ಚಾರ್ಮಾಡಿಯಲ್ಲಿ ಬಾವಿಗೆ ಬಿದ್ದ ರಿಕ್ಷಾ: ಮಗು ದುರ್ಮರಣ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 21 : ಆಟೋ ರಿಕ್ಷಾವೊಂದು ಬಾವಿಗೆ ಬಿದ್ದ ಪರಿಣಾಮ ರಿಕ್ಷಾದಲ್ಲಿದ್ದ ಮಗು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ನಡೆದಿದೆ.

ಕಲಂದರ್ ಎಂಬುವವರು ತಮ್ಮ ಆಟೋ ರಿಕ್ಷಾವನ್ನ ಚಾರ್ಮಾಡಿಯ ದೇವಸ್ಥಾನ ಬಳಿಯಿರುವ ಅಂಗನವಾಡಿ ಎದುರು ನಿಲ್ಲಿಸಿದ್ದರು. ಈ ರಿಕ್ಷಾದಲ್ಲಿ ನಾಲ್ಕು ವರ್ಷದ ಖಲೀಲ್ ಎಂಬ ಮಗು ಇತ್ತು. ಉಳಿದ ಮಕ್ಕಳನ್ನು ಕರೆ ತರಲು ಅವರು ತೆರಳಿದ್ದರು. ಮಗು ಆಟವಾಡುತ್ತಿದ್ದ ವೇಳೆ ಆಟೋ ರಿಕ್ಷಾ ನ್ಯೂಟ್ರಲ್ ಆಗಿ ಆವರಣದ ಪಕ್ಕದಲ್ಲಿದ್ದ ಬಾವಿಗೆ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಸ್ಠಳದಲ್ಲೇ ಮಗು ಸಾವನ್ನಪ್ಪಿದೆ.

boy who died in an auto

ಈ ಕುರಿತು ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇನ್ನು ಆಟೋ ಚಾಲಕ ತನ್ನ ತನ್ನ ಮಗುವಿಗೆ ತನ್ನ ಜೀವನ ನಿರ್ವಹಣೆಗಿದ್ದ ಆಟೋವೇ ಕಾರಣವಾಯಿತಲ್ಲ ಎಂದು ಸಂಕಟದಲ್ಲಿದ್ದಾರೆ. ಅಲ್ಲದೆ ಶಾಲಾ ವಲಯದಲ್ಲಿ ಆಟೋವನ್ನು ನಿಲ್ಲಿಸಿದ ಹಿನ್ನೆಲೆ ಪೊಲೀಸರು ವಿಚಾರಿಸಿ ಸಾಂತ್ವನ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
auto was fall in well, There was a boy who died in an auto in belthangadi, mangaluru. Police have registered a case.
Please Wait while comments are loading...