ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ವಾಳ ಹರೀಶ್ ಪೂಜಾರಿ ಕೊಲೆ : ಗುಜರಾತ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 20 : ಬಂಟ್ವಾಳದ ಹರೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ. 2015ರ ನವೆಂಬರ್ 12ರಂದು ನಾವೂರದಲ್ಲಿ ಹರೀಶ್ ಪೂಜಾರಿಯನ್ನು ನಾಲ್ವರ ಗುಂಪು ಹತ್ಯೆ ಮಾಡಿತ್ತು.

ಹರೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರವಿರಾಜ್ ತಲೆಮರೆಸಿಕೊಂಡಿದ್ದ. ಮಂಗಳವಾರ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಆತನನ್ನು ಅಹಮದಾಬಾದ್‌ನಲ್ಲಿ ಬಂಧಿಸಿದ್ದು, ಬುಧವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೋರ್ಟ್ ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. [ಹರೀಶ್ ಪೂಜಾರಿ ಕೊಲೆ, ಮೂವರ ಬಂಧನ]

arrest

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭುವಿತ್ ಶೆಟ್ಟಿ, ಅಚ್ಯುತ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರವಿರಾಜ್‌ಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಅಹಮದಾಬಾದ್‌ನಲ್ಲಿನ ಚಿಕ್ಕಪ್ಪನ ಮನೆಯಲ್ಲಿ ಅಡಗಿದ್ದ ರವಿರಾಜ್‌ನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. [ಕ್ರೈಸ್ತರು ಟಿಪ್ಪು ವಿರೋಧಿಸುವುದೇಕೆ?]

ನವೆಂಬರ್ 12ರಂದು ಹರೀಶ್ ಪೂಜಾರಿ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾರುತಿ ಓಮಿನಿ ಕಾರಿನಲ್ಲಿ ಬಂದ ರವಿರಾಜ್ ಮತ್ತು ಇತರ ಆರೋಪಿಗಳು ಹರೀಶ್ ಪೂಜಾರಿ ಹತ್ಯೆ ನಡೆಸಿ ಪರಾರಿಯಾಗಿದ್ದರು. [ಬಂಟ್ವಾಳ : ಹನೀಫ್ ಕೊಲೆ ಯತ್ನಕ್ಕೆ ಹಳೆ ದ್ವೇಷ ಕಾರಣ]

ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಗಲಭೆ ಖಂಡಿಸಿ ಬಂಟ್ವಾಳದಲ್ಲಿ ನವೆಂಬರ್ 12ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆ ನಡೆದ ದಿನವೇ ಹರೀಶ್ ಪೂಜಾರಿ ಹತ್ಯೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಭುವಿತ್ ಶೆಟ್ಟಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ.

English summary
Bantwal rural police arrested Raviraj in connection with the Harish Poojary murder case, that took place on November 12, 2015. Raviraj arrested at Ahmedabad. He was taken into custody and produced to court on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X