ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಂತೆ ಬಿಡಿ, ಇನ್ಮುಂದೆ ರೈಲ್ವೆಗಳಲ್ಲಿ ಕ್ಯಾಪ್ಟನ್ ಇರುತ್ತಾರೆ..!

ರೈಲ್ವೆಗಳ ಪ್ರಯಾಣಿಕರಿಗೆ ತೊಂದರೆಗಳನ್ನು ನಿವಾರಿಸಲು ರೈಲ್ವೆ ಕ್ಯಾಪ್ಟನ್ ಗಳನ್ನು ನೇಮಿಸಲಾಗುತ್ತಿದೆ. ಅದಂತೆ ಮಂಗಳೂರು-ಚೆನ್ನೈ ಸೂಪರ್ ಫಾಸ್ಟ್ ಮೇಲ್ ಟ್ರೈನ್ ಗೆ ಅನುಪ್ ಕುಮಾರ್ ಎನ್ನುವರನ್ನು ಟ್ರೈನ್ ಕ್ಯಾಪ್ಟನ್ ಆಗಿ ನಿಯುಕ್ತಿಗೊಳಿಸಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 10 : ಬೈಕ್, ಕಾರು, ಬಸ್ , ವಿಮಾನದಲ್ಲಿ ಪ್ರಯಾಣಿಸುವ ಅನುಭವ ಬೇರೆ. ರೈಲ್ವೆಗಳಲ್ಲಿ ಪ್ರಯಾಣಿಸುವ ಅನುಭವವೇ ಬೇರೆ. ರೈಲ್ವೆ ಪ್ರಯಾಣ ಮಾಡುವಾಗ ಹೆಚ್ಚಿನ ಮಂದಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ಮುಂದೆ ಈ ಚಿಂತೆ ಬಿಡಿ.

ಹೌದು.. ಪ್ರಯಾಣಿಕರ ಕುಂದುಕೊರತೆಗೆ ಸ್ಪಂದಿಸಲು ರೈಲುಗಳಲ್ಲಿ 'ಟ್ರೈನ್ ಕ್ಯಾಪ್ಟನ್‌ ' ವ್ಯವಸ್ಥೆಯನ್ನು ಫಾಲ್ಘಾಟ್ ರೈಲ್ವೆ ವಿಭಾಗ ಜಾರಿಗೆ ತಂದಿದೆ. ಈ ಸೌಲಭ್ಯ ಇನ್ಮುಂದೆ ಮಂಗಳೂರಿನ ರೈಲ್ವೆ ನಿಲ್ದಾಣದದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಸಹ ಸಿಗಲಿದೆ.

ರಾಜಧಾನಿಯ ‌ರೈಲುಗಳಲ್ಲಿ ಟ್ರೈನ್ ಕ್ಯಾಪ್ಟನ್‌ ಸೌಲಭ್ಯ ಈಗಾಗಲೇ ಜಾರಿಗೆ ಬಂದಿದೆ. ಕಳೆದ ವಾರ ದಕ್ಷಿಣ ರೈಲ್ವೆಯಲ್ಲಿ ತ್ರಿವೆಂಡ್ರಂನಲ್ಲಿ ಜಾರಿಗೆ ತರಲಾಗಿತ್ತು. ಇದೀಗ ಮಂಗಳೂರು-ಚೆನ್ನೈ ಮಧ್ಯೆ ಸಂಚರಿಸುವ ಚೆನ್ನೈ ಮೇಲ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 'ಟ್ರೈನ್ ಕ್ಯಾಪ್ಟನ್‌' ನನ್ನು ನಿಯುಕ್ತಿಗೊಳಿಸಲಾಗಿದೆ.

Anoop Kumar is the first Train Captain of Mangaluru Central-Chennai Central Super Fast Mail

ಮಂಗಳೂರು ಕೇಂದ್ರ-ಚೆನ್ನೈ ಮೇಲ್ ರೈಲಿಗೆ ಅನೂಪ್‌ಕುಮಾರ್‌ ಎಂಬುವವರನ್ನು ಟ್ರೈನ್ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕ್ಯಾಪ್ಟನ್, 'ಇಲಾಖೆಯಲ್ಲಿ ಇದು ಹೊಸ ಅನುಭವ. ಪ್ರಯಾಣಿಕರ ಅನುಕೂಲಕ್ಕಾಗಿ ಸೃಷ್ಟಿಸಿರುವ ಹೊಸ ಹುದ್ದೆ' ಎಂದರು.

ಟ್ರೈನ್ ಕ್ಯಾಪ್ಟನ್‌ ಎಂದರೇನು?: ರೈಲ್ವೆ ಇಲಾಖೆ , ಟ್ರೈನ್ ಕ್ಯಾಪ್ಟನ್‌ ಆಗಿ ಓರ್ವವ್ಯಕ್ತಿಯನ್ನು ನಿಯುಕ್ತಿಗೊಳಿಸುತ್ತದೆ. ಹೆಸರೇ ಹೇಳುವಂತೆ ಇಡೀ ರೈಲಿಗೆ ಅವರೇ ಕ್ಯಾಪ್ಟನ್‌. ರೈಲಿನ ಎಲ್ಲ ಆಗು- ಹೋಗುಗಳಿಗೆ ಅವರೇ ಜವಾಬ್ದಾರರು.

ನೀರು, ವಿದ್ಯುತ್, ಶೌಚಾಲಯ ಸಮಸ್ಯೆ ಇದ್ದರೆ ಇವರನ್ನು ಸಂಪರ್ಕಿಸಿದರೆ ಪರಿಹಾರ ಸಿಗುತ್ತೆ. ಅಲ್ಲದೇ ಕಳ್ಳತನ ಸೇರಿ ಬೇರೆ ಅಪರಾಧ ಪ್ರಕರಣಗಳು ನಡೆದರೆ ರೈಲ್ವೆ ಪ್ರಯಾಣಿಕರು 'ರೈಲ್ವೆ ಕ್ಯಾಪ್ಟನ್' ನನ್ನ ಸಂಪರ್ಕಿಸಿದರೆ ಈ ಕ್ಯಾಪ್ಟನ್‌ ಕೂಡಲೇ ನೆರವಿಗೆ ಧಾವಿಸುತ್ತಾರೆ.

ಏನೇ ತೊಂದರೆಯಾದರೂ ಪ್ರಯಾಣಿಕರು ಕರೆ ಮಾಡಬಹುದು. ಒಂದು ವೇಳೆ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ತಲೆದೋರಿದರೆ, ಟ್ರೈನ್ ಕ್ಯಾಪ್ಟನ್‌ ಇರುವ ಬೋಗಿಗೆ ತೆರಳಿ ಸಮಸ್ಯೆ ಬಗ್ಗೆ ಹೇಳಬಹುದು.

ಸಾಧ್ಯವಾದರೆ ತಕ್ಷಣದಲ್ಲಿ ಅಥವಾ ಮುಂದಿನ ನಿಲ್ದಾಣದಲ್ಲಿ ಪ್ರಯಾಣಿಕರ ತೊಂದರೆಯನ್ನು ನಿವಾರಿಸುತ್ತಾರೆ. ಆಗಲೂ ಸಾಧ್ಯವಾಗದಿದ್ದರೆ ರೈಲ್ವೆ ಕಮರ್ಶಿಯಲ್ ಕಂಟ್ರೋಲರ್ ನ್ನು ಸಂಪರ್ಕಿಸುತ್ತಾರೆ.

ಇಲ್ಲಿ ಕ್ಯಾಪ್ಟನ್‌ಗೂ ರೈಲು ನಿಲ್ದಾಣದ ಅಧಿಕಾರಿಗಳಿಗೂ ಯಾವುದೇ ಸಂವಹನ ಇರುವುದಿಲ್ಲ. ಆದರೆ, ರೈಲಿನಲ್ಲಿ ಸೀಟು ಕಾಯ್ದಿರಿಸುವಿಕೆಯಲ್ಲಿ ನೆರವು ಸಿಗುವುದಿಲ್ಲ.

ಕ್ಯಾಪ್ಟನ್‌ಗಳು ಪ್ರಯಾಣದುದ್ದಕ್ಕೂ ರೈಲಿನಲ್ಲೇ ಸಂಪರ್ಕಕ್ಕೆ ಲಭ್ಯವಾಗುತ್ತಾರೆ. ಪ್ರಯಾಣಿಕರ ಅಹವಾಲುಗಳಿಗೆ ಸ್ಪಂದಿಸುತ್ತಾರೆ. ಪ್ರತಿ ಬೋಗಿಗಳಲ್ಲೂ ಆಯಾ ರೈಲಿನ ಟ್ರೈನ್ ಕ್ಯಾಪ್ಟನ್‌ಗಳ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ.

ಪ್ರಯಾಣಿಕರು ಯಾವುದೇ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಬಹುದು. ಈ ಹೊಸ ಪ್ರಯೋಗ ಎಲ್ಲರ ಮೆಚ್ಚುಗೆ ಗಳಿಸುತ್ತಾ, ಕಾದು ನೋಡಬೇಕು.

English summary
To address the on-board complaints of passengers, the Southern Railway has introduced ‘train captain’. Anoop Kumar is the first Train Captain on the Mangaluru Central-Chennai Central Super Fast Mail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X