ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಪೊಲೀಸರಿಗೆ ತುಳು ಜೊತೆ ಬ್ಯಾರಿ ಭಾಷೆಯೂ ಗೊತ್ತು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 11 : ಮಂಗಳೂರಿನ ಪೊಲೀಸರು ತುಳು ಜೊತೆಗೆ ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ. ಹೌದು, ಪೊಲೀಸರಿಗೆ ಬ್ಯಾರಿ ಕಲಿಸಲು 13 ದಿನದ ತರಗತಿಯನ್ನು ನಡೆಸಲಾಗಿದೆ. ಸಂವಹನ ನಡೆಸುವಷ್ಟರ ಮಟ್ಟಿಗೆ ಪೊಲೀಸರು ಭಾಷೆಯನ್ನು ಕಲಿತಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಪೊಲೀಸ್ ಸಿಬ್ಬಂದಿಗಾಗಿ 13 ದಿನಗಳ ಬ್ಯಾರಿ ಭಾಷಾ ಕಲಿಕಾ ಕಾರ್ಯಾಗಾರ ನಡೆಸಲಾಯಿತು. ಬುಧವಾರ ಕಲಿಕಾ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೊಲೀಸರು ಬ್ಯಾರಿ ಭಾಷೆಯಲ್ಲೇ ತಮ್ಮ ಅನಿಸಿಕೆ ಹಂಚಿಕೊಂಡರು.[ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ವಿಧಿವಶ]

After Tulu Mangaluru city police now speak Beary

ಒಟ್ಟು 31 ಪೊಲೀಸರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಈ ಮೊದಲು ಎರಡು ತಂಡಗಳಿಗೆ ತುಳು ಭಾಷಾ ಕಲಿಕಾ ಕಾರ್ಯಾಗಾರ ನಡೆಸಲಾಗಿತ್ತು. ಈ ಬಾರಿ ತುಳು ಭಾಷೆ ಕಲಿತಿರುವ ಪೊಲೀಸರಿಗಾಗಿ ಬ್ಯಾರಿ ಕಲಿಕಾ ಕಾರ್ಯಾಗಾರವನ್ನು ನಡೆಸಲಾಯಿತು.[ಮಂಗಳೂರಲ್ಲಿ 10 ಲಕ್ಷ ಮೌಲ್ಯದ ಗಾಂಜಾ ವಶ]

ತರಬೇತಿಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಆಯುಕ್ತರ ಕಚೇರಿ ಇನ್ಸ್‌ಪೆಕ್ಟರ್ ಗುರು ಕಾಮತ್ ಅವರು, 'ಬ್ಯಾರಿ ಭಾಷೆ ಕಲಿಕೆಯಿಂದ ಕೆಲಸಕ್ಕೆ ಹೆಚ್ಚಿನ ಅನುಕೂಲವಾಗಲಿದೆ. 13 ದಿನಗಳ ತರಬೇತಿಯಲ್ಲಿ ಬ್ಯಾರಿಯಲ್ಲಿ ಸಂವಹನ ನಡೆಸುವ ಕುರಿತು ಶೇ. 60ರಷ್ಟು ತಿಳಿದುಕೊಂಡಿದ್ದೇನೆ' ಎಂದರು.[ಆಗಸ್ಟ್ 15ರಿಂದ ದಕ್ಷಿಣ ಕನ್ನಡ ಬಾಲ ಕಾರ್ಮಿಕ ಮುಕ್ತ ಜಿಲ್ಲೆ]

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು, 'ಭಾಷೆ ಒಂದು ಸಾಧನ, ಪೊಲೀಸರಿಗೆ ಭಾಷೆ ಗೊತ್ತಿದ್ದರೆ ಶೇ. 50 ರಷ್ಟು ಕೆಲಸ ಸುಲಭವಾಗುತ್ತದೆ. ಬ್ಯಾರಿ ಭಾಷೆ ಕಲಿಯುತ್ತಾ, ಬಳಸುತ್ತಾ ಸಾಗಬೇಕು' ಎಂದು ಸಲಹೆ ನೀಡಿದರು.

English summary
After Tulu select personnel of Mangaluru City Police are now speak Beary. City police commissioner's office conducted Beary learning programme for officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X