ವಿವಿಧ ವೃತ್ತಿಪರ ತರಬೇತಿಗಳಿಗೆ SC/ST ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 3: 2016-17ನೇ ಸಾಲಿನ ತರಬೇತಿ ಯೋಜನೆಯಡಿ, ವಿವಿಧ ವೃತ್ತಿಪರ ತರಬೇತಿ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಯನ್ನು ರುಡ್‍ಸೆಟ್ ಸಂಸ್ಥೆ ಮುಖಾಂತರ ನೀಡಲಾಗುವುದು. ತರಬೇತಿ ಮುಗಿಯುವರೆಗೆ ಊಟ, ವಸತಿ ಸೌಕರ್ಯ ಉಚಿತವಾಗಿ ನೀಡಲಾಗುತ್ತದೆ. ಆದರೆ ಯಾವುದೇ ಸ್ಲೈಫಂಡ್ ಇರುವುದಿಲ್ಲ. ಅಭ್ಯರ್ಥಿಗಳು 18 ರಿಂದ 45 ವಯಸ್ಸಿನವರಾಗಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಹೊಂದಿದವರಾಗಿರಬೇಕು. ಅರ್ಜಿಯನ್ನು ಫೆಬ್ರವರಿ 17 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಈ ತರಬೇತಿ ಕೇವಲ ಎಸ್.ಸಿ ಮತ್ತು ಎಸ್.ಟಿ ಅಭ್ಯರ್ಥಿಗಳಿಗೆ ಮಾತ್ರ ಇರುತ್ತದೆ.['ಕೆಐಎಡಿಬಿ ಅಧಿಕಾರಿಗೆ ನಾನು ಬೈದಿಲ್ಲ' - ಶಾಸಕ ಮೊಯ್ದಿನ್ ಬಾವಾ ಸ್ಪಷ್ಟನೆ]

Application invited from SC/ST’s for job oriented courses

ಕೋರ್ಸುಗಳ ವಿವರ

ಫ್ಯಾಶನ್ ಡಿಸೈನಿಂಗ್ (30 ದಿನ), ಸಿದ್ಧ ಉಡುಪು ತಯಾರಿಕೆ (21 ದಿನ), ದ್ವಿ ಚಕ್ರ ವಾಹನ ರಿಪೇರಿ (30ದಿನ), ಪಂಪ್ ಸೆಟ್ ಮತ್ತು ಮೋಟಾರು ರಿವಾಯಿಂಡಿಂಗ್(30ದಿನ), ತ್ರಿಚಕ್ರ ವಾಹನ ರಿಪೇರಿ ಮತ್ತು ಆಟೋ ಎಲೆಕ್ಟ್ರೀಷಿಯನ್ (30 ದಿನ), ಬ್ಯೂಟಿ ಪಾರ್ಲರ್ (ಮಹಿಳೆಯರಿಗೆ ಮಾತ್ರ) (30 ದಿನ), ಕಂಪ್ಯೂಟರ್ ಹಾರ್ಡ್‍ವೇರ್ (ಪದವಿ ಪಡೆದವರಾಗಿರಬೇಕು) (45 ದಿನ), ಕಂಪ್ಯೂಟರ್ ಡಿ.ಟಿ.ಪಿ (ಪಿ.ಯು.ಸಿ ಯಾಗಿರಬೇಕು) (45 ದಿನ), ಮೊಬೈಲ್ ರಿಪೇರಿ (30 ದಿನ), ಗೃಹ ವಿದ್ಯುತ್ ಉಪಕರಣಗಳ ರಿಪೇರಿ(30 ದಿನ), ಆಟೋ ರಿಕ್ಷಾ ಚಾಲನಾ ತರಬೇತಿ(30 ದಿನ), ಲಘು ವಾಹನ ಚಾಲನಾ ತರಬೇತಿ(30 ದಿನ), ಭಾರಿ ವಾಹನ ಚಾಲನಾ ತರಬೇತಿ(30 ದಿನ), ಪ್ಲಂಬಿಂಗ್ ವರ್ಕ್, ಎಂಬ್ರಾಯಿಡರಿ ಮತ್ತು ಫೆಬ್ರಿಕ್ ಪೆಯಿಂಟಿಂಗ್(15 ದಿನ), ಊದುಬತ್ತಿ ತಯಾರಿಕೆ (6 ದಿನ), ಆಹಾರ ಸಂಸ್ಕರಣೆ (6 ದಿನ), ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ (21 ದಿನ) ಗಳ ತರಬೇತಿಯನ್ನು ಆಯೊಜಿಸಲಾಗಿದೆ.[ಬಜೆಟ್: ಮೋದಿ ದೇಶದ ಜನರನ್ನು ರಕ್ಷಿಸಬೇಕಾಗಿದೆ - ಜನಾರ್ಧನ ಪೂಜಾರಿ]

ಆಸಕ್ತರು ಸ್ವ ವಿವರಗಳೊಂದಿದೆ, ತರಬೇತಿ ಪಡೆಯಲಿಚ್ಚಿಸುವ ಕೋರ್ಸಿನ ಹೆಸರು ಬರೆದು, ಜಿಲ್ಲಾ ವ್ಯವಸ್ಥಾಪಕರು, ಡಾ| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿ.ಹೆಚ್.ಎಸ್. ರಸ್ತೆ, ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಮಂಗಳೂರು ಇಲ್ಲಿಗೆ ಕಳುಹಿಸಲು ಕೋರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Application invited for job oriented courses for SC/ST candidates in Managluru. Application submission last date is February 17th.
Please Wait while comments are loading...