ಮಂಗ್ಳೂರಿನ ಬೊಕ್ಕಪಟ್ಣದಲ್ಲಿ ಬಡ್ಡಿ ದಂಧೆಕೋರನ ಬಂಧನ

Posted By: Ramesh
Subscribe to Oneindia Kannada

ಮಂಗಳೂರು, ಫೆಬ್ರವರಿ. 06 : ಬಡ್ಡಿ ವ್ಯವಹಾರ ನಡೆಸುತ್ತಾ ಜನರಿಗೆ ಮೋಸ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಭಾನುವಾರ ರಾತ್ರಿ ಬರ್ಕೆ ಠಾಣಾ ಪೊಲೀಸರು ಬೊಕ್ಕಪಟ್ಣದಲ್ಲಿ ಬಂಧಿಸಿದ್ದಾರೆ.

ಬೊಕ್ಕಪಟ್ಣದ ನಿವಾಸಿ ಶಾನ್ ಡಿಸೋಜಾ (36) ಬಂಧಿತ ಆರೋಪಿ. ಆರೋಪಿಯಿಂದ ವಿವಿಧ ಬ್ಯಾಂಕುಗಳ ಸುಮಾರು 80 ಖಾಲಿ ಚೆಕ್‌ಗಳು, 5 ಸ್ಟಾಂಪ್ ಪೇಪರ್ ಮತ್ತು 7,500 ರೂ. ನಗದು ವಶ ಪಡಿಸಿಕೊಂಡಿದ್ದಾರೆ.

Barke Police Arrest Moneylender from Bokkapatna in mangaluru

ಶಾನ್ ಡಿ'ಸೋಜಾ ಕಡಿಮೆ ಬಡ್ಡಿಗೆ ಹಣ ನೀಡುತ್ತೇನೆ ಎಂದು ಜನರನ್ನು ನಂಬಿಸಿ ಅವರಿಂದ ಖಾಲಿ ಚೆಕ್‌ಗಳನ್ನು ಪಡೆದು ಅದರಲ್ಲಿ ಅಧಿಕ ಮೊತ್ತವನ್ನು ನಮೂದಿಸುತ್ತಿದ್ದನೆಂದು ಆರೋಪಿಸಲಾಗಿದೆ. ಹಣ ನೀಡದಿದ್ದರೆ ಚೆಕ್ ಬೌನ್ಸ್ ಕೇಸು ಹಾಕಿ ಜನರನ್ನು ಬೆದರಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇಂತಹ ವಂಚನೆ ಹಾಗೂ ಕಿರುಕುಳ ಪ್ರಕರಣಗಳ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದ ಪರಿಣಾಮ ಬೊಕ್ಕಪಟ್ಣದಲ್ಲಿರುವ ಆತನ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಡಿ'ಸೋಜಾನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Barke police have arrested Shaun D'Souza for lending at high interest, defrauding borrowers at Bokkapatna. 80 blank cheque leaves pertaining to various banks, five stamp papers, and Rs 7,500 cash were recovered from his possession.
Please Wait while comments are loading...