ಪೆಲಕ್ಕಾಯಿ ಗಟ್ಟಿ ಸವಿದ ಶಿಲ್ಪಾ ಶೆಟ್ಟಿ, ವಿಡಿಯೋ ವೈರಲ್!

Posted By:
Subscribe to Oneindia Kannada

ಮಂಗಳೂರು, ಅ. 19 : ಕೆಲವು ದಿನಗಳ ಹಿಂದೆ ಮಂಗಳೂರಿನ ಬೆಡಗಿ, ಬಾಲಿವುಡ್‍ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಹಾಕಿದ್ದರು. ಸದ್ಯ, ಇದು ವೈರಲ್ ಆಗಿದ್ದು ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ವಿಡಿಯೋ ತುಳುನಾಡಿನ ಖಾದ್ಯಕ್ಕೆ ಸಂಬಂಧಿಸಿದ್ದು.

ಹೌದು, ಶಿಲ್ಪಾ ಶೆಟ್ಟಿ ಹಾಕಿದ ವಿಡಿಯೋ ತುಳುನಾಡಿನ ಖಾದ್ಯವಾದ ಪೆಲಕ್ಕಾಯಿ ಗಟ್ಟಿಬಗ್ಗೆ. ತುಳುನಾಡಿನ ವಿಶಿಷ್ಟ ಖಾದ್ಯವಾದ ಪೆಲಕ್ಕಾಯಿ ಗಟ್ಟಿ (ಹಲಸಿನ ತಿಂಡಿ) ಸವಿದಿದ್ದ ಶಿಲ್ಪಾ ಅದರ ವಿಡಿಯೋ ಹಾಕಿ ಸುದ್ದಿಯನ್ನು ಮಾಡಿದ್ದಾರೆ.

ಮಳೆಗಾಲ ಪ್ರಾರಂಭವಾದ ಸಮಯದಲ್ಲಿ ಹಲವು ಹಣ್ಣುಗಳ ವಿಶಿಷ್ಟ ಖಾದ್ಯಗಳನ್ನು ತುಳುನಾಡಲ್ಲಿ ತಯಾರಿಸುತ್ತಾರೆ. ಇದರಲ್ಲಿ ವಿಶಿಷ್ಟವಾದುದ್ದು ಪೆಲಕ್ಕಾಯಿ ಗಟ್ಟಿ.ಹಲಸಿನ ಹಣ್ಣು, ಅಕ್ಕಿ, ಬೆಲ್ಲ, ಜೀರಿಗೆ ಸೇರಿಸಿ ನಂತರ ಬಾಳೆಎಲೆಯಲ್ಲಿ ಸುತ್ತಿ ಬೇಯಿಸಿ ತಯಾರಿಸುವ ರುಚಿಕರವಾದ ತಿಂಡಿ ಇದು. ಇದನ್ನು ಸವಿದವರಿಗೇ ಗೊತ್ತು ಅದರ ರುಚಿ.

ಶಿಲ್ಪಾ ಶೆಟ್ಟಿ ಆಗಸ್ಟ್ 15ರಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಆರು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಜೊತೆಗೆ ಸಾವಿರಕ್ಕಿಂತಲೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಈ ಮೂಲಕ ಕೇವಲ ತುಳುನಾಡಿನಲ್ಲಿ ಮಾತ್ರ ಪ್ರಸಿದ್ದಿಯಾಗಿದ್ದ ಈ ತಿಂಡಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ...

ಮಂಗಳೂರು ತಿಂಡಿ ಅಂದ್ರೆ ತುಂಬಾ ಇಷ್ಟ

ಮಂಗಳೂರು ತಿಂಡಿ ಅಂದ್ರೆ ತುಂಬಾ ಇಷ್ಟ

ಮೂಲತಃ ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿ ಎನಿಸಿದ್ದಾರೆ. ಸದ್ಯ, ಮುಂಬೈನಲ್ಲಿ ಪತಿ ರಾಜ್‍ಕುಂದ್ರಾ ಹಾಗೂ ಕುಟುಂಬದೊಂದಿಗೆ ವಾಸವಾಗಿದ್ದಾರೆ.

ಖಾದ್ಯಗಳನ್ನು ಸವಿಯುತ್ತಾರೆ ಶಿಲ್ಪಾ

ಖಾದ್ಯಗಳನ್ನು ಸವಿಯುತ್ತಾರೆ ಶಿಲ್ಪಾ

ಶಿಲ್ಪಾ ಶೆಟ್ಟಿಗೆ ತವರಿನ ತಿಂಡಿಗಳೆಂದರೆ ಪಂಚ ಪ್ರಾಣ. ಆಗಾಗ ಮಂಗಳೂರಿಗೆ ಬಂದು ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದು, ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇದೇ ವೇಳೆ ತಮಗಿಷ್ಟವಾದ ಖಾದ್ಯಗಳನ್ನು ಸವಿಯುತ್ತಾರೆ. ವೀಡಿಯೋದಲ್ಲಿಯೂ ತಾನು ಮಂಗಳೂರಿನ ಖಾದ್ಯಗಳನ್ನು ಇಷ್ಟಪಡುವುದಾಗಿಯೂ ಹೇಳಿದ್ದಾರೆ.

ಪೆಲಕ್ಕಾಯಿ ಗಟ್ಟಿಗೆ ಹಲವು ಹೆಸರು

ಪೆಲಕ್ಕಾಯಿ ಗಟ್ಟಿಗೆ ಹಲವು ಹೆಸರು

ಪೆಲಕ್ಕಾಯಿಗೆ ಬೇರೆ-ಬೇರೆ ಹೆಸರುಗಳಿವೆ. ಬರಿಕ್ಕ ಪೆಲಕ್ಕಾಯಿ, ತುಳುವ ಪೆಲಕ್ಕಾಯಿ, ಬೊಡ್ಡ ಪೆಲಕ್ಕಾಯಿ, ಪೊಳ್ಳೆ, ಉ೦ಡೆ ಪೆಲಕ್ಕಾಯಿ ಇತ್ಯಾದಿ ಹೆಸರುಗಳಿಂದಲೂ ಪೆಲಕ್ಕಾಯಿಯನ್ನು ಕರೆಯುತ್ತಾರೆ.

6 ಸಾವಿರ ಜನರಿಂದ ವೀಕ್ಷಣೆ

6 ಸಾವಿರ ಜನರಿಂದ ವೀಕ್ಷಣೆ

ಶಿಲ್ಪಾ ಶೆಟ್ಟಿ ಈ ವಿಡಿಯೋ ಹಾಕುವ ಮೂಲಕ ಪೆಲಕ್ಕಾಯಿ ಗಟ್ಟಿ ದೇಶ-ವಿದೇಶದಲ್ಲಿ ಪ್ರಸಿದ್ಧವಾಗುವಂತೆ ಮಾಡಿದ್ದಾರೆ. ಆರು ಸಾವಿರ ಜನರು ಈ ವಿಡಿಯೋ ನೋಡಿದ್ದಾರೆ. ತುಳುನಾಡಿನಲ್ಲಿ ಮಾತ್ರ ಪ್ರಸಿದ್ದಿಯಾಗಿದ್ದ ತಿಂಡಿ ಈಗ ಎಲ್ಲರಿಗೂ ಪರಿಚಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood Actress Shilpa Shetty posted video on Pelakaida Gatti. Now video goes viral on social media. Pelakai daghatti delicious food made in Tulu Nadu, Mangaluru (Dakshina Kannada).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ