ಮ್ಯಾನ್ ಹಂಟ್ ಇಂಟರ್ ನ್ಯಾಷನಲ್‌ನಲ್ಲಿ ಕುಡ್ಲದ ಯುವಕ ರನ್ನರ್ ಅಪ್

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 07 : ಮಂಗಳೂರಿನ ಅಲಿಸ್ಟರ್ ಡಿಸೋಜಾ ಅವರು 'ಮಿಸ್ಟರ್ ಇಂಡಿಯಾ ಮ್ಯಾನ್ ಹಂಟ್ ಇಂಟರ್ ನ್ಯಾಷನಲ್' ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸೆಪ್ಟಂಬರ್ 1 ರಿಂದ 5 ರ ವರೆಗೆ ನವದೆಹಲಿಯಲ್ಲಿ ಸ್ಪರ್ಧೆ ನಡೆದಿತ್ತು.

ಒಟ್ಟು 12 ಯುವಕರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಅಲಿಸ್ಟರ್ ಅವರು ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದರು. ಅಲಿಸ್ಟರ್ ಅವರಿಗೆ ಮಿಸ್ಟರ್ ಸ್ಟೈಲ್ ಕಿರೀಟವನ್ನು ನೀಡಲಾಗಿದೆ.[ಕನಸು ಕಟ್ಟಿಕೊಂಡ ಯುವ ಉದ್ಯಮಿಗಳಿಗೆ ಗೋಲ್ಡನ್ ಚಾನ್ಸ್]

Alester D'Souza wins 2nd runner-up in India Manhunt International

ಸ್ಪರ್ಧೆಗೆ ಆನ್ ಲೈನ್ ಮೂಲಕ ಆಯ್ಕೆ ನಡೆಯಿತು. ನಾಲ್ಕುದಿನಗಳ ಸ್ಪರ್ಧೆಯಲ್ಲಿ 12 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇಂಟೆಲಿಜೆನ್ಸ್, ಐಕ್ಯೂ, ಫಿಟ್ ನೆಸ್, ಫೋಟೊಸ್, ಪ್ರಶ್ನಾವಳಿ ಮುಂತಾದ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಿ ಅವುಗಳ ಫಲಿತಾಂಶದ ಮೇಲೆ ಆಯ್ಕೆ ಮಾಡಲಾಯಿತು.

ಅಲಿಸ್ಟರ್ ಅವರು ಮೂಡಬಿದಿರೆಯ ಮೈಟ್ ನಲ್ಲಿ ಇಂಜಿನಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.[ಯುವಶಕ್ತಿ ಬಳಕೆ, ಭಯೋತ್ಪಾದನೆ ವಿರುದ್ಧ ಸಮರ ಗುರಿ: ಮೋದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru based Alester D'Souza won the second runner-up in the MIBQ pageants Mr India Manhunt International which was held in New Delhi from September 1 to 5, 2016.
Please Wait while comments are loading...