ಹತ್ಯೆಗೆ ಸಂಚು: ನರೇಂದ್ರ ನಾಯಕ್ ಸೆಕ್ಯೂರಿಟಿ ಡಬಲ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 17: ವಿಚಾರವಾದಿ ನರೇಂದ್ರ ನಾಯಕ್ ಹತ್ಯೆ ಸಂಚು ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರ ಸುಳಿವುಗಳನ್ನು ನರೇಂದ್ರ ನಾಯಕ್ ಅವರು ಪೊಲೀಸ್ ಇಲಾಖೆಗೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಬುಲೆಟ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತನ್ನ ಕಾರಿನ ಟಯರ್ ಪಂಚರ್ ಆಗಿದೆ ಎಂದು ನರೇಂದ್ರ ನಾಯಕ್ ಅವರಲ್ಲಿ ತಿಳಿಸಿದ್ದರು. ಆದರೆ ಇಷ್ಟಾಗಲೇ ಅಪಾಯದ ಮುನ್ಸೂಚನೆ ಅರಿತ ನಾಯಕ್ ತಮ್ಮ ಕಾರನ್ನು ಸ್ವಲ್ಪ ದೂರದವರೆಗೆ ಚಲಾಯಿಸಿಕೊಂಡು ಬಂದು ನೋಡಿದಾಗ ಕಾರಿನ ಟಯರ್ ಯಥಾಸ್ಥಿತಿಯಲ್ಲಿ ಇದ್ದುದ್ದನ್ನು ಕಂಡ ಕೂಡಲೇ ನರೇಂದ್ರ ನಾಯಕ್ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ತದನಂತರ ಈ ಬಗ್ಗೆ ದೂರು ಸಲ್ಲಿಸಿದ್ದರು.[ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್ ಮೇಲೆ ದಾಳಿಗೆ ಯತ್ನ?]

After murder attempt, security doubled for Prof. Narendra Nayak

ದುಷ್ಕರ್ಮಿಗಳು ಹೆಲ್ಮೆಟ್ ಧರಿಸದೇ ಇದ್ದು ನರೇಂದ್ರ ನಾಯಕ್ ಅವರು ಇಬ್ಬರ ಮುಖ ಚಹರೆಯನ್ನು ಪೊಲೀಸ್ ಇಲಾಖೆಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನರೇಂದ್ರ ನಾಯಕ್‌ ಅವರು ಸಲ್ಲಿಸಿರುವ ದೂರನ್ನು ಉರ್ವ ಪೊಲೀಸರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್‌ ಇನ್ನಷ್ಟೇ ದಾಖಲಾಗಬೇಕಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಕಮಿಷನರ್‌ ಚಂದ್ರಶೇಖರ್ , ನರೇಂದ್ರ ನಾಯಕ್‌ ಅವರು ಬುಧವಾರದ ಘಟನೆಯ ಬಗ್ಗೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅವರಿಗೆ ಕಳೆದ ಐದಾರು ತಿಂಗಳಿಂದ ಹಗಲು ಹೊತ್ತು ಗನ್‌ ಮ್ಯಾನ್‌ ಸೌಲಭ್ಯ ನೀಡಲಾಗಿದ್ದು, ಇದೀಗ ಅವರ ಭದ್ರತೆಗಾಗಿ ರಾತ್ರಿ ವೇಳೆಗೆ ಇನ್ನೋರ್ವ ಗನ್‌ ಮ್ಯಾನ್‌ ಸೌಲಭ್ಯ ಒದಗಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ತಿಳಿಸಿದ್ದಾರೆ.[ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈ ಮೇಲೆ ಮತ್ತೊಂದು ಎಫ್ಐಆರ್]

ಸಿಸಿಬಿ ಇನ್ಸ್ ಪೆಕ್ಟರ್ ಸುನಿಲ್ ನಾಯಕ್, ನರೇಂದ್ರ ನಾಯಕ್ ಭದ್ರತೆಯ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prof. Narendra Nayak who has been the driving force behind the fight for justice in the RTI activist Vinayak Baliga murder case, escaped an attempt of assault by some miscreants on the morning of March 15, Wednesday. In result of this the city commissioner of police has doubled the security of Nayak.
Please Wait while comments are loading...