ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭತ್ತ ನಾಟಿ ಮಾಡಲು ದಕ್ಷಿಣ ಕನ್ನಡಕ್ಕೆ ಬಂದ ಗಂಗಾವತಿ ಕೃಷಿ ಕಾರ್ಮಿಕರು

|
Google Oneindia Kannada News

ಮಂಗಳೂರು, ಜುಲೈ.31: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಮಳೆರಾಯ ಕೊಂಚ ಬಿಡುವು ಪಡೆದಿದ್ದಾನೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಭತ್ತದ ನಾಟಿ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಕೃಷಿಕರು ಕೈಚೆಲ್ಲಿ ಕೂತಿದ್ದಾರೆ.

ಆದರೆ ಈ ನಡುವೆ ದೂರದ ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. 125 ಕೃಷಿ ಕಾರ್ಮಿಕರ ಈ ತಂಡ ಮಂಗಳೂರು ತಾಲೂಕಿನ ಬಜಪೆ ಪರಸರದಲ್ಲಿ ಬೀಡು ಬಿಟ್ಟಿದ್ದು, ನೇಜಿ ನಾಟಿ ಕಾರ್ಯ ಆರಂಭಿಸಿದೆ.

ಉಡುಪಿ: ಕೃಷಿ ಉಳಿವಿಗೆ ಪಣತೊಟ್ಟ ಉದ್ಯಮಿ ವಿಶ್ವನಾಥ ಶೆಟ್ಟಿಉಡುಪಿ: ಕೃಷಿ ಉಳಿವಿಗೆ ಪಣತೊಟ್ಟ ಉದ್ಯಮಿ ವಿಶ್ವನಾಥ ಶೆಟ್ಟಿ

15 ಕಾರ್ಮಿಕರ ಒಂದು ತಂಡದಂತೆ 8 ತಂಡಗಳು ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ನಡೆಸಿದ್ದಾರೆ. ನಾಟಿ ಮಾಡುವ ಈ ಕೃಷಿ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ.

Agriculture Labour scarcity in Dakshina Kannada

ಈ ಅವಧಿಯಲ್ಲಿ ಕೊಪ್ಪಳ, ಗಂಗಾವತಿ ಭಾಗದಲ್ಲಿ ಹೊಲದಲ್ಲಿ ಗಂಡಸರಿಗೆ ಮಾತ್ರ ಕೆಲಸವಿರುತ್ತದೆ. ಮಹಿಳೆಯರಿಗೆ ಕೆಲಸ ಕಡಿಮೆ. ಅಲ್ಲಿ ಹೆಚ್ಚಾಗಿ ಒಣ ಬೇಸಾಯವಾದ ಕಾರಣ ಸ್ವಲ್ಪ ಮಳೆ ಬಂತೆಂದರೆ ಒಮ್ಮೆ ಉಳುಮೆ ಮಾಡಿರುವ ಈ ಕಾರ್ಮಿಕರು ಇಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯಲು ಬರುತ್ತಾರೆ.

ಈ ಕೃಷಿ ಕಾರ್ಮಿಕರ ತಂಡ ಈಗಾಗಲೇ ಮಂಗಳೂರು ತಾಲೂಕಿನಲ್ಲಿ 50 ಎಕರೆ ಭತ್ತ ನಾಟಿ ಮಾಡಿ ಮುಗಿಸಿದೆ. 1 ಎಕರೆ ನಾಟಿ ಕಾರ್ಯಕ್ಕೆ ಈ ಕಾರ್ಮಿಕರ ತಂಡ 4 ಸಾವಿರ ರೂಪಾಯಿ ಮಜೂರಿ ನಿಗದಿ ಮಾಡುತ್ತದೆ. ಈ ಕಾರ್ಮಿಕರಿಗೆ ಚಹಾ ಕೊಟ್ಟರೆ ಸಾಕು. ಬೇರೇನನ್ನೂ ಕೇಳುವುದಿಲ್ಲ.

ಆದ್ದರಿಂದ ರೈತರು ಈ ಕೃಷಿ ಕಾರ್ಮಿಕರಿಂದಲೇ ಭತ್ತದ ನಾಟಿಮಾಡಿಸಲು ಮುಂದಾಗುತ್ತಿದ್ದಾರೆ.

Agriculture Labour scarcity in Dakshina Kannada

ಸ್ಥಳೀಯ 22 ಮಂದಿ ಕೃಷಿ ಕಾರ್ಮಿಕರು ಒಂದು ದಿನಕ್ಕೆ ಒಂದು ಎಕರೆ ಜಾಗದಲ್ಲಿ ಭತ್ತ ನಾಟಿ ಮಾಡುತ್ತಾರೆ. ಅದಲ್ಲದೇ ಈ ಸ್ಥಳೀಯ ಕಾರ್ಮಿಕರಿಗೆ ತಲಾ ಒಬ್ಬರಿಗೆ 350 ರೂಪಾಯಿ ಮಜೂರಿ, ಊಟ, ತಿಂಡಿ ,ಚಹಾ ನೀಡಬೇಕು. ಇದನ್ನೆಲ್ಲಾ ಸೇರಿಸಿದರೆ ಒಟ್ಟು ಒಂದು ಎಕರೆಗೆ ಸರಿ ಸುಮಾರು 7,500 ರೂಪಾಯಿ ಮಜೂರಿಯಾಗುತ್ತದೆ.

ಅದೇ ಗಂಗಾವತಿಯ 15 ಮಂದಿಯ ತಂಡ ಒಂದು ದಿನಕ್ಕೆ 2 ಎಕರೆ ಜಾಗ ನಾಟಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಗಂಗಾವತಿಯ ಕೃಷಿ ಕಾರ್ಮಿಕರು ಸ್ಥಳೀಯ ರೈತರಿಗೆ ವರದಾನವಾಗಿ ಪರಿಣಮಿಸಿದ್ದಾರೆ. ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ ಎನ್ನುವ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.

English summary
Labour scarcity affected Paddy Cultivation in Dakshina Kannada District. But Now Labours from Koppala and Gangavathi working in the paddy fields of Dakshina kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X