ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈ ಮೇಲೆ ಮತ್ತೊಂದು ಎಫ್ಐಆರ್

Subscribe to Oneindia Kannada

ಮಂಗಳೂರು, ಮಾರ್ಚ್ 14: ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಯುವ ಬ್ರಿಗೇಡ್ ಕಾರ್ಯಕರ್ತ ಹಾಗೂ ಉದ್ಯಮಿ ನರೇಶ್ ಶೆಣೈ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಭರತ್ ಕಾಮತ್ ಎಂಬುವವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಹಿನ್ನಲೆಯಲ್ಲಿ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

"ಮಾರ್ಚ್ 12ರಂದು ಮಂಗಳೂರಿನ ಡೊಂಗರಕೇರಿಯ ಮೈದಾನಕ್ಕೆ ಬರುವಂತೆ ಹೇಳಿ, ಕಾರನ್ನು ಅಡ್ಡಗಟ್ಟಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಭರತ್ ಕಾಮತ್ ಎಂಬುವವರು ಇಂದು (ಮಾರ್ಚ್ 14) ಸಂಜೆ ಆರು ಗಂಟೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನರೇಶ್ ಶೆಣೈ ವಿರುದ್ಧ ಐಪಿಸಿ ಸೆಕ್ಷನ್ 341 ಹಾಗೂ 506 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ," ಎಂದು ಬಂದರು ಪೊಲೀಸ್ ಠಾಣೆಯ ಮೂಲಗಳು ಮಾಹಿತಿ ನೀಡಿದ್ದಾರೆ.[ಇಬ್ಬರ ಬಾಳಿಗೆ ಬೆಳಕಾದ ವಿನಾಯಕ ಬಾಳಿಗ ತಾಯಿ ಕಣ್ಣು!]

Another FIR lodged against Naresh Shenoy in Mangaluru

ಈ ಹಿಂದೆ ಅಯ್ಯಪ್ಪ ಸ್ವಾಮಿ ದೇವರಲ್ಲ, ದೈವ ಎಂದು ಕಾಶೀ ಮಠದ ಸಂಯಮೀಂದ್ರ ತೀರ್ಥರು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಭರತ್ ಕಾಮತ್ ಸಂಯಮೀಂದ್ರರ ವಿರುದ್ಧ ಪ್ರಕರಣ ದಾಖಲಿಸಿದ್ದರು ಎಂದು ಹೇಳಲಾಗಿದೆ.

ಈ ಸಂಬಂಧ "ಕಾಶೀ ಮಠದ ಸ್ವಾಮೀಜಿಗಳ ಪ್ರಕರಣದಲ್ಲಿ ನೀನು ಅಷ್ಟರ ಮಟ್ಟಿಗೆ ಮುಂದುವರಿದಿದ್ದೀಯ? ಎಂದು ಪ್ರಶ್ನಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಭರತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ," ಎಂದು ಪೊಲೀಸ್ ಮೂಲಗಳು ಹೇಳಿವೆ.

ನರೇಶ್ ಶೆಣೈ ಈಗಾಗಲೇ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಅವರ ಮೇಲೆ ಮತ್ತೊಂದು ಕೊಲೆಯ ಬೆದರಿಕೆಯ ದೂರು ದಾಖಲಾದಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Another FIR has been lodged against Naresh Shenoy in a murder threat at Bunder police station, Mangaluru. Shenoy was the prime accused in RTI activist Vinayak Baliga murder case.
Please Wait while comments are loading...