಇವರ ಕೈ ಸೇರುವುದಿಲ್ಲ. ಬಂದ ಹಣವನ್ನೆಲ್ಲ ತಮ್ಮ ಮಾಲೀಕನಿಗೆ ಕೊಟ್ಟು, ಆತ ನೀಡಿದ ಹಣದಲ್ಲಿ ಜೀವನ ಸಾಗಿಸುತ್ತಾರೆ.

ದಿನದ ಊಟಕ್ಕಾಗಿ ಮಾಲೀಕನ ಮುಂದೆ ನಿಲ್ಲುವ ಈ ಜನರು, ಗೊತ್ತುಗುರಿಯಿಲ್ಲದ ಊರಿನಲ್ಲಿ ದುಡಿಮೆ ಮಾಡುತ್ತಿದ್ದಾರೆ. ಬಂದ ಹಣದಲ್ಲಿ ಎಷ್ಟು ಪಾಲು ತಮಗೆ ಸಿಗುತ್ತದೆ ಎಂದ ಯೋಚನೆಯೂ ಇಲ್ಲದೆ ಬಿಸಿಲು, ಛಳಿಯಲ್ಲಿ ಬಲೂನ್‍ಗಳ ಮಾರಾಟದಲ್ಲಿ ತೊಡಗಿದ್ದಾರೆ.

Baroda baloons in Dharmasthala Deepotsava

10 ರೂ. 100 ರೂ. ಬಲೂನ್ ಮಾರಾಟ ಮಾಡುತ್ತಿರುವ ಇವರು ತೀರಾ ಹಿಂದುಳಿದ ವರ್ಗದಿಂದ ಬಂದವರು. 20 ದಿನಗಳ ಕಾಲ ಶಾಲೆ ರಜೆಯಿರುವುದರಿಂದ ತಾವೂ ಅಪ್ಪ ಅಮ್ಮನ ಜೊತೆ ಮಾರಾಟ ಮಾಡಲು ಬಂದಿದ್ದೇವೆ .ಪ್ರತಿ ನಿತ್ಯ ಸುಮಾರು 500 ರೂ. ಸಂಪಾದಿಸುತ್ತೇನೆ. ಎನ್ನುವುದು 15 ವರ್ಷದ ಬಾಲಕ ಮಲೀಂದರ್ ನ ಮಾತು. ಶಾಲೆ ರಜೆಯಿರುವ ಸಮಯ ಇವರಿಗೆ ದುಡಿಮೆಯ ಕಾಲ.

ಕರ್ನಾಟಕದ ಪುಟ್ಟಗ್ರಾಮದಲ್ಲಿ ನಡೆಯುತ್ತಿರುವ ಉತ್ಸವದ ಮಾತು ಬೇರೆ ರಾಜ್ಯದ ಗ್ರಾಮಗಳನ್ನು ತಲುಪುತ್ತಿದೆ. ಲಕ್ಷಾಂತರ ಜನ ಸೇರುವ ದೀಪೋತ್ಸವ ಕೇವಲ ಇಲ್ಲಿನ ಜನರಿಗೆ ಮಾತ್ರ ಮಹತ್ವವಾಗದೇ, ದೇಶದ ಹಲವಾರು ಭಾಗಗಳ ಜನರಿಗೂ ಜೀವನ ಕಟ್ಟಿಕೊಳ್ಳುವ ಅವಕಾಶವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Baroda Baloons are attracting in Dharmasthala during Deepotsav, a vendor from Gujrat Barod marketing the Baloons through some 7-8 boys.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ