ಮಂಗಳೂರು ಆಸ್ಪತ್ರೆಯಲ್ಲಿ ಮಹಿಳೆ ನೇಣಿಗೆ ಶರಣು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 12: ಮಂಗಳೂರಿನ ಸಿಟಿ ಸೆಂಟರ್ ಬಳಿ ಇರುವ ಜನಶ್ರೀ ನರ್ಸಿಂಗ್ ಹೋಮ್ ನಲ್ಲಿ ವೃದ್ದೆ ಮಹಿಳೆ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಲ್ಲಾಳ್ ಬಾಗ್ ನಿವಾಸಿ ಸುಶೀಲಾ (67) ಆತ್ಮಹತ್ಯೆ ಮಾಡಿಕೊಂಡವರು. ಸುಶೀಲಾ ಅವರನ್ನು ಆ.11ರಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಆಸ್ಪತ್ರೆಯವರು ಸುಶೀಲ ಅವರಲ್ಲಿ ವಿಚಾರಿಸಿದಾಗ ತಮ್ಮ ಆರೈಕೆಗಾಗಿ ಪುಷ್ಪಾ ಎಂಬುವರು ಬರುತ್ತಾರೆ ಎಂದು ಹೇಳಿದ್ದರು. ಆದರೆ ಯಾರೂ ಬಂದಿರಲಿಲ್ಲ.

An old woman commit suicide in hospital, Mangaluru

ಆ.12 ರಂದು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆಯ ಸಿಬ್ಬಂದಿ ಬಾಗಿಲು ಬಡಿದಾಗ ಅವರು ಸ್ಪಂದಿಸಿಲ್ಲ. ಕಿಟಕಿಯಿಂದ ನೋಡಿದಾಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಸುಶೀಲಾ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂತು.

ಒನ್ ಇಂಡಿಯಾ ಜೊತೆಗೆ ಮಾತನಾಡಿದ ಸುಶೀಲಾ ಅವರ ಸಂಬಂಧಿ, ಸುಶೀಲಾ ಅವರು ಬಲ್ಲಾಳ್ ಬಾಗಿನ ಅಭಿಮಾನ್ ಪ್ಯಾಲೇಸ್ ನಲ್ಲಿ ವಾಸವಿದ್ದರು. ಒಂದು ವರ್ಷದ ಹಿಂದೆ ಅವರ ಗಂಡ ತೀರಿ ಹೋಗಿದ್ದರು. ಮೊದಲು ಸುಶೀಲಾ ಅವರು ಮಗನ ಜೊತೆ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರು, ಮಗಳು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಯಾರಿಗೂ ತಿಳಿಸಿಲ್ಲ ಎಂದರು.

'ನನ್ನ ಇಬ್ಬರು ಮಕ್ಕಳು ಕೂಡಾ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ , ನಾನು ಒಂದಲ್ಲ ಒಂದು ಕಾಯಿಲೆಯಿಂದ ನರಳುತ್ತಿದ್ದು, ಅವರಿಗೆ ತೊಂದರೆ ಕೊಡಬಾರದೆಂದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ, ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ' ಎಂದು ಸುಶೀಲಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮರಣ ಪತ್ರ ಬರೆದಿದ್ದಾರೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An old woman commit suicide in Mangaluru Janasri hospital. She is a resident of Ballalbagh, admitted to hospital for treatment.
Please Wait while comments are loading...