ಸ್ನಾನ ಮಾಡುವುದನ್ನು ಇಣುಕಿ ನೋಡಿ ಹಲ್ಲೆ ಮಾಡಿದ ಭೂಪ..!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 18 : ಒಂದೇ ಮನೆಯ ಐದು ಮಂದಿಗೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ಕುದ್ದುಪದವು ಜನತಾ ಕಾಲಾನಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೂವರು ಗಂಭೀರ ಗಾಯಗೊಂಡು, ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ.

ಕುದ್ದುಪದವು ಜನತಾ ಕಾಲೊನಿ ನಿವಾಸಿಗಳಾದ ಅಮ್ಮುಪೂಜಾರಿ(65), ಲಲಿತಾ(60), ರಮೇಶ್ ಪೂಜಾರಿ(42) ಗಂಭೀರ ಗಾಯಗೊಂಡಿದ್ದಾರೆ. ಅರುಣ(38), ರಾಜೀವಿ (26)ರಿಗೆ ಸಣ್ಣ ಪುಟ್ಟ ಗಾಯವಾಗಿದೆ.
ಈ ಐವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಕ್ಕದ ಮನೆಯ ಪ್ರಕಾಶ್ ಬೆಳ್ಚಾಡ(47) ಎಂಬಾತ ಮಾರಕಾಯುಧದಿಂದ ಹಲ್ಲೆ ನಡೆಸಿದ ಆರೋಪಿ.[2 ಕೋಟಿ ಹಫ್ತಾಗೆ ದುಬೈನಿಂದ ಕಲಿಯೋಗೀಶನ ಬೆದರಿಕೆ ಕರೆ]

An accused man beats atleast five people in Vitla

ಅಷ್ಟಕ್ಕೂ ಹಲ್ಲೆಗೆ ಕಾರಣ ಏನು ಗೊತ್ತಾ..?
ನೆರೆಮನೆಯ ಮಹಿಳೆಯೊಬ್ಬಳು ಸ್ನಾನ ಮಾಡುತ್ತಿರುವಾಗ ಪ್ರಕಾಶ್ ಎಂಬಾತ ಬಚ್ಚಲು ಮನೆಯ ಪಕ್ಕದಲ್ಲಿ ನಿಂತು ನೋಡಿದ್ದನ್ನು ಗಮನಿಸಿದ ಅಮ್ಮು ಪೂಜಾರಿ ಮನೆಯವರು ಯಾರೆಂದು ನೋಡಲು ಆಗಮಿಸಿದಾಗ ಪ್ರಕಾಶ್ ಒಬ್ಬರ ಮೇಲೆ ಉಗುಳಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಬಳಿಕ ಕೈಯಲ್ಲಿದ್ದ ಕತ್ತಿಯ ಮೂಲಕ ಹಲ್ಲೆ ನಡೆಸಿದ್ದಾನೆನ್ನಲಾಗಿದೆ.[ಹತ್ಯೆಗೆ ಸಂಚು: ನರೇಂದ್ರ ನಾಯಕ್ ಸೆಕ್ಯೂರಿಟಿ ಡಬಲ್]

ಮನೆಯಲ್ಲಿ ವಿದ್ಯುತ್ ಇರಲಿಲ್ಲ ಎಂದು ತಂತಿ ಸರಿಪಡಿಸಲು ಲೈನ್‌ಮ್ಯಾನ್ ಜೊತೆಗೆ ಹೋಗಿದ್ದಾಗ ಅಮ್ಮುಪೂಜಾರಿ ಮನೆಯವರು ಪ್ರಶ್ನಿಸಿ ಕಲ್ಲು ಬಿಸಾಡಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man beated atleast 5 people, when he was accused of watching a girl who was taking bath. The incident took place in Vitla, Mangaluru,
Please Wait while comments are loading...