ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲರ್ ಫುಲ್ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಆಳ್ವಾಸ್ ಕ್ಯಾಂಪಸ್

|
Google Oneindia Kannada News

ಮಂಗಳೂರು, ನವೆಂಬರ್. 17: ಆಳ್ವಾಸ್ ನುಡಿಸಿರಿ ಎಂದರೆ ಸಂಭ್ರಮ, ಸಡಗರ. ಅದೊಂದು ಕನ್ನಡ ನಾಡು-ನುಡಿ-ಸಂಸ್ಕತಿಯ ವೈಭವದ ಹಬ್ಬ ಎಂದೇ ಗುರುತಿಸಲಾಗುತ್ತದೆ.

ಈ ಅಕ್ಷರ ಜಾತ್ರೆಯಲ್ಲಿ ಒಂದೆಡೆ ಸಾಹಿತ್ಯಾಸಕ್ತರಿಗೆ ರಸದೌತಣ ಉಣಬಡಿಸಿದರೆ ಇನ್ನೊಂದೆಡೆ ಜಾನಪದದ ಸೊಗಡು ಆಕರ್ಷಿಸುತ್ತದೆ. ಕೃಷಿಯ ಸಮೃದ್ಧಿಯ ಕನಸು ಮೇಳೈಸಿರುವ ಈ ಆಳ್ವಾಸ್ ನುಡಿಸಿರಿ ಹಬ್ಬ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ.

ಕನ್ನಡದ ಉಗಮ ಹಲ್ಮಿಡಿ ಶಾಸನದಿಂದಾಯಿತು ಎನ್ನುವುದು ಅರ್ಧ ಸತ್ಯ:ಡಾ.ಷ.ಶೆಟ್ಟರ್ಕನ್ನಡದ ಉಗಮ ಹಲ್ಮಿಡಿ ಶಾಸನದಿಂದಾಯಿತು ಎನ್ನುವುದು ಅರ್ಧ ಸತ್ಯ:ಡಾ.ಷ.ಶೆಟ್ಟರ್

ಮುಂಜಾನೆ ನುಡಿಸಿರಿಯಲ್ಲಿ ಸಾಹಿತ್ಯ ಜಾತ್ರೆಯಾದರೆ ಸಂಜೆಯಾಗುತ್ತಿದ್ದಂತೆ ವಿದ್ಯಾಗಿರಿಯಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಕತ್ತಲು ಕವಿದಂತೆ ಆಳ್ವಾಸ್ ಕಾಲೇಜಿನ ಅವರಣ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ.

Alvas campus is attracting by colorful electric lights

ಕಾಲೇಜಿನ ಪ್ರತಿ ಕಟ್ಟಡದ ಗೋಡೆಗಳು ಝಗಮಗಿಸುವ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಈ ಬಣ್ಣದ ದೀಪಗಳು ನುಡಿಸಿರಿಯ ಮೆರಗನ್ನು ಮತ್ತಷ್ಟು ಹೆಚ್ಚಿಸಿವೆ. ನಾನಾ ಬಗೆಯ ಬೆಳಕನ್ನು ಸೂಸುವ ಬಗೆ ಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುತ್ತವೆ.

 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲೂ ಸದ್ದು ಮಾಡಿದ ಶಬರಿಮಲೆ ವಿವಾದ 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲೂ ಸದ್ದು ಮಾಡಿದ ಶಬರಿಮಲೆ ವಿವಾದ

Alvas campus is attracting by colorful electric lights

ಕಾಲೇಜಿನ ಉದ್ಯಾನವನಕ್ಕೆ ವಿದ್ಯುತ್ ದೀಪಗಳಿಂದಾಗಿ ಹೊಸ ಕಳೆ ಬಂದಿದೆ ಎಂದರೆ ತಪ್ಪಾಗಲಾರದು. ಉದ್ಯಾನವನದ ನಡುವೆ ಇರುವ ಕಾರಂಜಿ ಕಲರ್ ಫುಲ್ ದೀಪಗಳಿಂದ ವಿವಿಧ ರೀತಿಯಲ್ಲಿ ವಯ್ಯಾರದ ನೃತ್ಯ ಮಾಡುತ್ತದೆ. ಹಲವರು ಈ ಬಣ್ಣ ಬಣ್ಣದ ದೀಪಗಳ ಮುಂದೆ ಸೆಲ್ಫಿ ಕ್ಲಿಕಿಸುತ್ತಾ ಸಂಭ್ರಮಿಸುತ್ತಾರೆ.

 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ 15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ

Alvas campus is attracting by colorful electric lights

ಸಭಾಂಗಣದುದ್ದಕ್ಕೂ ಅಳವಡಿಸಲಾಗಿರುವ ಸಾವಿರಾರು ಸಾಂಪ್ರದಾಯಿಕ ಗೂಡುದೀಪಗಳು ನುಡಿಸಿರಿಯ ಸಾಂಸ್ಕತಿಕ-ಸಾಂಪ್ರದಾಯಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.

English summary
Colourful Lighting arranged in Alvas Nudisiri 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X