ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಷಕರ ಬೇಜವಾಬ್ದಾರಿತನ: ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ ಮಗು, ಮುಂದೇನಾಯ್ತು?

|
Google Oneindia Kannada News

ಮಂಗಳೂರು, ಜನವರಿ 01: ಪೋಷಕರ ಬೇಜವಾಬ್ದಾರಿತನಕ್ಕೆ ಮಗು ನೀರಿಗೆ ಬಿದ್ದು, ಆನಂತರ ಪಾರಾದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುತ್ತೂರಿನ ಕುಂಬ್ರದಲ್ಲಿ ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲ್ ಬಳಿ ಮಗುವನ್ನು ಬಿಟ್ಟು ಪೋಷಕರು ಬೇಜವಾಬ್ದಾರಿ ಮೆರೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾರ್ಟಿಯಲ್ಲಿ ಭಾಗವಹಿಸಿದ್ದ ಪೋಷಕರು ಮೊಬೈಲ್ ನಲ್ಲಿ ತಲ್ಲಿನರಾಗಿದ್ದ ಸಂದರ್ಭದಲ್ಲಿ ಹಠಾತ್ತನೆ ನೀರಿಗೆ ಬಿದ್ದ ನಾಲ್ಕು ವರ್ಷ ಪ್ರಾಯದ ಮಗು ಸುಮಾರು 2 ನಿಮಿಷಗಳ ಕಾಲ ನೀರಿನಲ್ಲಿ ಒದ್ದಾಟ ನಡೆಸಿದೆ.

ಭಾರೀ ಚರ್ಚೆಗೆ ಗ್ರಾಸವಾದ ಕೆಆರ್ ಎಸ್ನಲ್ಲಿ ಮೋಜು ಮಸ್ತಿ ವೀಡಿಯೋ ಈಗಿನದಲ್ಲ!ಭಾರೀ ಚರ್ಚೆಗೆ ಗ್ರಾಸವಾದ ಕೆಆರ್ ಎಸ್ನಲ್ಲಿ ಮೋಜು ಮಸ್ತಿ ವೀಡಿಯೋ ಈಗಿನದಲ್ಲ!

ಇದನ್ನು ಗಮನಿಸಿದ ಮಗುವಿನ ತಾಯಿ ಬೊಬ್ಬೆ ಹೊಡೆದ ಪರಿಣಾಮ ಮಗುವನ್ನು ರಕ್ಷಿಸಲಾಗಿದೆ . ಮೂರು ಬಾರಿ ಮಗು ಮುಳುಗಿ ಮೇಲೇಳುತ್ತ ಸಹಾಯಕ್ಕೆ ಕೈಚಾಚುತ್ತಿರುವುದನ್ನು ಮಗುವಿನ ತಾಯಿ ಗಮನಿಸಿದ್ದಾರೆ. ಕೂಡಲೇ ಅಲ್ಲಿದ್ದ ವ್ಯಕ್ತಿಯೋರ್ವ ನೀರಿಗೆ ಧುಮುಕಿ ಮಗುವನ್ನು ರಕ್ಷಿಸಿದ್ದಾರೆ.

Baby fighting for life in pool, video clip viral in social media

ಮಗು ಸಾಕಷ್ಟು ನೀರು‌ ಕುಡಿದಿದ್ದ ಕಾರಣ ಅಸ್ವಸ್ಥಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ನಡೆಯುವ ಸಂದರ್ಭದಲ್ಲಿ ಸ್ವಿಮಿಂಗ್ ಪೂಲ್ ನಲ್ಲಿ ಹಲವು ಮಂದಿ ಇದ್ದರೂ ನೀರಿಗೆ ಬಿದ್ದ ಮಗುವಿನ ಒದ್ದಾಟ ಯಾರೂ ಗಮನಿಸದೇ ಇರುವುದು ಬೇಸರದ ಸಂಗತಿ.

Baby fighting for life in pool, video clip viral in social media

ವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪ!ವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪ!

ಪುತ್ತೂರಿನ ಕುಂಬ್ರ ಪರ್ಲಡ್ಕ ಬಿಗ್ರೋಸ್ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ಬಳಿ ಡಿಸೆಂಬರ್ 26 ರಂದು ಈ ಘಟನೆ ನಡೆದಿದ್ದ, ಇದೀಗ ಸಿಸಿಟಿವಿಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Carelessness of parents caught on cctv in a resort near Puttur. Video clip of baby fighting for life in pool viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X