ಉರ್ವಾ ಪೊಲೀಸ್ ಠಾಣೆ ಎಎಸ್ ಐ ಮೇಲೆ ಹಲ್ಲೆ, ಆರೋಪಿಗೆ ಜಾಮೀನು

Posted By:
Subscribe to Oneindia Kannada

ಮಂಗಳೂರು, ಜೂನ್ 19 : ಎರಡು ತಿಂಗಳ ಹಿಂದೆ ಉರ್ವಾ ಪೊಲೀಸ್ ಠಾಣೆಯ ಎಎಸ್ ಐ ಐತಪ್ಪ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಗೆ ಸೋಮವಾರ ಮಂಗಳೂರು 3ನೇ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ ನ್ಯಾಯಾಲಯ ಜಾಮೀನು ನೀಡಿದೆ.

ಮೊಹಮ್ಮದ್ ನಿಯಾಜ್ (20) ಹಾಗೂ ಈತನ ಸ್ನೇಹಿತ ಸೇರಿಕೊಂಡು ಕಳೆದ ಏಪ್ರಿಲ್ 05ರಂದು ಲೇಡಿ ಹಿಲ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಎಎಸ್ ಐ ಐತಪ್ಪ ಅವರಿಗೆ ರಾಡ್ ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

Assaulted on Urwa ASI, accused gets bail

ತೀವ್ರ ಗಾಯಗೊಂಡ ಐತಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆರೋಪಿ ಮೊಹಮ್ಮದ್ ನಿಯಾಜ್ ಎಂಬಾತನಿಗೆ ನ್ಯಾಯಾಲಯವು ಜಾಮೀನು ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
ASI of Urwa police station Aithappa, who suffered serious injuries to his head after two unidentified motor bike-borne men attacked him the accused is now released on bail.
Please Wait while comments are loading...