‘ಸುಂದರ ರಾಮ ಶೆಟ್ಟಿ ರಸ್ತೆ’ ನಾಮಕರಣಕ್ಕೆ ಒತ್ತಾಯಿಸಿ ದೇವೇಗೌಡರಿಂದ ಪತ್ರ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 9: ನಗರದ ಲೈಟ್ ಹೌಸ್ ಹಿಲ್ ರಸ್ತೆಗೆ 'ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ' ಎಂದು ಮರು ನಾಮಕರಣ ಮಾಡುವಂತೆ ಮಾಜಿ ಪ್ರಧಾನಿ ಶ್ರೀ.ಹೆಚ್ ಡಿ.ದೇವೇಗೌಡರು ಪತ್ರ ಬರೆದಿದ್ದಾರೆ.

ಮಂಗಳೂರಿನಲ್ಲಿ ಮುಗಿಯದ ರಸ್ತೆ ನಾಮಕರಣ ರಗಳೆ

'ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ'ಯ ಮರು ನಾಮಕರಣದ ವಿಚಾರದಲ್ಲಿ ಯಾವುದೇ ರೀತಿಯ ವಿಳಂಬ ಮಾಡಬಾರದು. ಸೂಕ್ತ ರೀತಿಯಲ್ಲಿ, ಈ ಹಿಂದೆ ಅನುಮೋದನೆಗೊಂಡಂತೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವಂತೆ ದೇವೇಗೌಡರು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಯವರಿಗೆ ಮತ್ತು ಆಯುಕ್ತರಿಗೆ ಪತ್ರ ಬರೆದಿದ್ದಾರೆ.

Aloysius Road must be Sundarram shetty Road Orders HD Devegowda

ಈ ಹಿಂದೆ ಲೈಟ್ ಹೌಸ್ ಹಿಲ್ ರಸ್ತೆಗೆ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂಬ ಹೆಸರು ಇತ್ತು. ಇದನ್ನು 'ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ' ಎಂದು ಮರು ನಾಮಕರಣ ಮಾಡುವುದು ಸರಿಯಲ್ಲ ಎಂದು ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿಯವರು ವಿರೋಧಿಸಿದ್ದರಿಂದ ರಸ್ತೆ ನಾಮಕರಣ ನಿರ್ಧಾರಕ್ಕೆ ಸರಕಾರ ತಡೆ ನೀಡಿತ್ತು. ಈ ಬಗ್ಗೆ ಸಂಧಾನ ಸಭೆ ನಡೆದರೂ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ಸಭೆ ವಿಫಲವಾಗಿತ್ತು.

ರಸ್ತೆ ಮರುನಾಮಕರಣಕ್ಕೆ ಮಂಗಳೂರು ಬಂಟರ ಸಂಘ ತೀವ್ರ ವಿರೋಧ

ಇದೀಗ ಶ್ರೀ ಹೆಚ್.ಡಿ. ದೇವೇಗೌಡರ ಪತ್ರ ಬರೆದಿದ್ದಕ್ಕೆ ಮಾಜಿ ಸಚಿವ ಅಮರನಾಥ ಶೆಟ್ಟಿ ಮತ್ತು ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಅವರನ್ನು ಅಭಿನಂನಂದಿಸಿದ್ದಾರೆ.

ರಸ್ತೆ ಮರು ನಾಮಕರಣಕ್ಕೆ 'ಅಲೋಶಿಯಸ್' ಹಳೆ ವಿದ್ಯಾರ್ಥಿಗಳ ವಿರೋಧ

H D Deve Gowda celebrates his 85th Birthday in Tirupati on 18th of May

ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ತಡೆಯಾಜ್ಞೆ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡವಂತೆ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರರಿಗೆ ಬಳಿ ಮಾಜಿ ಸಚಿವ ಅಮರನಾಥ ಶೆಟ್ಟಿ ಕೇಳಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former PM of India HD Devegowda writes letter to the DC stating that the light house hill road must be named afer Sundarram shetty Road.
Please Wait while comments are loading...