ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ಪ್ರಗತಿ 2018 ಬೃಹತ್ ಉದ್ಯೋಗ ಮೇಳಕ್ಕೆ ಮೂಡಬಿದಿರೆಯಲ್ಲಿ ಚಾಲನೆ

|
Google Oneindia Kannada News

ಮಂಗಳೂರು, ಜುಲೈ 06 : ಆಳ್ವಾಸ್ ಪ್ರಗತಿ 2018 ಬೃಹತ್ ಉದ್ಯೋಗ ಮೇಳಕ್ಕೆ ಇಂದು ಮೂಡಬಿದರೆಯಲ್ಲಿ ಚಾಲನೆ ದೊರೆತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಆಳ್ವಾಸ್ ಪ್ರಗತಿ 2018 ಉದ್ಯೋಗ ಮೇಳಕ್ಕೆ ಚಾಲನೆ ನಿಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ 10ನೇ ಆವೃತ್ತಿಯ ಈ ಮೇಳಕ್ಕೆ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸಂಸದ ನಳಿನ ಕುಮಅರ್ ಕಟೀಲ್ ಚಾಲನೆ ನೀಡಿದರು.

Alvas Pragathi 2018 job fair launched in Moodabidire

ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ತಮಗಿರುವ ಅರ್ಹತೆ, ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಗಿಟ್ಟಿಸಲು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ವರದಾನವಾಗಿದೆ ಎಂದರು. ಇಲ್ಲಿಯ ಪಾರದರ್ಶಕ ವ್ಯವಸ್ಥೆಯಿಂದಾಗಿ ಉದ್ಯೋಗಾಕಾಂಕ್ಷಿಗಳ ವಿಶ್ವಾಸ ಈ ಮೇಳ ಗಳಿಸಿದೆ. ಕಂಪೆನಿಗಳ ಮುಂದೆ ಸೂಕ್ತ ಅಭ್ಯರ್ಥಿಗಳನ್ನು ತಂದು, ಅವರಿಗೆ ಉದ್ಯೋಗ ಕಲ್ಪಿಸುವ ಈ ವ್ಯವಸ್ಥೆ ಸರ್ಕಾರಕ್ಕೂ ಮಾದರಿಯಾಗಿದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಔದ್ಯೋಗಿಕವಾಗಿ ಯುವಕರನ್ನು ಸದೃಢಗೊಳಿಸಲು ಕೆಲಸದಿಂದ, ಸೇವಾಮನೋಭಾವವಾಗಿ ಆಳ್ವಾಸ್ ಪ್ರಗತಿಯನ್ನು 9 ವರ್ಷಗಳ ಹಿಂದೆ ಪ್ರಾರಂಭಿಸಿದ್ದೇವೆ. ಸಹಸ್ರಾರು ಮಂದಿ ಉದ್ಯೋಗ ಪಡೆದಿರುವುದು, ಪಡೆಯುತ್ತಿರುವುದರಿಂದ ನಮ್ಮ ಶ್ರಮ ಸಾರ್ಥಕವಾಗುತ್ತಿದೆ ಎಂದು ಹೇಳಿದರು.

Alvas Pragathi 2018 job fair launched in Moodabidire

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಭ್ಯರ್ಥಿಗಳಿಗೆ ನಡೆದ ಈ ಬೃಹತ್ ಉದ್ಯೋಗಮೇಳ ಮೊದಲ ದಿನ 183 ಕಂಪೆನಿಗಳು ಭಾಗವಹಿಸಿದ್ದವು. ಮೊದಲ ದಿನ 8,347 ಅಭ್ಯರ್ಥಿಗಳು ಸಂದರ್ಶನ ಎದುರಿಸಿದ್ದಾರೆ. 10,399 ಅನ್‌ಲೈನ್‌ ನೋಂದಣಿ, 972 ಅಭ್ಯರ್ಥಿಗಳು ಸ್ಥಳದಲ್ಲಿ ನೋಂದಣಿ ಮಾಡಿದ್ದಾರೆ. ಅಭ್ಯರ್ಥಿಗಳ ಅಂತಿಮ ಹಂತದ ಆಯ್ಕೆ ನಾಳೆ ನಡೆಯಲಿದೆ. ಅಭ್ಯರ್ಥಿಗಳಿಗೆ ತಮ್ಮ ಅರ್ಹತೆಗೆ ತಕ್ಕಂತೆ ಉದ್ಯೋಗವನ್ನು ಆಯ್ಕೆ ಮಾಡಲು ವಿಶೇಷ ಕೇಂದ್ರದ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಕಲ್ಪಿಸಿದೆ.

English summary
The Alvas Education Fundation's 10th annual Alvas Pragathi employment mela inaugurated today in Moodbidire. MP Nalin Kumar Kateel inaugurated the job fair. 183 companies taken part in first days of fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X