ಉಪ್ಪಿನಂಗಡಿಯ ಫಾರೂಕ್ ಆಟೋಗೂ ಸೈ, ಉಚಿತ ಸೇವೆಗೂ ಸೈ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಪ್ಪಿನಂಗಡಿ, ಡಿಸೆಂಬರ್ 18: ರಿಕ್ಷಾ ಚಾಲಕರ ಬಗ್ಗೆ ಹೆಚ್ಚಿನವರಿಗೆ ಅಸಡ್ಡೆಯಿದೆ. ಆದರೆ ಕರಾವಳಿಯ ಆಟೋ ಚಾಲಕನೊಬ್ಬ ಚಾಲನೆಗೂ ಸೈ, ಸಮಾಜ ಸೇವೆ ಮಾಡೋಕೇ ಸೈ ಎಂದು ತುರ್ತುವೇಳೆ ಉಚಿತ ಸೇವೆಗೆ ಮುಂದಾಗಿದ್ದಾರೆ.

ಹೌದು, ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲೊಬ್ಬರು ರಿಕ್ಷಾ ಚಾಲಕರೊಬ್ಬರಿದ್ದಾರೆ. ಅವರೇ ಉಮರ್ ಫಾರೂಕ್. ಇವರಿಗೆ ರಿಕ್ಷಾ ಚಾಲನೆ ದುಡಿಮೆ. ಬಾಡಿಗೆಗೆ ಹೋಗಿ ಸಿಗುವ ಅಲ್ಪಸ್ಪಲ್ಪ ಹಣದಲ್ಲಿ ಜೀವನ ಸಾಗಿಸುತ್ತಾರೆ. ದುರಾಸೆ ಪಡದ ಉಮರ್ , ತುರ್ತು ಪರಿಸ್ಥಿತಿಯಲ್ಲಿ ದೇವರ ಹಾಗೇ ಬಂದು ಜನರ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

ಉಪ್ಪಿನಂಗಡಿ ಬೆದ್ರೋಡಿ ನಿವಾಸಿ ಉಮರ್ ಫಾರೂಕ್ ತನ್ನ ಸುತ್ತಮುತ್ತಲಿನ ಜನರ ಪಾಲಿಗೆ ಅಪತಾಂದ್ಬವ. ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡುತ್ತಾರೆ.

farooque

ಸುಮಾರು ಒಂದೂವರೆ ವರ್ಷದಿಂದ ತಮ್ಮ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿನ ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಐದು ಕಿ.ಮೀ ವರೆಗೆ ಉಚಿತ ಆಟೋ ಸೇವೆ ನೀಡುತ್ತಿರುವ. ಇನ್ನು ಇವರನ್ನು ಪ್ರೀತಿಯಿಂದ ಎಲ್ಲರು ಫಾರೂಕ್ ಜಿಂದಗಿ ಇಂದು ಕರೆಯುತ್ತಾರೆ

ಇವರು ತಮ್ಮ ಸಂಸಾರದ ಬಂಡಿಯ ಜೊತೆಗೆ ಒಂದಷ್ಟು ಸಮಯವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಜೊತೆಗೆ ಇವರ o+ ರಕ್ತ ಬೇಕೆಂದರೆ ಸಹ ರಕ್ತದಾನ ಮಾಡುತ್ತಾರೆ. ಪತ್ನಿ ಹೆರಿಗೆ ಸಮಯದಲ್ಲಿ ಅನುಭವಿಸಿದ ನೋವು, ಸಂಕಟವನ್ನ ನೋಡಿದ ಇವರು ಇನ್ನು ಮುಂದೆ ಯಾವ ಮಹಿಳೆ ಇಂತಹ ಸಂಕಟ ಅನುಭವಿಸಬಾರದು ಎಂದು ನಿರ್ಧರಿಸಿದ ಉಮರ್ , ತುರ್ತು ಪರಿಸ್ಥಿತಿಯಲ್ಲಿ ಉಚಿತ ಆಟೋ ಸೇವೆ ನೀಡಲು ತೀರ್ಮಾನಿಸಿದರು.

farooque

ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಉಮರ್ ಫಾರೂಕ್, ಜನರ ಸೇವೆಯೇ ಜನಾರ್ಧನ ಸೇವೆ. ನಾನು ಏನೂ ದೊಡ್ಡ ಸಾಧನೆ ಮಾಡಿಲ್ಲ. ಆದರೆ ಸ್ವಲ್ಪ ಅಳಿಲು ಸೇವೆ ಮಾಡುವ ನಿಟ್ಟಿನಲ್ಲಿ ಈ ಸೇವೆ ಮಾಡೋಕೇ ನಿರ್ಧರಿಸಿದೆ ಅಂದರು.

ಒಟ್ಟಿನಲ್ಲಿ ಗರ್ಭಿಣಿಯರಿಗೆ ಉಚಿತ ಸೇವೆ ಕೊಡುವ ಮೂಲಕ ಜನ ಮನ ಗೆದ್ದಿರುವ ಫಾರೂಕ್ ರವರನ್ನು ನಿಜಕ್ಕೂ ಮೆಚ್ಚಲೇಬೇಕು. ಪ್ರಯಾಣಿಕರಿಂದ ಮನಸೋ ಇಚ್ಚೆಯಿಂದ ಹಣ್ಣ ವಸೂಲಿ ಮಾಡುವ ಕೆಲ ಆಟೋ ಚಾಲಕರ ಮಧ್ಯೆ ಫಾರೂಕ್ ವಿಶೇಷ ವ್ಯಕ್ತಿಯಾಗಿ ಗುರುತಿಸುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Auto driver umar farooque has been offering free services to pregnant women's as a token of love. He not only provides free service but also donates his own blood o+ during the emergency.
Please Wait while comments are loading...