ಏಷ್ಯನ್ ಬಾಸ್ಕೆಟ್ ಬಾಲ್: ಕನ್ನಡತಿ ಬಾಂಧವ್ಯ ಭಾರತ ತಂಡದ ನಾಯಕಿ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್. 03 : 23ನೇ ಮಹಿಳಾ ಫಿಬಾ ಏಷ್ಯನ್ ಜೂನಿಯರ್ ಬಾಸ್ಕೆಟ್ ಬಾಲ್‌ ಚಾಂಪಿಯನ್ ಶಿಪ್‌ಟೂರ್ನಿಗೆ ಭಾರತದ ತಂಡದ ನಾಯಕಿಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಂಧವ್ಯ ಎಚ್. ಎಂ. ಆಯ್ಕೆಯಾಗಿದ್ದಾರೆ.

ನವೆಂಬರ್ 11ರಿಂದ ಥಾಯ್ಲೆಂಡ್ ನ ಬ್ಯಾಂಕಾಕ್‌ನಲ್ಲಿ ಆರಂಭವಾಗಲಿರುವ 23ನೇ ಫಿಬಾ ಏಷ್ಯನ್ ಜೂನಿಯರ್ ಬಾಸ್ಕೆಟ್ ಬಾಲ್‌ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡವನ್ನು ಕನ್ನಡತಿ ಬಾಂಧವ್ಯ ಮುನ್ನಡೆಸಲಿದ್ದಾರೆ. [ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ದಾರುಣ್ ರಿಯೋಗೆ ಅರ್ಹತೆ]

Alva's College Student Bhandavya is India's BB Captain

ಭಾರತದ ತಂಡದ ನಾಯಕಿಯಾಗಿ ಆಯ್ಕೆಯಾಗಿರುವ ಈ ಹಿಂದೆ 2013ರಲ್ಲಿ ಬಾಂಧವ್ಯ ಕೊಲೊಂಬೋದಲ್ಲಿ ಜರುಗಿದ ಏಷ್ಯನ್ ಯೂತ್ ಬಾಸ್ಕೆಟ್ ಬಾಲ್ , 2014ರಲ್ಲಿ ಜೋರ್ಡನ್‌ನಲ್ಲಿ ನಡೆದ ಜೂನಿಯರ್ ಏಷ್ಯನ್ ಬಾಸ್ಕೆಟ್ ಬಾಲ್‌ ಹಾಗೂ 2015ರಲ್ಲಿ ಚೀನಾದಲ್ಲಿ ಜರುಗಿದ ಸೀನಿಯರ್ ಏಷ್ಯನ್ ಬಾಸ್ಕೆಟ್ ಬಾಲ್‌ ಚಾಂಪಿಯನ್ ಶಿಪ್‌ನಲ್ಲಿ ಬಾಂಧವ್ಯ ಎಚ್ . ಎಂ. ಭಾರತ ತಂಡವನ್ನು ಪ್ರತಿನಿಧಿಸಿದ್ದರು.

Alva's College Student Bhandavya is India's BB Captain

ಭಾಂಧವ್ಯ ಅವರು ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಬಿ. ಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವರೆಗೆ ಬಾಂಧವ್ಯ ಅವರು 4ನೇ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು.

Alva's College Student Bhandavya is India's BB Captain

ಅವರ ಈ ಸಾಧನೆಯ ಕುರಿತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯು ಹೆಚ್ಚಿನ ಪ್ರೋತ್ಸಾಹ ನೀಡಿದ್ದು ಹಾಗೂ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೀಡಿದ ಸಹಕಾರದಿಂದ ಈ ಮಟ್ಟಕ್ಕೆ ಸೇರಲು ಸಾಧ್ಯವಾಗಿದೆ ಎಂದು ಬಾಂಧವ್ಯ ಸಂತೋಷವನ್ನು ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Frist year B.com student at Alva's College Moodbidri, Bhandavya HM has been selected as the captain of india's team which will be participating in the Junior ASian Women's(under-18) Basketball Championship in Bangkok on November 11.
Please Wait while comments are loading...