ಕರಾವಳಿಯಲ್ಲಿ ಕೋಣಗಳ ಓಟಕ್ಕೆ ಅಖಾಡ ಸಿದ್ಧ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 10 : ಕರಾವಳಿ ಭಾಗದ ಜನರ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ರಾಷ್ಟ್ರಪತಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಈ ಋತುವಿನ ಮೊದಲ ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

2017-18ನೇ ಸಾಲಿನ ಕಂಬಳ ನಡೆಯುವ ವೇಳಾಪಟ್ಟಿ ಪ್ರಕಟ

ಕಂಬಳದ ವೇಳೆ ಓಡುವ ಕೋಣಗಳು 140 ರಿಂದ 160 ಮೀಟರ್ ದೂರವನ್ನು 12 ರಿಂದ 13 ಸೆಕೆಂಡುಗಳಲ್ಲಿ ಕ್ರಮಿಸಲಿವೆ 2014ರಲ್ಲಿ ನಿಷೇಧಕ್ಕೊಳಗಾಗಿದ್ದ ಕಂಬಳಕ್ಕೆ ಮತ್ತೆ ರಾಜ್ಯ ಸರ್ಕಾರದ ಮಸೂದೆಯ ಬೆಂಬಲ ಸಿಕ್ಕಿದ್ದರಿಂದ ಈ ವರ್ಷ ಕಂಬಳ ಮತ್ತಷ್ಟು ರೋಚಕತೆಯಿಂದ ನಡೆಯಲಿದೆ.

All set up to 2017-18 Kambala in Karawali

ನವೆಂಬರ್ 11 ಮತ್ತು 12 ರಂದು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನಡೆಯಲಿದ್ದು, ಕರೆ ನಿರ್ಮಾಣದ ಕೆಲಸ ಜೋರಾಗಿ ಸಾಗಿದೆ. ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಈ ಕಂಬಳ ನಡೆಯಲಿದ್ದು, ಕಂಬಳದ ವಿಚಾರ ಕೋರ್ಟ್ ಮೆಟ್ಟಿಲೇರಿದ ಎರಡು ವರ್ಷದ ಬಳಿಕ ಅಧಿಕೃತವಾಗಿ ನಡೆಯುತ್ತಿದೆ.

ಇದೇ ವೇಳೆ, ರಾಜ್ಯ ಸರಕಾರ ಕಂಬಳದ ಕುರಿತು ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತವೂ ಲಭಿಸಿದ್ದು, ಕಂಬಳ ಪ್ರಿಯರಿಗೆ ವರದಾನವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All set up to 2017-18 Kambala in Karawali. The Kambala start from November 11 to March 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ