ಮಹಿಳೆಯರ ಮೊಗದಲ್ಲಿ ನಗು ತರದ ಮಲ್ಲಿಗೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 22 : ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲ್ಲಿಗೆ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ದರ ಏರಿಕೆಯಾಗಿದೆ, ಆದರೆ, ಇದರಿಂದ ಬೆಳೆಗಾರರಿಗೆ ಯಾವುದೇ ಲಾಭವಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಮಲ್ಲಿಗೆ ಕರಾವಳಿ ಜನರ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಕರಾವಳಿ ಮಣ್ಣಿನಲ್ಲಿ ಬೆಳೆಯುವ ಮಲ್ಲಿಗೆಯನ್ನು ಶಂಕರಪುರ ಮಲ್ಲಿಗೆ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂದಾಜು 371 ಹೆಕ್ಟೇರ್ ಭೂಮಿಯಲ್ಲಿ 16,000ಕ್ಕೂ ಅಧಿಕ ಮಂದಿ ಮಲ್ಲಿಗೆ ಕೃಷಿ ಮಾಡುತ್ತಾರೆ.[ಮಾರುಕಟ್ಟೆಯಲ್ಲಿ ಕುಸಿದ ಶಂಕರಪುರ ಮಲ್ಲಿಗೆ ದರ]

Jasmine

ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ ರೂ. 820ಗಳ ವರೆಗೆ ಏರಿಕೆಯಾಗಿದ್ದು ಮಲ್ಲಿಗೆ ಹೂವಿದ್ದವರ ಮೊಗದಲ್ಲಿ ಹೂ ನಗೆಮೂಡಿಸಿದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ದರ ಕಡಿಮೆಯಾಗುವುದರಿಂದ ನಿರಂತರ ಮಲ್ಲಿಗೆ ಮೂಡಿಗೇರಿಸಬಹುದೆಂಬ ನಿರೀಕ್ಷೆ ಹೊತ್ತಿದ್ದ ಮಹಿಳೆಯರ ಮೊಗದಲ್ಲಿ ನಿರಾಶೆ ಮೂಡಿದೆ.[ಪುಷ್ಪಲೋಕದ ವಿಸ್ಮಯ ಬ್ರಹ್ಮಕಮಲ]

ನಮ್ಮ ಗಿಡಗಳಲ್ಲಿ ಮಲ್ಲಿಗೆ ಹೂವು ಸಿಗುತ್ತಿಲ್ಲ. ಸೀಸನ್‌ನಲ್ಲಿ ನಾವು ಪ್ರತಿದಿನ 50 ಚೆಂಡು ಮಲ್ಲಿಗೆ ಮಾರುಕಟ್ಟೆಗೆ ನೀಡುತ್ತಿದೆವು. ಈಗ ದಿನಕ್ಕೆ ಕೇವಲ 100 ಮೊಗ್ಗು ಮಾತ್ರ ನೀಡುತ್ತಿದ್ದೇವೆ. ಕೆಲವೊಮ್ಮೆ ಅದು ಕೂಡಾ ಸಿಗುವುದಿಲ್ಲ ಇದರಿಂದ ಮಾರುಕಟ್ಟೆಯಲ್ಲೂ ಮಲ್ಲಿಗೆ ಹೂ ಸಿಗುತ್ತಿಲ್ಲ ಎನ್ನುತ್ತಾರೆ ಮಲ್ಲಿಗೆ ಬೆಳೆಗಾರರು.

ವಿವಿಧ ಮಲ್ಲಿಗೆಗೆ ವಿವಿಧ ಹೆಸರು : ಕುಂದಾಪುರ ಪ್ರದೇಶದಲ್ಲಿ ಬೆಳೆಯುವ ಮಲ್ಲಿಗೆ ಹೂಗಳಿಗೆ ಭಟ್ಕಳ ಮಲ್ಲಿಗೆ ಎಂದು ಕರೆಯುತ್ತಾರೆ. ಶಂಕರಪುರ, ಶಿರ್ವ ಪ್ರದೇಶದಲ್ಲಿ ಬೆಳೆಯನ್ನು ಶಂಕರಪುರ ಮಲ್ಲಿಗೆ ಎಂದೂ, ಪುತ್ತೂರು, ಸುಳ್ಯ ಭಾಗದಲ್ಲಿ ಬೆಳೆಯುವ ಮಲ್ಲಿಗೆಯನ್ನು ಮಂಗಳೂರು ಮಲ್ಲಿಗೆ ಎಂದು ಕರೆಯುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shankarapura Mallige farmers of Dakshina Kannada worried after Jasmine prices have crashed.
Please Wait while comments are loading...