ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಕುದುರೆ ಸವಾರಿ ತರಬೇತಿ ಅಕಾಡೆಮಿ ಆರಂಭ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ. 05 : ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಹೊಸ ಕಲ್ಪನೆಯ ಅನುಭವ ನೀಡಲು ಹಾರ್ಸ್ ರೇಡಿಂಗ್ ಅಕಾಡೆಮಿ ಜನವರಿ 01ರಂದು ಆರಂಭಗೊಂಡಿದೆ.

ನಗರದ ಫಳ್ನೀರ್ ಹೋಟೆಲ್ ಮೋತಿ ಮಾಲ್ ಎದುರಿನ ಮಿಲಾಗ್ರಿಸ್ ಕಾಲೇಜ್ ಪಕ್ಕದ ಜಾಗದಲ್ಲಿ ಹಾರ್ಸ್ ರೇಡಿಂಗ್ ಅಕಾಡೆಮಿ ಆರಂಭಿಸಲಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಕುದುರೆ ಸವಾರಿ ತರಬೇತಿಯನ್ನು ಈ ಅಕಾಡೆಮಿ ನೀಡಲಿದೆ.

ಈ ಕುದುರೆ ಅಕಾಡೆಮಿಯನ್ನು ಹಾಸನ ಜಿಲ್ಲೆಯ ಸಕಲೇಶಪುರದ ಅವಿನಂದ್ ಅಚ್ಚನಹಳ್ಳಿ ಆರಂಭಿಸಿದ್ದಾರೆ. ರೇಡಿಂಗ್ ಬಾಯ್ ರಸೂಲ್ ಖಾನ್ ತರಬೇತಿ ನೀಡಲಿದ್ದಾರೆ.

Avinand Achanahally opens Horse Riding academy in Mangaluru.

ಪ್ರತಿದಿನ ಬೆಳಿಗ್ಗೆ 6ರಿಂದ 8.30ಮತ್ತು ಸಂಜೆ 4.30ರಿಂದ 7ರ ತನಕ ಕುದುರೆ ಸವಾರಿ ಕಲಿಸಲಾಗುತ್ತದೆ. ತಿಂಗಳಿಗೆ 22 ಕ್ಲಾಸ್, ಪ್ರತಿ ತರಗತಿಯಲ್ಲಿ 45 ನಿಮಿಷ ಕುದುರೆ ಸವಾರಿ, ಭಾನುವಾರ ಮಾತ್ರ ನಗರ ಸವಾರಿ ನಡೆಯಲಿದೆ.

6 ವರ್ಷದ ಮಕ್ಕಳಿನಿಂದ ಹಿಡಿದು 60 ವರ್ಷದವರಿಗೆ ಕುದುರೆ ಸವಾರಿ ಕಲಿಸಲಾಗುತ್ತದೆ. ಮಕ್ಕಳಿಗಾಗಿಯೇ ಸಣ್ಣ ಗಾತ್ರದ ಪೋನಿ ಹಾರ್ಸ್ ಇದೆ.

ಈ ಅಕಾಡೆಮಿ ಆರಂಭಿಸಿದ ಅವಿನಂದ್ ಅವರು ಹಿಂದೆ ಸೌದಿ ಅರೇಬಿಯಾದಲ್ಲಿ ಕುದುರೆಗಳನ್ನು ಪಳಗಿಸುತ್ತಿದ್ದು, 25 ವರ್ಷಗಳ ಅನುಭವ ಹೊಂದಿದ್ದಾರೆ.

ಅಕಾಡೆಮಿಯಲ್ಲಿ ವರುಣ, ಮಿಂಟೋ, ರಾಕಿ ಮಅತ್ತು ರೆಡ್ ಬೋಲ್ಟ್ ಹೆಸರಿನ ಕುದುರೆಗಳಿವೆ. ಮುಂಬರುವ ದಿನಗಳಲ್ಲಿ ವೈಭವಿ, ಅರ್ಮಾನ್, ಪೀಯುಶ್ ಹೆಸರಿನ ಕುದುರೆಗಳನ್ನು ತರಿಸಲಾಗುತ್ತಿದೆ.

ಈ ತರಬೇತಿ ಅಕಾಡೆಮಿ ಜನವರಿ 1ರಂದು ಆರಂಭಗೊಂಡಿದ್ದು. ಈಗಾಗಲೇ ಐದು ಮಂದಿ ಸೇರ್ಪಡೆಯಾಗಿದ್ದಾರೆ. ತರಬೇತಿ ವೇಳೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವಿನಂದ್ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

English summary
Avinand Achanahally opens Horse Riding academy in Mangaluru. Kudla to have its first Horse Academy, where you can get trained how to ride a horse under the leadership and guidance of Avinand Achanahally
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X