ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹೊಸ ಸ್ವೈಪಿಂಗ್ ಉಪಕರಣ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು ಡಿಸೆಂಬರ್ 13: ದಕ್ಷಿಣ ರೈಲ್ವೇ ಪಲಕ್ಕಾಡ್ ವಿಭಾಗವು ಹೆಚ್ಚುವರಿಯಾಗಿ ಹೊಸ ಸ್ವೈಪಿಂಗ್ ಉಪಕರಣವನ್ನು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಪರಿಚಯಿಸಿದೆ.

ಈಗಾಗಲೇ ನೋಟು ಅಮಾನ್ಯಗೊಂಡಿರುವ ಹಿನ್ನಲೆಯಲ್ಲಿ ನಗರದ ಜನರು ಪರದಾಡುವಂತೆ ಮಾಡಿದೆ. ಆದ್ದರಿಂದ ನಗದು ರಹಿತ ವ್ಯವಹಾರ ಮಾಡುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದ್ದು ಪ್ರಯಾಣಿಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.[ಬೆಂಗಳೂರಿಂದ ಸಂಚರಿಸುವ ರೈಲ್ವೆ ಪ್ರಯಾಣಿಕರೇ ಗಮನಿಸಿ]

Additional Pos machine now at Mangalore Central

ಭಾರತೀಯ ರೈಲು ನಿಗಮವು ಸುಮಾರು 10000 ದಷ್ಟು ಸ್ವೈಪಿಂಗ್ ಉಪಕರಣವನ್ನು ರಾಜ್ಯದಾದ್ಯಂತ ಅಳವಡಿಸಲು ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ರೈಲು ವಿಭಾಗ , ಈ ಸ್ವೈಪಿಂಗ್ ಉಪಕರಣವನ್ನು ಪೊಳ್ಳಚಿ, ಪಲಕ್ಕಾಡ್, ಒಟ್ಟಾಪಲಮ್, ಶೊರನೂರ್, ಅಂಗಡಿಪುರಂ, ಮಲಪ್ಪುರಂ, ತಿರೂರು, ಫೇರೋಕೆ, ವಯನಾಡ್, ತೆಲ್ಲಿಚೆರಿ, ಕಣ್ಣೂರು, ಪಯ್ಯನ್ನೂರು, ಕಾನ್ಜಂಗಾಡ್ , ಕಾಸರಗೋಡ್, ಮಂಗಳೂರು ಜಂಕ್ಷನ್ ಮೊದಲಾದೆಡೆ ಅಳವಡಿಸಲಾಗಿದೆ ಎಂದಿದೆ.

Additional Pos machine now at Mangalore Central

ನಗರದ ಪ್ರಯಾಣಿಕರು ಈಗ ನಗದು ರಹಿತ ವ್ಯವಹಾರಕ್ಕೆ ಕಾರ್ಡ್ ಬಳಸಿ ಯೋಜನೆಗೆ ಸಮ್ಮಿತಿ ಸೂಚಿಸಿದ್ದಾರೆ. ಈ ರೀತಿಯಾಗಿ ನಗದು ರಹಿತ ವ್ಯವಹಾರಕ್ಕೆ ನಗರದ ರೈಲು ನಿಲ್ದಾಣದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರತಿಕ್ರಿಯೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.[ಎಟಿಎಂ ಕಾರ್ಡ್ ಮೂಲಕ ಬಿಎಂಟಿಸಿ ಬಸ್ ಪಾಸ್ ಪಡೆಯಿರಿ]

ಇನ್ನು ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ, ಸುದೀಪ್ (ಪ್ರಯಾಣಿಕ) ಇಂತ ಒಂದು ಅದ್ಭುತ ಸೌಲಭ್ಯ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ದೊರಕಿರುವುದು ನಿಜಕ್ಕೂ ಸಂತೋಷ. ನಾನು ಸದಾ ರೈಲ್ ನಲ್ಲಿ ಕೆಲಸಕ್ಕೆ ದಿನಂಪ್ರತಿ ಪ್ರಯಾಣಿಸುತ್ತೇನೆ, ದಿನ ಬೆಳಿಗ್ಗೆ ಅರ್ಧ ಗಂಟೆ ಸಾಳುಗಟ್ಲೆ ನಿಲುವ ಪರಿಸ್ಥಿಯಿತ್ತು, ಆದರೆ ಈ ಅದ್ಭುತ ಯಂತ್ರದಿಂದ ಸರದಿ ನಿಲುವ ತೊಂದರೆ ತಪ್ಪಿದೆ ಎಂದು ಸಂತಸವನ್ನು ಹಂಚಿಕೊಂಡರು.

Additional Pos machine now at Mangalore Central

ಇನ್ನು ಪ್ರಯಾಣಿಕ ಗಣೇಶ್ ಪ್ರಸಾದ್, ನಮ್ಮ ಮಂಗಳೂರು ನಗರ ಈಗಾಗಲೇ ಈ ನೋಟು ನಿಷೇಧವನ್ನು ತುಂಬಾ ಉತ್ತಮ ರೀತಿಯಲ್ಲಿ ಸ್ವೀಕರಿಸಿದೆ. ಈಗ ರೈಲು ನಿಲ್ದಾಣದಲ್ಲಿಯೂ ಸ್ವೈಪಿಂಗ್ ಉಪಕರಣ ಅಳವಡಿಸಲಾಗಿದೆ. ಇದರಿಂದ ನಗದು ರಹಿತ ವ್ಯವಹಾರ ಮಾಡಬಹುದಾಗಿದೆ ಇದು ಮಂಗಳೂರಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

Additional Pos machine now at Mangalore Central

ಸ್ವೈಪಿಂಗ್ ಉಪಕರಣದ ಉಪಯೋಗ

* ರು 5 ಯಿಂದ ರು 1000 ಗಳ ನೋಟುಗಳನ್ನು ಬಳಸಿ ಟಿಕೆಟ್ ಪಡೆಯಬಹುದು( ಆದರೆ ಒದ್ದೆಯಾದ ನೋಟು , ಹರಿದ ನೋಟುಗಳನ್ನು ಬಳಸುವಂತಿಲ್ಲ)

*ನಾಣ್ಯಗಳನ್ನೂ ಬಳಸಿ ಟಿಕೆಟ್ ಪಡೆಯಬಹುದು (ಒಂದು ರೂಪಾಯಿ, ಎರಡು ರೂ. ನಾಣ್ಯಗಳನ್ನು ಹೊರತುಪಡಿಸಿ ರು 5 ಮತ್ತು ರು10 ನಾಣ್ಯಗಳನ್ನು ಬಳಸಬಹುದು)

*ಈ ಉಪಕರಣ ಕೇವಲ ಇಲ್ಲಿನ ನಗದು ಮಾತ್ರ ಸ್ವೀಕರಿಸುತ್ತದೆ. (ಗಾಂಧಿ ನೋಟು ಮನ್ನಣೆ)

*ಏನಾದರೂ ಹಣ ವಿನಿಮಯದಲ್ಲಿ ಸಮಸ್ಯೆಯಾದರೆ ಕೌಂಟರ್ ಬಳಿ ತಿಳಿಸಬಹುದಾಗಿದೆ

*ಒಂದರ ಬಳಿಕ ಒಂದು ನೋಟುಗಳನ್ನು ಉಪಕರಣದ ಒಳಗೆ ಹಾಕಬಹುದಾಗಿದೆ.

*ಹಣ ಹಾಕುವ ಸಂದರ್ಭ ಉಪಕರಣ ಹಸಿರು ಬಣ್ಣದ ನಿಶಾನೆ ತೋರಿಸುತ್ತದೆ.

*ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಟಿಕೆಟ್ ಪಡೆಯಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Palakkad division of southern railway has introduced an additional point of sale (pos) machine at the passenger reservation counters of Mangaluru central railway station.
Please Wait while comments are loading...