ಉಪ್ಪಿನಂಗಡಿ : ಆಸ್ತಿ ವಿವಾದದಲ್ಲಿ ತಂದೆಯನ್ನೇ ಕೊಂದ ಮಗ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 16 : ಜಾಗದ ವಿಚಾರವಾಗಿ ತಂದೆ ಮಗನ ನಡುವೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿ ಕುದ್ಲೂರು ಮನೆ ನಿವಾಸಿ ಆದಂ (55) ಎನ್ನುವಾತ ಮಗನಿಂದ ಹತ್ಯೆಗೀಡಾದ ದುರ್ದೈವಿ. ಜಾಗದ ವಿಚಾರವಾಗಿ ಆದಂ ಹಾಗೂ ಅವರ ಮಗ ಅಬೂಬಕರ್ ನಡುವೆ ಮನಸ್ತಾಪವಿತ್ತು.[ಉಪ್ಪಿನಂಗಡಿ: ಯುವತಿಯೊಂದಿಗೆ ಮಾತನಾಡಿದಕ್ಕೆ ಯುವಕನ ಮೇಲೆ ಹಲ್ಲೆ]

Asset dispute son killed his father at uppinangadi

ಶನಿವಾರ ಈ ಸಂಬಂಧ ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿರುವ ಮಗನ ತರಕಾರಿ ಅಂಗಡಿಗೆ ಆದಂ ಬಂದು ಆತನೊಂದಿಗೆ ಮಾತಿನ ಚಕಮಕಿಗಿಳಿದಿದ್ದರು.

ಮಾತು ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಮಗ ಅಂಗಡಿಯಲ್ಲಿದ್ದ ರಾಡ್ ನಿಂದ ತಂದೆಯ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ತಂದೆಯನ್ನು ಕೂಡಲೇ ವಾಹನವೊಂದನ್ನು ಗೊತ್ತುಪಡಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಆದಂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Asset dispute son killed his father at uppinangady Puttur taluk on Sunday January 15.
Please Wait while comments are loading...