ಮಂಗಳೂರಿಗೆ ಬಂದು ಹೋದ ಅಪ್ಘಾನಿನ ಮೊದಲ ಮಹಿಳಾ ಪೈಲೆಟ್

By: ಕಿರಣ್ ಸಿರ್ಸಿಕರ್
Subscribe to Oneindia Kannada

ಮಂಗಳೂರು, ಆಗಸ್ಟ್ 04 : ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡುತ್ತಿರುವ ಅಫ್ಘಾನಿಸ್ತಾನ ಮೂಲದ ಮೊದಲ ಮಹಿಳಾ ಪೈಲೆಟ್ ಶಹಿಸ್ಥಾ ವಾಯಿಝ್ ಮಂಗಳೂರಿಗೆ ಭೇಟಿ ನೀಡಿದ್ದಾರೆ.

18ನೇ ವರ್ಷದಲ್ಲೇ ವಿಮಾನ ಚಲಾಯಿಸಿ ಗಮನ ಸೆಳೆದಿದ್ದ 29 ವರ್ಷದ ಶಹಿದಾ, ವಿಶ್ವ ಪರ್ಯಟನೆ ಆರಂಭಿಸಿದ್ದಾರೆ. ಇಲ್ಲಿಯವರೆಗೆ ಭಾರತ ಈಜಿಪ್ಟ್, ಸಿಂಗಾಪುರ ಸೇರಿದಂತೆ 19 ದೇಶಗಳನ್ನು ಸುತ್ತಿದ್ದಾರೆ. ಇದೀಗ ಮಸ್ಕತ್ ನಿಂದ ಮಂಗಳೂರಿಗೆ ಬಂದು, ಎರಡು ದಿನ ಇಲ್ಲಿನ ಹೊಟೇಲ್ ವೊಂದರಲ್ಲಿ ತಂಗಿ ವಿಶೇಷ ಖಾದ್ಯ ಸವಿದು ಎಂದಿನಂತೆ ತಮ್ಮ ವಿಶ್ವ ಪರ್ಯಟನೆಗೆ ತೆರಳಿದರು.

Afghan’s 1st Female Pilot makes Pit-Stop in mangaluru on her World Solo Flight

ಶಹಿಸ್ಥಾ ಅಫ್ಘಾನಿಸ್ತಾನದ ನಿರಾಶ್ರಿತೆಯಾಗಿದ್ದು, ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ವಿಶ್ವ ಪರ್ಯಟನೆಯ ಒಟ್ಟು 28,800 ಕಿಮೀ ಪ್ರವಾಸ 90 ದಿನಗಳ ಅವಧಿಯದ್ದಾಗಿದ್ದು ತಾಯ್ನಾಡು ಅಫ್ಘಾನಿಸ್ತಾನದಿಂದಲೇ ಈಕೆ ಪ್ರವಾಸ ಆರಂಭಿಸಿದ್ದರು.

ಅಫ್ಘಾನಿಸ್ತಾನದ ದಂಗೆಯ ಸಂಧರ್ಭ ನಿರಾಶ್ರಿತರಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದ ಶಹಿಸ್ತಾ ಕ್ಯಾಲಿಫೋರ್ನಿಯಾದ ರಿಚ್ಮಂಡ್ ನಗರದಲ್ಲಿ ನೆಲೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The first ever woman pilot from Afghanistan to undertake world tour alone in her aircraft, Shaesta Waiz (29) landed in her private aircraft in Mangaluru International Airport.
Please Wait while comments are loading...