ಮಂಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇವೆ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ 13 : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಮಂಗಳೂರು ಜಿಲ್ಲೆ ವಿವಿಧ ಕಡೆಗಳಲ್ಲಿ ಖಾಲಿ ಇರುವ 10 ಅಂಗನವಾಡಿ ಸಹಾಯಕಿಯರ ಹುದ್ದೆ ಹಾಗೂ 10 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ, ಅರ್ಜಿ ಸಲ್ಲಿಸಲು ಫೆಬ್ರವರಿ 4 ಕೊನೆಯ ದಿನಾಂಕವಾಗಿರುತ್ತದೆ.

Apply for Anganwadi worker and assistant posts in Mangaluru

ಅತ್ತಾವರ ಶಾಲೆಯಲ್ಲಿ ಎರಡು ಹುದ್ದೆಗೆ, ತಣ್ಣೀರುಬಾವಿಯಲ್ಲಿರುವ ಯೂತ್ ಸ್ಪೋಟ್ಸ್ ಕ್ಲಬ್ ನಲ್ಲಿರುವ 3, 8ನೇ ವಿಭಾಗ ಚೊಕ್ಕಬೆಟ್ಟು ನಲ್ಲಿರುವ 4 ಹಾಗೂ ಕುದ್ರೋಳಿ ಬೆಂಗ್ರೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಾಂತಿನಗರ -ಬಜಾಲ್, ಅರ್ಸುಲ (ಪೋರ್ಟ್ ವಾರ್ಡ್), ಜೋಡುಕಟ್ಟೆ -ಮರೋಳಿ , ಕುಂಜತ್ತ್ ಬೈಲ್ ಬಾವಿ , ಉರುಂದಾಡಿ - ಕಾವೂರು ಗ್ರಾಮ, ಅಂಬನಗರ ಬಜಾರ್ , ಮೇರಿಹಿಲ್ , ಪರಾರಿ -ತಿರುವೈಲು, ವ್ಶೆದ್ಯಾನಾಥನಗರ ಪಚ್ಚನಾಡಿ, ಬದ್ರಿಯಾ ಶಾಲೆ ಬಂದರು ಇಲ್ಲಿರುವ ಒಟ್ಟು 10 ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ನೇ ತರಗತಿಯಿಂದ 9ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಎಲ್ಲಾ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಿಲ್ವರ್ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಹಾಗೂ ದೂರವಾಣಿ ಸಂಖ್ಯೆ 0824-2432809 ಅನ್ನು ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Apply for Anganwadi worker and Assistant posts in Mangaluru district. February 04 last date for submit application.
Please Wait while comments are loading...