ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಸಿಹಿತ್ಲು ಸರ್ಫಿಂಗ್ ಫೆಸ್ಟಿವಲ್ ಗೆ ಸೆಲೆಬ್ರಿಟಿಗಳ ಸಾಥ್

By Mahesh
|
Google Oneindia Kannada News

ಮಂಗಳೂರು, ಮೇ 15:ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕೆನರಾ ಸರ್ಫಿಂಗ್ ಆಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಹಾಗೂ ಮಂತ್ರ ಸರ್ಫ್ ಕ್ಲಬ್ ಸಹಯೋಗದಲ್ಲಿ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಅಲ್ ಕಾರ್ಗೋ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಎನ್ನುವ " ಸರ್ಫಿಂಗ್ ಫೆಸ್ಟಿವಲ್" ಆಯೋಜಿಸಲಾಗಿದೆ.

ಮೇ 27ರಿಂದ ಮೂರು ದಿನ ನಡೆಯುವ ಈ ಸರ್ಫಿಂಗ್ ಫೆಸ್ಟಿವಲ್ ಮೂಲಕ ಸಸಿಹಿತ್ಲು ಬೀಚನ್ನು ಮಾದರಿ ಬೀಚ್ ಆಗಿ ಅಭಿವೃದ್ದಿಪಡಿಸಲು ಚಿಂತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ ತಿಳಿಸಿದರು.[ಮಳೆಗೆ ಜಗ್ಗದ ಮಂಗಳೂರು ಟ್ರಾಫಿಕ್ ಪೊಲೀಸ್‌ ಬೋಪಯ್ಯ]

All Cargo Indian Open of Surfing at Sasihitlu Beach

ಖ್ಯಾತ ತಾರೆಯರು ಭಾಗಿ: ಕರಾವಳಿಯಲ್ಲಿರುವ ಬೀಚ್‌ಗಳ ಅಭಿವೃದ್ದಿ ಹಿನ್ನಲೆಯಲ್ಲಿ ವಾಟರ್ ಸ್ಪೋರ್ಟ್ ಗೆ ಆದ್ಯತೆ ನೀಡಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಸರ್ಫಿಂಗ್ ಫೆಸ್ಟಿವಲ್‌ನಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಸರ್ಫರ್‌ಗಳು ಭಾಗವಹಿಸುತ್ತಾರೆ. [ಬಿಸಿಲ ಧಗೆಯ ನಡುವೆ ಕರಾವಳಿಗೆ ತಂಪೆರೆದ ವರುಣ]

All Cargo Indian Open of Surfing at Sasihitlu Beach

ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ , ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಸೇರಿದಂತೆ ಹಲವು ಸೆಲೆಬ್ರೇಟಿಗಳೂ ಆಗಮಿಸಲಿದ್ದು, ಫುಡ್ ಫೆಸ್ಟಿವಲ್, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.[ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ದೇಶಪಾಂಡೆ]

ಪ್ರವಾಸೋದ್ಯಮಕ್ಕೆ ಸರ್ಫಿಂಗ್ ಮೆರಗು: ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಸರ್ಫಿಂಗ್ ಆಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಮೊಟ್ಟ ಮೊದಲ ಬಾರಿಗೆ ಕರಾವಳಿಯಲ್ಲಿ ಇಂತಹ ದೊಡ್ಡ ಸರ್ಫಿಂಗ್ ಫೆಸ್ಟಿವಲ್ ಆಯೋಜಿಸುತ್ತಿದ್ದು, ಅಂದಾಜು 50 ಲಕ್ಷ ರೂ. ವೆಚ್ಚವಾಗಲಿದೆ. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

All Cargo Indian Open of Surfing at Sasihitlu Beach

6 ಲಕ್ಷ ರು ತನಕ ಪ್ರಶಸ್ತಿ ಮೊತ್ತ ನೀಡಲಾಗುತ್ತಿದೆಈ ಫೆಸ್ಟಿವಲ್ ಅಂಗವಾಗಿ ಮೇ 15 ರಂದು ನಾನಾ ಸಂಘ ಸಂಸ್ಥೆಗಳ ಜತೆಗೂಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿದೆ.

English summary
Karnataka Tourism, Government of Karnataka presents All Cargo Indian Open of Surfing at Sasihitlu beach, Mangaluru from May 27 to 29.It is an event recognized by the International Surfing Association and SFI organized by Mantra Surf Club in association with Canara Surfing and Water Sports Promotion Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X