ಜೇಮ್ಸ್ ಬಾಂಡ್ ಕಾರಿನ ಒಡೆಯನಾದ ಕುಡ್ಲದ ಅರ್ಜುನ್

By: ಐಸಾಕ್ ರಿಚರ್ಡ್ಸ್, ಮಂಗಳೂರು
Subscribe to Oneindia Kannada

ಮಂಗಳೂರು ಅಂದ್ರೆ ಐಷಾರಾಮಿ ಜೀವನ, ಹೈ ಫೈ ಲೈಫ್ ಸ್ಟೈಲ್, ನಗರದ ಬೆಳವಣಿಗೆಗಳು ಅದೇ ರೀತಿ ವಿಭಿನ್ನ, ವಿಶಿಷ್ಟ, ಈ ರೀತಿ ವೈವಿಧ್ಯತೆಯಲ್ಲಿ ನಮ್ಮ ಕುಡ್ಲ ದೇಶದ ಗಮನ ಸೆಳೆಯುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಇತ್ತೀಚೆಗೆ ಐಷಾರಾಮಿ ಕಾರುಗಳ ಕ್ರೇಜ್ ಶುರುವಾಗಿದೆ. ಇಂಥ ಕಾರು ಕ್ರೇಜ್ ವುಳ್ಳ ಕುಡ್ಲದ ಉದ್ಯಮಿಯೊಬ್ಬರು ಬರೋಬ್ಬರಿ 7.18 ಕೋಟಿ ರು ಮೌಲ್ಯದ ಐಷಾರಾಮಿ ಕಾರು ಮಂಗಳೂರು ನಗರವನ್ನು ಪ್ರವೇಶಿಸಿದೆ.

ಮಂಗಳೂರಿನ ಉದ್ಯಮಿ ಅರ್ಜುನ್ ಮೋರಸ್ ಅವರು ಅಮೆರಿಕಾ ನಿರ್ಮಿತ ' ಆಸ್ಟಿನ್ ಮಾರ್ಟಿನ್ ವಾಂಖಿಸ್' ಕಾರಿನ ಮಾಲೀಕ . ರಿವರ್ಸ್ ಗೇರ್ ಸಹಿತ ಆಟೋಮ್ಯಾಟಿಕ್ 9 ಗೇರ್ ಗಳನ್ನು ಒಳಗೊಂಡ ಈ ಕಾರು 201 ಕಿಮಿ ಟಾಪ್ ಸ್ಪೀಡ್ ನಲ್ಲಿ ಒಂದು ಗಂಟೆಗೆ 250-300 ಕಿಮಿ ವೇಗದಲ್ಲಿ ಸಾಗುತ್ತಿದೆ. 3.6 ಸೆಕೆಂಡ್ ನಲ್ಲಿ 60 ಮೀಟರ್ ದೂರ ಹೋಗುವಷ್ಟು ಸಾಮರ್ಥ್ಯ ಹೊಂದಿದೆ. ಈ ಕಾರನ್ನು ಅಲ್ಟಿಮೇಟ್ ಲಕ್ಸುರಿ ಎಂದು ಕರೆಯಲಾಗುತ್ತಿದ್ದು, ವಿ-12 ಎಂಜಿನ್ ಹೊಂದಿದೆ.[ಕಾರಲ್ಲೇ ಉದ್ಯಾನವನ ತಕ್ಕಳೊಪ್ಪ!]

ಕಾರು ಸಂಪೂರ್ಣ ಮಾನವ ನಿರ್ಮಿತವಾಗಿದ್ದು, ಬುಕ್ ಮಾಡಿದ ಆರು ತಿಂಗಳ ಬಳಿಕ ಕಾರು ಸಿಗಲಿದೆ. ಕಾರಿನ ಒಳವಿನ್ಯಾಸ ಹೆಚ್ಚು ಸುರಕ್ಷಿತವಾಗಿದೆ ಎನ್ನುತ್ತಾರೆ ಕಂಪೆನಿಯ ಜನರಲ್ ಮ್ಯಾನೇಜರ್ ಸಂದೀಪ್ ಗುಪ್ತಾ.[ಕೊಡಗಿನಲ್ಲಿ ಹಳೆ ಸುಂದರಿಯರದ್ದೇ ದರ್ಬಾರ್]

ದೇಶದ ಮೂರನೇ ಕಾರು: ಆಸ್ಟಿನ್ ಕಂಪೆನಿಯಲ್ಲಿ ವಾಂಟಿಕ್, ಡಿಬಿ ಲೆವೆನ್ ವಾಂಖಿಸ್ ಎಂಬ ನಾಲ್ಕು ಮಾಡೆಲ್ ಗಳಿದ್ದು ಇದರಲ್ಲಿ ಆಸ್ಟಿನ್ ಮಾರ್ಟಿನ್ ವಾಂಖಿಸ್ ಟಾಪ್ ಮಾಡೆಲ್ ಆಗಿದೆ. ಇದು ಈ ಕಂಪೆನಿ ತಯಾರಿಸುವ ಐಷಾರಾಮಿ ಕಾರು ಆಗಿದೆ.

Arjun Moraes Mangalurean proud owner of Aston Martin Vanquish

ಭಾರತದಲ್ಲಿ ಮುಂಬೈ ಮತ್ತು ಚೆನ್ನೈಯ ಉದ್ಯಮಿಗಳು ಮೊದಲ ಎರಡು ಕಾರನ್ನು ಖರೀದಿಸಿದ್ದು, ಇದು ಮೂರನೇ ಕಾರು ಆಗಿದೆ. ಈಗಾಗಲೇ ಕಂಪೆನಿಯು ವಿಶ್ವಾದ್ಯಂತ 85 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ ಎನ್ನುತ್ತಾರೆ ಕಂಪೆನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮೋಹನ್ ಇಸ್ಮಾಯಿಲ್. [ನಿರಾಣಿ ಕೊಟ್ಟ ಕಾರು ವಾಪಸ್ ಮಾಡಿದ ಬಿಎಸ್ ವೈ]

ಎಲ್ಲವೂ ಪ್ರಥಮ: ಉದ್ಯಮಿ ಅರ್ಜುನ್ ಮೋರಸ್ ಅವರಿಗೆ ಮುಂಚಿನಿಂದಲೂ ಐಷಾರಾಮಿ ಕಾರಿನ ಬಗ್ಗೆ ತುಂಬಾ ಕ್ರೇಜ್ . ಮನೆಯಲ್ಲೂ ನಾನಾ ದೇಶಗಳು ನಿರ್ಮಿತ ಕಾರುಗಳಿವೆ. ನಾಲ್ಕು ವರ್ಷಗಳಿಂದ ಕಾರು ಖರೀದಿಗೆ ಪ್ರಯತ್ನ ಮಾಡುತ್ತಿದ್ದರು. [ಜೇಮ್ಸ್ ಬಾಂಡ್ ಕಾರು ಕದ್ದ ಸೂಪರ್ ಸ್ಟಾರ್ ರಜಿನಿಕಾಂತ್]

-
ಜೇಮ್ಸ್ ಬಾಂಡ್ ಕಾರಿನ ಒಡೆಯನಾದ ಕುಡ್ಲದ ಅರ್ಜುನ್

ಜೇಮ್ಸ್ ಬಾಂಡ್ ಕಾರಿನ ಒಡೆಯನಾದ ಕುಡ್ಲದ ಅರ್ಜುನ್

-
-
-
-
-
-

ಈಗಾಗಲೇ ಮಂಗಳೂರಿಗೆ ಮೊಟ್ಟಮೊದಲು ಆಡಿ ಆರ್ -8, ಬಿಎಂಡಬ್ಲ್ಯೂ ಎಕ್ಸ್ 6, ಆಸ್ಟಿನ್ ಕಾರು ಖರೀದಿಸಿದ ಗ್ರಾಹಕ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇದು ಮಾತ್ರವಲ್ಲದೆ ಇವರು ಖರೀದಿಸಿದ ಎಲ್ಲಾ ಕಾರುಗಳನ್ನು ಮಂಗಳೂರಿನಲ್ಲೇ ರಿಜಿಸ್ಟ್ರೇಶನ್ ಮಾಡಿಸುವುದು ಇವರ ಇನ್ನೊಂದು ವಿಶೇಷ ಮತ್ತು ಹೆಗ್ಗಳಿಕೆ.[ಸಿದ್ದು ದುಬಾರಿ ವಾಚ್, ಬಿಎಸ್ವೈ ಟೊಯೋಟ ಕಾರಿಗೆ ಇರುವ ವ್ಯತ್ಯಾಸ!]

ಅರ್ಜುನ್ ಮೋರಸ್, ಕಾರು ಖರೀದಿಸಿದ ಉದ್ಯಮಿ: ನನಗೆ ಮುಂಚಿನಿಂದಲೂ ಕಾರುಗಳ ಬಗ್ಗೆ ತುಂಬಾ ಕ್ರೇಜ್. ಆಡಿ ಸೇರಿದಂತೆ ಹಲವು ಕಂಪೆನಿಗಳ ಕಾರನ್ನು ಖರೀದಿಸಿದ್ದೆ. ಸ್ಪೋರ್ಟ್ ಕಾರೊಂದು ಖರೀದಿಸಬೇಕೆಂದು ಇಚ್ಚೆಯಿತ್ತು. ಆಸ್ಟೀನ್ ಕಾರು ಖರೀದಿಸಬೇಕೆಂದು ನಾಲ್ಕು ವರ್ಷದ ಹಿಂದೆ ನಿರ್ಧರಿಸಿ, ಆರು ತಿಂಗಳ ಹಿಂದೆ ಬುಕ್ ಮಾಡಿದೆ. ಕಾರು ತುಂಬಾ ಸೇಫ್ಟಿಯಾಗಿದ್ದು, ಡ್ರೈವ್ ವಿಶೇಷ ಮುದ ನೀಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangalurean Arjun Moraes proud owner of Aston Martin Vanquish is not a fan of James Bond but he likes cars. A Granite exporter Arjun is now owns the Rs 7.18 crore Sunburst yellow Aston Martin Vanquish Grand Tourer, which can touch speeds in excess of 300 kmph.
Please Wait while comments are loading...