ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಶಂಕಿತ ಐಎಸ್‌ಐಎಸ್ ಉಗ್ರ ಸೆರೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 22 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ (ಐಎಸ್‍ಐಎಸ್) ಉಗ್ರರ ಪರವಾಗಿ ಪ್ರಚಾರ ಮಾಡುತ್ತಿದ್ದ ಮತ್ತು ಯುವಕರನ್ನು ಉಗ್ರ ಸಂಘಟನೆ ಸೇರುವಂತೆ ಪ್ರೇರೆಪಿಸುತ್ತಿದ್ದ ಆರೋಪದ ಮೇಲೆ ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ಬಂಧಿತ ವಿದ್ಯಾರ್ಥಿಯನ್ನು ನಜಮುಲ್ ಹೂಡಾ (25) ಎಂದು ಗುರುತಿಸಲಾಗಿದೆ. ಮಂಗಳೂರಿನ ಬಜ್ಪೆ ಸಮೀಪದ ಪೆರ್ಮದೆಯಲ್ಲಿರುವ ನಜಮುಲ್ ನಿವಾಸದ ಮೇಲೆ ತಡರಾತ್ರಿ 2 ಗಂಟೆ ಸುಮಾರಿಗೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಹೂಡಾನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಬಿಜಾಪುರದ ಅಬ್ದುಲ್ ISIS ಸೇರಿಲ್ಲ]

najmul huda

ಮಂಗಳೂರಿನಲ್ಲಿ ಡಿಪ್ಲೋಮಾ ಓದು ಮುಗಿಸಿದ್ದ ನಜಮುಲ್, ಬೆಂಗಳೂರಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಕಾಲೇಜು ಹುಡುಗರನ್ನು ಐಎಸ್‌ಐಎಸ್ ಸೇರುವಂತೆ ಪ್ರೇರೆಪಿಸುತ್ತಿದ್ದ, ಉಗ್ರ ಸಂಘಟನೆ ಪರವಾಗಿ ಪ್ರಚಾರ ಮಾಡುತ್ತಿದ್ದ ಎಂಬ ಆರೋಪದ ಮೇಲೆ ನಜಮುಲ್ ಬಂಧಿಸಲಾಗಿದೆ. [ಉಗ್ರರ ಪರ ಪ್ರಚಾರ, ಕಲಬುರಗಿ ವ್ಯಕ್ತಿ ಬಂಧನ]

ಮುಂಬೈ ಮತ್ತು ಚೆನ್ನೈನಿಂದ ಆಗಮಿದ್ದ 50ಕ್ಕೂ ಹೆಚ್ಚು ಎನ್‌ಐಎ ಅಧಿಕಾರಿಗಳು ರಹಸ್ಯ ಕಾರ್ಯಾಚರಣೆ ನಡೆಸಿ ನಜಮುಲ್ ಬಂಧಿಸಿದ್ದಾರೆ. ರಹಸ್ಯ ಸ್ಥಳದಲ್ಲಿ ಆತನ ವಿಚಾರಣೆ ನಡೆಸಿದ ಬಳಿಕ, ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. ಬಜ್ಪೆ ಸಮೀಪದ ಪೆರ್ಮದೆಯಲ್ಲಿ ನಜಮುಲ್ ಕುಟುಂಬ ಸುಮಾರು12 ವರ್ಷಗಳಿಂದ ವಾಸವಾಗಿದೆ. ನಜಮುಲ್ ಕೆಲವು ದಿನಗಳ ಹಿಂದೆ ವಿದೇಶಕ್ಕೂ ಹೋಗಿ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. [ಗಣರಾಜ್ಯೋತ್ಸವದ ಮೇಲೆ ISIS ಕಣ್ಣು]

English summary
A 25-year-old engineering student Najmul Huda has been arrested in Mangaluru by National Investigation Team (NIA) for allegedly trying to spread ISIS ideology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X