ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಯದ ಸಂಪಾಜೆ ಅರಣ್ಯದಲ್ಲಿ ಮತ್ತೊಂದು ಆನೆ ಸಾವು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ. 13 : ಒಂದು ತಿಂಗಳ ಹಿಂದೆ ಅಷ್ಟೇ ಸುಳ್ಯದ ಸಂಪಾಜೆ ಮೀಸಲು ಅರಣ್ಯದ ಬಂಟೋಡಿ ದೊಡ್ಡಕಜೆ ಎಂಬಲ್ಲಿ ಪರಸ್ಪರ ಆನೆಗಳ ಕಾದಾಟದಲ್ಲಿ ಒಂದು ಗಂಡಾನೆ ಸಾವನ್ನಪ್ಪಿದ್ದ ಬೆನ್ನಲ್ಲಿಯೇ ಮತ್ತೊಂದು ಆನೆ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯದಲ್ಲಿ ಬೀಟ್ ಗೆ ಹೋದ ಸಂದರ್ಭದಲ್ಲಿ ಮತ್ತೊಂದು ಆನೆ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಒಂದು ತಿಂಗಳ ಹಿಂದೆ 2 ಆನೆಗಳ ಮಧ್ಯೆ ಉಂಟಾದ ಪರಸ್ಪರ ಕಾದಾಟದಿಂದ ಈಗಾಗಲೇ ಒಂದು ಆನೆ ಸಾವನ್ನಪ್ಪಿತ್ತು.[ಸುಳ್ಯದ ಸಂಪಾಜೆ ಅರಣ್ಯದಲ್ಲಿ ಇಪ್ಪತ್ತು ವರ್ಷದ ಗಂಡಾನೆ ಸಾವು]

Another Elephant found dead in Sampaje reserve forest Mangaluru

ಅದರ ಜತೆ ಕಾದಾಡಿದ್ದ ಮತ್ತೊಂದು ಆನೆಗೆ ತೀವ್ರ ಗಾಯಗೊಂಡಿತ್ತು. ಅದೇ ಈ ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸತ್ತ ಆನೆಯ ಹೊಟ್ಟೆ ಮತ್ತು ಕುತ್ತಿಗೆಯ ಭಾಗದಲ್ಲಿ ರಕ್ತಸಿಕ್ತ ಗಾಯಗಳು ಕಂಡು ಬಂದಿದೆ. ಏಳು ಅಡಿ ಎತ್ತರದ ಗಂಡಾನೆಗೆ ಒಂದು ಮೀಟರ್ ಗಿಂತಲೂ ಹೆಚ್ಚು ಉದ್ದದ ಎರಡು ಕೋರೆ ಇತ್ತು.

ಕೀಲಾರುಮೂಲೆ ಭಾಗ ಹೆಚ್ಚು ತೇವಾಂಶ ಇರುವ ಪ್ರದೇಶವಾಗಿದ್ದು ಇದರ ಸುತ್ತ ಮುತ್ತ ಕಾಡಾನೆಗಳ ಹಿಂಡು ಕೆಲವು ದಿನಗಳಿಂದ ಬೀಡು ಬಿಟ್ಟಿದ್ದು, ಈ ಸಂದರ್ಭದಲ್ಲಿ ಆನೆಗಳ ಮಧ್ಯೆ ಕಾದಾಟ ಉಂಟಾಗಿ ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರೆ.

ವೈದ್ಯರ ತಂಡ ಸತ್ತ ಆನೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಸ್ಕಾರ ನಡೆಸಲಾಯಿತು. ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಉಪವಲಯ ಅರಣ್ಯಾಧಿಕಾರಿ ರವಿಪ್ರಕಾಶ್, ಅರಣ್ಯ ರಕ್ಷಕ ದಿನೇಶ್, ವೀಕ್ಷಕರಾದ ಮಂಜುನಾಥ್, ಸುಂದರ ಮತ್ತಿತರರು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

English summary
An elephant was found dead in Sampaje reserve forest area in Sulliya, Mangaluru. The elephant, aged about 12 to 13-years-old is suspected to have died after a fight within a herd about three to four days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X