ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ವಸುಧಾರ ಗೋಶಾಲೆಗೆ ನಟಿ ಅಮೂಲ್ಯ ಭೇಟಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್ 26: ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಗುರುವಾರ ನಟಿ ಅಮೂಲ್ಯ - ಜಗದೀಶ್ ದಂಪತಿ ಭೇಟಿ ನೀಡಿದರು. ಶ್ರೀರಾಮ ವಿದ್ಯಾಕೇಂದ್ರದ ವಸುಧಾರ ಗೋಶಾಲೆಗೆ ಭೇಟಿ ನೀಡಿದ ಅಮೂಲ್ಯ ದಂಪತಿ, ಗೋಪೂಜೆಯಲ್ಲಿ ಪಾಲ್ಗೊಂಡರು.

ಬಂಗಾರದ ಬೆಳೆ ಬೆಳೆದ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯ ಮಕ್ಕಳು

ಆ ನಂತರ ವಿದ್ಯಾ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ 'ಸೀತಾ' ಶಿಶುಮಂದಿರ ಕಟ್ಟಡವನ್ನು ನಟಿ ಅಮೂಲ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿದ್ಯಾ ಕೇಂದ್ರಕ್ಕೆ ಬರುವ ಅವಕಾಶ ದೊರಕಿದ್ದು ತುಂಬಾ ಸಂತೋಷ. ಇಲ್ಲಿಯ ವಿದ್ಯಾರ್ಥಿಗಳನ್ನು ಕಂಡಾಗ ತುಂಬಾ ಹೆಮ್ಮೆ ಅನಿಸಿದೆ ಹೇಳಿದರು.

Amulya

ಈ ವಿದ್ಯಾ ಕೇಂದ್ರದಲ್ಲಿ ಕಲಿಸಿರುವ ಸಂಸ್ಕಾರ, ಸಂಸ್ಕೃತಿಗಳನ್ನು ಇನ್ನು ಮುಂದೆಯೂ ಬೆಳೆಸಿ ಉಳಿಸಿಕೊಳ್ಳಬೇಕು. ಇಂತಹ ಶಿಕ್ಷಣ ಸಂಸ್ಥೆಗಳನ್ನು ಬೆಂಗಳೂರುನಲ್ಲಿಯೂ ಆರಂಭಿಸಬೇಕು ಎಂದು ವಿನಂತಿಸಿದರು. ಪ್ರಾಥಮಿಕ ಶಾಲೆಯ ಮಹೇಂದ್ರ ಕಟ್ಟಡದ ಶಿಲಾನ್ಯಾಸವನ್ನು ಲಹರಿ ಆಡಿಯೋ ಕಂಪನಿಯ ಜಿ.ವೇಲು ನೆರವೇರಿಸಿದರು.

Amulya

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿದ್ಯಾಕೇಂದ್ರ ಬೆಳೆದು ಬಂದ ರೀತಿ ಹಾಗೂ ಇಲ್ಲಿನ ಶಿಕ್ಷಣ ಪದ್ಧತಿಯನ್ನು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress Amulya and her husband Jagadish visits Kalladka gou shale on Thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ