ಪುತ್ರಿಗೆ ವಿಷವಿತ್ತು ಹತ್ಯೆಗೆ ಯತ್ನ: ತಂದೆ ನಿಧನ, ತಾಯಿ ಪಾರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಜನವರಿ 31: ಪುತ್ರಿಗೆ ವಿಷ ನೀಡಿ ಹತ್ಯೆಗೆ ಯತ್ನಿಸಿದ ದಂಪತಿ ವಿಫಲವಾದಾಗ ಸ್ವತಃ ತಾವೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಪತಿ ಮೃತಪಟ್ಟು ಪತ್ನಿ ಗಂಭೀರ ಸ್ಥಿಯಲ್ಲಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೇಳ ಪೆರಿಯಡ್ಕದ ಬಾಬು ಪಾಟಾಳಿ ( 65) ಮೃತಪಟ್ಟವರು. ಪತ್ನಿ ಲೀಲಾವತಿ (60) ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲು. ಬಾಬು ಪಾಟಾಳಿ ತನ್ನ ಪುತ್ರಿ ನಿರ್ಮಲ(೧೮) ರಿಗೆ ವಿಷ ನೀಡಿ ಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಆಕೆ ತಪ್ಪಿಸಿಕೊಂಡ ಪರಿಣಾಮ ಪುತ್ರಿ ಅಪಾಯದಿಂದ ಪಾರಾಗಿದ್ದಾಳೆ. ಬಳಿಕ ಬಾಬು ಪಾಟಾಳಿ ಮತ್ತು ಪತ್ನಿ ಲೀಲಾವತಿ ವಿಷ ಸೇವಿಸಿದ್ದರು.[ಕೋಲಾರ: ಹೆಂಡತಿ, ಮಕ್ಕಳಿಗೆ ವಿಷ ನೀಡಿದ ಸೈನಿಕ]

Attempt to murder daughter fails Couple takes poison, one dies at Kasargod.

ನಿರ್ಮಲ ಕೆಲ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿದ್ದಾರೆ. ಇದರಿಂದ ಮನನೊಂದು ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಆದರೆ ತಡವಾಗಿ ಕೃತ್ಯ ಬೆಳಕಿಗೆ ಬಂದಿದೆ. ನೆರೆಮನೆಯವರು ಗಮನಿಸಿ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಬು ಪಾಟಾಳಿ ಮೃತಪಟ್ಟರು. ಕೃತ್ಯ ನಡೆಯುವ ಸಂದರ್ಭದಲ್ಲಿ ಪುತ್ರ ಹರೇಶ್ ಮನೆಯಲ್ಲಿರಲಿಲ್ಲ. ಇನ್ನೋರ್ವ ಪುತ್ರಿ ಸುನಿತಾ ವಿವಾಹವಾಗಿ ಪತಿ ಮನೆಯಲ್ಲಿದ್ದಾಳೆ.ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .


ಮಂಗಳೂರಿನಲ್ಲಿ ಬಿತ್ತು ಮನೆಗೆ ಬೆಂಕಿ ಛಾವಣೆ ಭಸ್ಮ

Attempt to murder daughter fails Couple takes poison, one dies at Kasargod.

ಮಂಗಳೂರು: ಉಳ್ಳಾಲ ಸಮೀಪದ ಉಳಿಯದಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಛಾವಣೆ ಸಂಪೂರ್ಣ ಸುಟ್ಟು ಅಪಾರ ಹಾನಿ ಸಂಭವಿಸಿದೆ.

Attempt to murder daughter fails Couple takes poison, one dies at Kasargod.

ಘಟನೆಯಿಂದ ಮನೆಯೊಳಗಿದ್ದ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ನಗ, ನಗದು ಹಾಗೂ ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳು ಸುಟ್ಟು ಹೋಗಿದೆ. ಮನೆಗೆ ಹೇಗೆ ಬೆಂಕಿ ತಗುಲಿತು ಎಂಬ ನಿಖರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

Attempt to murder daughter fails Couple takes poison, one dies at Kasargod.

ಉಳಿಯ ಭಾಸ್ಕರ ಸಪಲ್ಯ ಎಂಬವರ ಹಂಚಿನ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲೆಗೆ ಮನೆಯ ಮೇಲ್ಛಾವಣಿಯು ಸುಟ್ಟು ಹೋಗಿದೆ. ಬೆಂಕಿ ಬಿದ್ದ ತಕ್ಷಣ ಮನೆ ಮಂದಿಗೆ ತಿಳಿದು ಹೊರಗೆ ಓಡಿ ಬಂದಿದ್ದು ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Attempt to murder daughter fails - Couple takes poison, one dies at Kasargod. As daughter was mentally ill parents wanted to kill her by serving poison but Attempt to murder daughter fails, the father dies mother critical at the hospital./ A House in Ullal caught fire in Mangaluru, resulting in huge loss of money and documents.
Please Wait while comments are loading...