ಅಯ್ಯೋ ವಿಧಿಯೇ! ಸೀಮೆ ಎಣ್ಣೆ ಕುಡಿದು ಮಗು ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಎಪ್ರಿಲ್ 19: ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸೀಮೆ ಎಣ್ಣೆ ಕುಡಿದು ಒಂದು ವರ್ಷ ಎರಡು ತಿಂಗಳ ಮಗು ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಸಜೀಪಮೂಡ ಗ್ರಾಮದ ಸುಭಾಷ್ ನಗರದ ಜಲೀಲ್ ಎಂಬುವವರ ಪುತ್ರಿ ಆಯಿಷಾ ಜಯಿಷಾ ಮೃತಪಟ್ಟ ಮಗು. ಜಲೀಲ್ ತಮ್ಮ ಕಾರ್ ನಲ್ಲಿದ್ದ ಡಾಮರನ್ನ ತೆಗೆಯಲು ಸೀಮೆ ಎಣ್ಣೆಯನ್ನು ಖರೀದಿಸಿ ಮನೆಗೆ ತಂದಿದ್ದರು. ಬಳಕೆ ಮಾಡಿ ಉಳಿದ ಸೀಮೆ ಎಣ್ಣೆಯನ್ನು ಸಣ್ಣ ಬಾಟಲಿಯಲ್ಲಿ ಮನೆಯೊಳಗಿಟ್ಟಿದ್ದರು.[ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಕಾರ್ಮಿಕರಿಗೆ ಸಿಹಿ ಸುದ್ದಿ!]

 Baby girl dies after drinking kerosene in Bantwal

ಆದರೆ ಇದನ್ನು ಅರಿಯದ ಮಗು ಆಟವಾಡುತ್ತಾ ಸೀಮೆ ಎಣ್ಣೆ ಕುಡಿದಿದೆ. ವಿಚಾರ ಗೊತ್ತಾದ ಕೂಡಲೇ ಮನೆಯವರು ಮಂಗಳೂರಲ್ಲಿರುವ ಖಾಸಗಿ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ಕೂಡಾ ದಾಖಲಾಗಿದೆ.[ಸದಾನಂದ ಗೌಡರಿಂದ ರಾಷ್ಟ್ರಪತಿಗಳಿಗೆ ಕಂಬಳ ಮಸೂದೆ ಸಲ್ಲಿಕೆ]

ಜಗತ್ತು ಹೇಗಿದೆ ಅನ್ನುವುದೇ ಗೊತ್ತಿಲ್ಲದೆ, ಸಣ್ಣಗೆ ನಗೆ ಬೀರುತ್ತಾ, ತನ್ನದೇ ಭಾಷೆಯಲ್ಲಿ ಮಾತನಾಡುತ್ತಾ, ಆಟವಾಡುತ್ತಾ ಹೆತ್ತವರನ್ನ, ಮನೆಯವರನ್ನ ನಲಿದಾಡಿಸುತ್ತಿದ್ದ ಮಗು ಸತ್ತಿದ್ದರಿಂದ ಮನೆಯವರೆಲ್ಲಾ ದುಃಖತಪ್ತರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One year and two month old baby girl died after drinking kerosene accidentally here in Sajipamudu village of Bantwal, Mangaluru.
Please Wait while comments are loading...