ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂತ ಅಲೋಶಿಯಸ್‌ ಕಾಲೇಜು ರಸ್ತೆ ಹೆಸರು ಬದಲಾವಣೆಗೆ ವಿರೋಧ

|
Google Oneindia Kannada News

ಮಂಗಳೂರು. ಜೂನ್ 24 : ನಗರದ ಲೈಟ್ ಹೌಸಿನಿಂದ ಅಲೋಶಿಯಸ್ ಕಾಲೇಜು ಸಂಪರ್ಕಿಸುವ ರಸ್ತೆ ಹೆಸರು ಬದಲಿಸುವ ವಿಷಯದಲ್ಲಿ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇದಕ್ಕೆ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ಈಗಾಗಲೇ ಹೆಸರಿಸಲಾಗಿದೆ. ಆದರೆ, ಮಂಗಳೂರು ನಗರ ಪಾಲಿಕೆ (ಮನಪಾ) ಇಲ್ಲಿಗೆ ಬೇರೊಂದು ಹೆಸರಿಡಲು ಪ್ರಯತ್ನಿಸುತ್ತಿದೆ. ಮನಪಾದ ಈ ಪ್ರಯತ್ನಕ್ಕೆ ಸೈಂಟ್ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ವಿರೋಧಿಸಿದೆ.

Aloysius college administration opposes to renaming of St Aloysius College Road

"ಸಂತಅಲೋಶಿಯಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಎಂದು ಪುನರ್ ನಾಮಕರಣ ಮಾಡುವ ಮನಪಾ ಪ್ರಯತ್ನ ಅನಪೇಕ್ಷಿತ. ಪಾಲಿಕೆ ನಮಗೆ ಮಾಹಿತಿ ನೀಡದೆ, ಕೆಲವೇ ಜನರ ಸೊತ್ತಿನಂತೆ ಹೆಸರು ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಸೈಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ರೆ ಫಾ ಡಿಯೋನಿಸಿಸ್ ವಾಝ್ ಅವರು ಮನಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ದೇಶದ ವಿಭಿನ್ನ ಮೂಲೆಯ 14,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲೋಶಿಯಸ್ ಕಾಲೇಜಿಗೆ 44ನೇ ರ್ಯಾಂಕ್ ಸಿಕ್ಕಿದೆ. ಇಲ್ಲಿನ ಕಾಲೇಜು ವೀಕ್ಷಿಸಲು ದೇಶ-ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದರು.

"ಪುನರ್ ನಾಮಕರಣ ಪ್ರಸ್ತಾವ ಮಾಧ್ಯಮಗಳಿಂದ ಗೊತ್ತಾಗಿದೆ. ಈ ವಿಷಯವಾಗಿ ಪಾಲಿಕೆ ನಮ್ಮೊಂದಿಗೆ ಚರ್ಚಿಸಿಲ್ಲ ಅಥವಾ ನೋಟಿಸು ನೀಡಿಲ್ಲ.

ಹಂಪನಕಟ್ಟೆಯಿಂದ ಕಾಲೇಜು ಸಂಪರ್ಕದ ಈ ರಸ್ತೆ ಹೆಸರು ಬದಲಿಸದಂತೆ ನಾವು ಪಾಲಿಕೆಗೆ ಮನವಿ ಮಾಡಿದ್ದೇವೆ" ಎಂದು ಕಾಲೇಜು ರಿಜಿಸ್ಟ್ರಾರ್ ನರಹರಿ ಹೇಳಿದರು.

English summary
St Aloysius College administration has expressed its dismay about the reported news that the road from Hampanakatta to Ambedkar Circle would be renamed 'Mulki Sundararama Shetty Road'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X