ಭಾರೀ ಮೌಲ್ಯದ ನಿಷೇಧಿತ ನೋಟುಗಳನ್ನು ಸಾಗಿಸುತ್ತಿದ್ದವನ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕುಂದಾಪುರ / ಭಟ್ಕಳ, ಏಪ್ರಿಲ್ 10 : ನಿಷೇಧಿತ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಭಟ್ಕಳ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಮೂಲದ ಅಬ್ದುಲ್ ಮುಹಿದ್ದೀನ್ ಬಂಧಿತ ಆರೋಪಿ. ಈತ 18 ಲಕ್ಷ ರು. ಮೌಲ್ಯದ ಹಳೆ ನೋಟುಗಳೊಂದಿಗೆ ಮಡಗಾಂವ್ ದಿಂದ ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಹೋಗುವ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

Banned notes worth Rs 18 lakh seized by Bhatkal railway police

1000 ರು. ಮುಖಬೆಲೆಯ 13 ಲಕ್ಷ ಹಾಗೂ 500 ರು. ಮುಖಬೆಲೆಯ 5 ಲಕ್ಷ ರು. ಸೇರಿದಂತೆ ಒಟ್ಟು 18ಲಕ್ಷ ಹಳೆ ನೋಟುಗಳು ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡ ರೈಲ್ವೆ ಪೊಲೀಸರು ಭಟ್ಕಳ ನಗರ ಠಾಣೆಗೆ ಒಪ್ಪಿಸಿದ್ದಾರೆ.

ಅಪರಾಧ ವಿಭಾಗದ ಪಿ. ಎಸ್. ಐ ಪರಮೇಶ್ವರಪ್ಪ ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ನೋಟುಗಳ ಚಲಾವಣೆಯ ನಿಗದಿತ ಅವಧಿ ಅಂತ್ಯಗೊಂಡಿದ್ದರೂ ಇಷ್ಟೊಂದು ದೊಡ್ಡ ಮೊತ್ತದ ನಿಷೇಧಿತ ನೋಟುಗಳನ್ನು ಯಾರಿಂದ ಪಡೆದುಕೊಂಡಿದ್ದ, ಎಲ್ಲಿಗೆ ಸಾಗಿಸುತ್ತಿದ್ದ ಎನ್ನುವ ವಿಚಾರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a joint operation, the railway police and the civil police of Bhatkal town arrested a man with banned notes worth 18 lakh at the Bhatkal railway station.
Please Wait while comments are loading...