ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಗಳಗುಳಿಯಲ್ಲಿ ಕಲ್ಲಿನ ಲಾರಿಗಳಿಂದ ಹಾಳಾದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 20: ಕಲ್ಲಿನ ಲಾರಿಗಳು ಓಡಾಡುವುದರಿಂದ ಮಂಗಳೂರಿನ ನೆಗಳಗುಳಿ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದು ಸ್ಥಳೀಯರು ಪರಿತಪಿಸವಂತಾಗಿದೆ.

ಈ ಸಂಬಂಧ ಲಾರಿಗ ಓಡಾಟ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನೆಗಳಗುಳಿ ನಿವಾಸಿಗಳು ಅಳಿಕೆ ಗ್ರಾಮಪಂಚಾಯತ್ ಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಘನ ವಾಹನಗಳ ಸಂಚಾರದಿಂದ ನೆಗಳಗುಳಿ ರಸ್ತೆ ಹಾಳಾಗುತ್ತದ್ದು ,ದುರಸ್ತಿ ಬಳಿಕವೂ ಕಲ್ಲಿನ ಲಾರಿಗಳು ಓಡಾಟಕ್ಕೆ ಮುಂದಾಗಿರುವುದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

ಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದ ಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದ

ಕೋಟೆತ್ತಡ್ಕದಲ್ಲಿರುವ ಅಳಿಕೆ ಗ್ರಾಮ ಪಂಚಾಯತಿ ನಿವೇಶನ ಸಮತಟ್ಟು ಮಾಡುವ ನೆಪದಲ್ಲಿ ಹಲವು ಲಾರಿಗಳು ನೆಗಳಗುಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವು.ಲಾರಿ ತಡೆದು ಪ್ರತಿಭಟನೆಯ ಬಳಿಕ, ರಸ್ತೆ ದುರಸ್ಥಿ ಮಾಡಿ ಪುನ: ಲಾರಿಗಳು ಓಡಾಡುತ್ತಿದ್ದವು,ಇದನ್ನು ತಕ್ಷಣ ಸ್ಥಗಿತ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

Authorities urge: Sorry status of road in Negalaguli

ಮಳೆಗಾಲ ಕಳೆದ ಬಳಿಕ ಲಾರಿ ಸಂಚರಿಸಲಿ ,ಅಲ್ಲಿಯವರೆಗೆ ಸ್ಥಗಿತ ಮಾಡಿ ಎಂದರೂ ಕೇಳದೆ ಲಾರಿ ಓಡಿಸಿ ರಸ್ತೆ ಸಮಸ್ಯೆಯಾಗಿದೆ.ಈಗ ಮತ್ತೆ ಸ್ಥಳೀಯರಲ್ಲಿ ಒಂದು ಮಾತು ಕೇಳದೆ ಲಾರಿ ಓಡಿಸುವುದು ಸರಿಯಲ್ಲ,ಕಲ್ಲಿನ ಲಾರಿಗಳ ಓಡಾಟದಿಂದ ರಸ್ತೆ ಪೂರ್ತಿ ಹಾಳಾಗುತ್ತದೆ.ಈ ಪ್ರದೇಶದಲ್ಲಿ ಕಲ್ಲಿನ ಕೋರೆ ಲಾರಿಗಳ ಓಡಾಟವನ್ನು ನಿಷೇದಿಸುತ್ತೇವೆ ಎಂದು ಸ್ಥಳೀಯರು ಹೇಳಿದರು.

ಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿ ಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿ

ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು,ಸದಸ್ಯರಾದ ಮುಕಾಂಬಿಕಾ ಎಂ.ಭಟ್,ಮೋನಪ್ಪ ಎರುಂಬು,ಜಗದೀಶ ಶೆಟ್ಟಿ ಮುಳಿಯಗುತ್ತು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ,ಗ್ರಾಮಕರಣಿಕ ಪ್ರಕಾಶ್,ಗ್ರಾಮ ಸಹಾಯಕ ಜಗನ್ನಾಥ ಎರುಂಬು ಸಮ್ಮುಖದಲ್ಲಿ ಸ್ಥಳೀಯರಾದ ರಮೇಶ್ ನಾಯ್ಕ,ಸುಂದರ ನಾಯ್ಕ,ಶೀನ ನಾಯ್ಕ,ಕಿಟ್ಟ ನಾಯ್ಕ,ಭಾಲಕೃಷ್ಣ ನಾಯ್ಕ,ರಮೇಶ್ ರೈ,ಕರುಣಾಕರ ರೈ ಮತ್ತಿತರ ಮುಂದಾಳುತ್ವದಲ್ಲಿ ಮನವಿ ನೀಡಲಾಯಿತು.

English summary
Negalaguli villagers have submitted a memorandum to Alike gram panchayat to take repair work which is destroyed by granite transportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X