ಮಂಗಳೂರು, ಅಶ್ವತ್ಥ ಕಟ್ಟೆಯಲ್ಲಿ ದನದ ರುಂಡ ಪತ್ತೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು ಡಿಸೆಂಬರ್ 21: ತಾಲ್ಲೂಕಿನ ಗುರುಪುರ ಕೈಕಂಬ ಸಮೀಪದ ಕಂದಾವರದ ಮೂಡುಕರೆ ಬೈಲುಮಾಗಣೆ ಎಂಬಲ್ಲಿ ಇಲ್ಲಿನ ಧೂಮಾವತಿ ಕ್ಷೇತ್ರದ ಸಮೀಪ ಇರುವ ಅಶ್ವತ್ಥ ಕಟ್ಟೆಯಲ್ಲಿ ದನದ ರುಂಡ ಪತ್ತೆಯಾಗಿದೆ. ದನದ ರುಂಡವನ್ನು ಯಾರು ತಂದು ಹಾಕಿದರು ತಿಳಿದು ಬಂದಿಲ್ಲ.[ಕನಸಿನಲ್ಲಿ ದೇವಿ ಹೇಳಿಕೆ : ರುಂಡ ಚಂಡಾಡಿದ ಯುವಕ]

Ashwath Deck To locate the cow's Trunk in mangaluru

ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ನಡೆಸಿದ ಈ ಕುಕೃತ್ಯದಿಂದ ಪರಿಸರದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಜರಂಗದಳದ ಮುಖಂಡ ಭುಜಂಗ ಕುಲಾಲ್ ಸಮೇತ ಹಲವಾರು ಮಂದಿ ಸ್ಥಳಕ್ಕೆ ಧಾವಿಸಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದರು. ಕಂದಾವರ ಮೂಡುಕೆರೆ ಬೈಮಾಗಣೆಯ ಧೂಮಾವತಿ ಪುಣ್ಯಕ್ಷೇತ್ರ ಸಮೀಪದಲ್ಲಿಯೇ ಈ ಕೃತ್ಯ ಎಸಗಿರುವುದರ ವಿರುದ್ಧ ಭಜರಂಗದಳ ಹರಿಹಾಯ್ದಿದ್ದು.[ಯೋಧನ ರುಂಡ ಕತ್ತರಿಸಿದ ಉಗ್ರರಿಗೆ ತಕ್ಕ ಉತ್ತರ ಸಿಗಲಿದೆ: ಸೇನೆ]

Ashwath Deck To locate the cow's Trunk in mangaluru

ರುಂಡವನ್ನು ಕೆಲವೇ ಗಂಟೆಗಳ ಹಿಂದೆ ಕತ್ತರಿಸಿದಂತಿದ್ದು ರುಂಡ ಎಲ್ಲಿಂದ ಬಂದಿದೆ, ಯಾರ ಕೃತ್ಯ ಎಂಬುದು ಗೊತ್ತಾಗಿಲ್ಲ. ದನವನ್ನು ಪಕ್ಕದ ಗುಡ್ಡದ ಬಳಿ ಕಡಿದು ಅದರ ರುಂಡವನ್ನು ಅಶ್ವತಕಟ್ಟೆ ಬಳಿ ಎಸೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಬಜ್ಪೆ ಪೊಲೀಸರು ರುಂಡವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Ashwath Deck To locate the cow's Trunk in mangaluru

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru near kaykamaba near kandavara mudukere, bylumagane near Ashwath Deck To locate the cow's Trunk.
Please Wait while comments are loading...