ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಜ.9 ರಂದು ಮಂಗಳೂರು ಬಂದ್‌ಗೆ ಯೂತ್ ಕಾಂಗ್ರೆಸ್ ಕರೆ

|
Google Oneindia Kannada News

ಮಂಗಳೂರು, ಜನವರಿ 07: ವಿಜಯಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಜವನರಿ 9 ರಂದು ಮಂಗಳೂರು ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕರೆ ನೀಡಿದೆ.

'ತಮ್ಮ ರಾಜ್ಯದ ಬ್ಯಾಂಕ್ ಉಳಿಸಲು ನಮ್ಮ ರಾಜ್ಯದ ಬ್ಯಾಂಕ್ ಹಾಳು ಮಾಡಿದ ಪಿಎಂ''ತಮ್ಮ ರಾಜ್ಯದ ಬ್ಯಾಂಕ್ ಉಳಿಸಲು ನಮ್ಮ ರಾಜ್ಯದ ಬ್ಯಾಂಕ್ ಹಾಳು ಮಾಡಿದ ಪಿಎಂ'

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ , ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಎರಡು ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸುವ ಬಗ್ಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಮೌನ ವಹಿಸಿರುವುದು ಯಾಕೆ? ಎಂದು ಪ್ರಶ್ನಿಸಿದರು.

 ಬ್ಯಾಂಕುಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ: ಬರಿ ನೆನಪಾಗಿ ಉಳಿಯಲಿದೆ ವಿಜಯಾ ಬ್ಯಾಂಕ್ ಬ್ಯಾಂಕುಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ: ಬರಿ ನೆನಪಾಗಿ ಉಳಿಯಲಿದೆ ವಿಜಯಾ ಬ್ಯಾಂಕ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಒತ್ತೆ ಇಟ್ಟಿದ್ದಾರೆಯೇ? ಎಂದು ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದರು. ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಜನವರಿ 9 ರಂದು ಮಂಗಳೂರು ಬಂದ್ ಗೆ ಕರೆ ನೀಡುವುದಾಗಿ ತಿಳಿಸಿದ ಅವರು ಜನವರಿ 9ರಂದು ಬೆಳಗ್ಗೆ 6ರಿಂದ ಸಂಜೆ 4 ರವರೆಗೆ ಜಿಲ್ಲೆಯನ್ನು ಬಂದ್ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

Bank merger: Dakshina Kannada youth congress call bundh on January 09

ಜ.9ರ ಬಂದ್ ಯಶಸ್ವಿಗೊಳಿಸಲು ಬಸ್ ಮಾಲೀಕರು, ಹೊಟೇಲ್ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಲಾಗುವುದು. ಬಂದ್ ಗೆ ಸಂಸದ ನಳಿನ್ ಕೂಡ ಕೈ ಜೋಡಿಸಲಿ ಎಂದು ಒತ್ತಾಯಿಸಿದರು.

English summary
Dakshina Kannada youth congress president Mithun Rai slams Central government over merger of Vijaya bank.Condemning this act of central government youth congress called district bundh on January 09.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X