ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಷ್ಯನ್ ಜೂನಿಯರ್ ಕ್ರೀಡಾಕೂಟಕ್ಕೆ ಆಳ್ವಾಸ್ ನ 5 ಕ್ರೀಡಾಪಟುಗಳು

|
Google Oneindia Kannada News

ಮಂಗಳೂರು, ಜೂನ್ 02: ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಮತ್ತೆ ದೇಶದ ಗಮನ ಸೆಳೆದಿದ್ದಾರೆ. ಜಪಾನ್‍ನ ಗಿಫುನಲ್ಲಿ ಜೂನ್ 6ರಿಂದ 10ರವರೆಗೆ ನಡೆಯಲಿರುವ 18ನೇ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 5 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಕಳೆದ ತಿಂಗಳು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳು ಪದಕದ ಸಾಧನೆಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರೀಡಾಪಟುಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ.

ಅಥ್ಲೆಟಿಕ್ಸ್ ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆಅಥ್ಲೆಟಿಕ್ಸ್ ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

100 ಮೀ. ಓಟದಲ್ಲಿ ಪ್ರಜ್ವಲ್ ಮಂದಣ್ಣ , ಶಾಟ್‍ಪುಟ್‍ನಲ್ಲಿ ಆಶಿಷ್, 400 ಮೀ. ಓಟದಲ್ಲಿ ಶುಭ ವಿ., ಶಾಟ್‍ಪುಟ್‍ನಲ್ಲಿ ಅನಾಮಿಕ ಹಾಗೂ ಎತ್ತರ ಜಿಗಿತದಲ್ಲಿ ಅಭಿನಯ ಶೆಟ್ಟಿ ಜಪಾನ್ ನ ಗಿಫುದಲ್ಲಿ ನಡೆಯಲಿರುವ ಏಷ್ಯನ್ ಜೂನಿಯರ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Alvas students selected for Asian Athletics Championships

ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

English summary
Moodbidre Alva’s College sports students selected for Asian Junior Athletics championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X