ಅಜ್ಜಿಯನ್ನು ನೋಡಲು ಮಂಗಳೂರಿಗೆ ಬಂದ ಬಹರೇನಿನ ಸಚಿವ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 29 : ಬಹರೇನ್ ವಿದೇಶಾಂಗ ಸಚಿವ ಖಾಲಿದ್ ಬಿನ್ ಅಹಮ್ಮದ್ ಸದ್ದಿಲ್ಲದೇ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಚಿಕ್ಕಂದಿನಲ್ಲಿ ಸಾಕಿ ಸಲುಹಿದ ಅಜ್ಜಿಯನ್ನು ಭೇಟಿ ಮಾಡಲು ಅವರು ಜಿಲ್ಲೆಗೆ ಆಗಮಿಸಿದ್ದೇನೆ ಎಂದು ಅವರೇ ಇಂಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Bahrain foreign minister visit Mangalore and meet her grandmother

ಬಹರೇನ್ ಸೌದಿ ಅರೇಬಿಯಾ ಬಳಿಯಿರುವ ರಾಷ್ಟವಾಗಿದ್ದು ಕತಾರಿನ ಸಮೀಪ ಇದೆ, ಇಲ್ಲಿ ಗಗನ ಚುಂಬಿ ಕಟ್ಟಡಗಳು, ಸಮುದ್ರ ತೀರ ಮತ್ತು ಮುತ್ತರತ್ನಗಳ ವ್ಯಾಪಾರಕ್ಕೆ ಪ್ರಸಿದ್ದಿ ಪಡೆದಿದೆ ಅಲ್ಲಿಂದ ಯಾಕಪ್ಪ ನಮ್ಮ ಮಂಗಳೂರಿಗೆ ಬಂದದ್ದು ಎಂದು ಕೊಳ್ಳುತ್ತೀರಾ ? ಕರ್ನಾಟಕದ ಮಂಗಳೂರಿನಲ್ಲಿ ಬೆಳೆದಿದ್ದ ಖಾಲಿದ್ ಬಿನ್ ಅಹಮದ್ ಅಲ್ಲಿ ತಮ್ಮ ಹೆಸರು, ಅಂತಸ್ತು ಗಳಿಸಿ ದೊಡ್ಡ ವ್ಯಕ್ತಿಯಾಗಿ ಅಲ್ಲಿನ ವಿದೇಶಾಂಗ ಸಚಿವರೂ ಆಗಿದ್ದಾರೆ ಅವರು ತಮ್ಮ ಬಾಲ್ಯದ ದಿನಗಳನ್ನು ಮರೆಯದೇ ತನ್ನನ್ನು ಸಾಕಿದ್ದ ಅಜ್ಜಿಯನ್ನು ಭೇಟಿಯಾಗಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.[ಬಹರೇನ್‌ನಲ್ಲಿ ಬಿಲ್ಲವರ ದಶಮಾನೋತ್ಸವ ಸಂಭ್ರಮ]

Bahrain foreign minister visit Mangalore and meet her grandmother

ಅಜ್ಜಿಯನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಆದರೆ ಅವರು ಯಾವ ಸ್ಥಳದಲ್ಲಿದ್ದೇವೆ ಎಂದು ಹೇಳಿಕೊಂಡಿಲ್ಲ. ಮಂಗಳೂರಿನ ನಿವಾಸಿ 93 ವರ್ಷದ ದಾದಿ ಕರ್ಮಿನಾ ಮಥಿಯಾಸ್ ಎಂಬುವವರನ್ನ ಭೇಟಿ ಮಾಡಿದ ಫೋಟೋವನ್ನು ಬಹರೇನ್ ಸಚಿವ ತನ್ನ ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಹೀಗಂತ ಬರೆದುಕೊಂಡಿದ್ದಾರೆ.[ಬಹರೇನ್ ಉದ್ಯಮಿಗಳ ಜೊತೆ ಸಿಎಂ ಸಭೆ]

Bahrain foreign minister visit Mangalore and meet her grandmother

'ನನ್ನನ್ನ ಬಾಲ್ಯದಲ್ಲಿ ಮಗನಂತೆ ನೋಡಿದ ನನ್ನ ದಾದಿಯ ಜೊತೆ ನಾನು ಮಂಗಳೂರಿನಲ್ಲಿದ್ದೇನೆ. ಬಾಲ್ಯದಲ್ಲಿ ನಮಗೆ ಯಾರು ಸಹಾಯ ಮಾಡುತ್ತಾರೋ ಹಾಗೂ ಯಾರು ನಮ್ಮ ಜೀವನದ ಪ್ರಮುಖ ಭಾಗವಾಗುತ್ತಾರೋ ಅಂತಹ ವ್ಯಕ್ತಿಗಳನ್ನು ನಾವು ಮರೆಯಬಾರದು ಎಂದಿದ್ದಾರೆ.

Bahrain foreign minister visit Mangalore and meet her grandmother

ಇಷ್ಟೇ ಅಲ್ಲ, ಈ ಅಜ್ಜಿ ತನ್ನ 35 ನೇ ವರ್ಷದಲ್ಲಿ ಮಂಗಳೂರಿನಿಂದ ಬಹರೇನ್ ಗೆ ಹೋಗಿದ್ದರಂತೆ. ಅಲ್ಲದೇ ಬಹರೇನ್ ಸಚಿವರ ಅಣ್ಣ ಅಬ್ದುಲ್ಲಾ ಹಾಗೂ ಸಹೋದರಿಯರಾದ ಮಾಹಿಯಾ ಮತ್ತು ಲುಲುವಾ ಅವರನ್ನು ತಾಯಿ ಪ್ರೀತಿ ನೀಡಿ ಸಾಕಿದ್ದಾರಂತೆ. ಈ ಅಜ್ಜಿಗೆ ದೇವರು ಉತ್ತಮ ಆರೋಗ್ಯ ಮತ್ತು ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bahrain foreign minister visit Mangalore Thursday and meet her grandmother says in Instagram
Please Wait while comments are loading...