ಚಿತ್ರಗಳು : ಮಂಗಳೂರಿಗೆ ಬಂದ ಐಶ್ವರ್ಯ ರೈ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 03 : ಬಾಲಿವುಡ್ ನಟಿ ಐಶ್ವರ್ಯ ರೈ ತಮ್ಮ ತವರು ಜಿಲ್ಲೆ ದಕ್ಷಿಣ ಕನ್ನಡಕ್ಕೆ ದಿಢೀರ್ ಭೇಟಿ ನೀಡಿ ಗಮನ ಸೆಳೆದರು. ಮಂಗಳೂರಿಗೆ ಶನಿವಾರ ಸಂಜೆ ಆಗಮಿಸಿದ್ದ ಅವರಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು.

ಮಗಳು ಆರಾಧ್ಯಳೊಂದಿಗೆ ಆಗಮಿಸಿದ್ದ ಐಶ್ವರ್ಯಾ ರೈ ಬಚ್ಚನ್, ನಗರದ ಕೊಡಿಯಲ್ ಬೈಲ್ ನಲ್ಲಿರುವ ಟಿಎಂಎ ಪೈ ಹಾಲಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಐಶ್ವರ್ಯ ರೈ ತಾಯಿ ಬೃಂದಾ ರೈ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮರೆತ ಈ ಗಣ್ಯರಿಗೆ ಕನ್ನಡ ಸಮ್ಮೇಳನದ ಆಹ್ವಾನವೇಕೆ?

Actress Aishwarya Rai Bachchan visits Mangaluru

ಬೃಂದಾ ರೈ ಅವರ ಸಹೋದರ ಸೋಂತಾಡಿ ಉದಯ್ ಕುಮಾರ್ ಶೆಟ್ಟಿ ಅವರ ಪುತ್ರ ಉಜ್ವಲ್ ವಿವಾಹ ಸಮಾರಂಭಲ್ಲಿ ಪಾಲ್ಗೊಂಡ ಐಶ್ವರ್ಯಾ ರೈ ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಬೆರೆತರು. ತುಳುನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು.

ಮಂಗಳೂರಿಗೆ ಬಂದ ಐಶ್ವರ್ಯಾ ರೈ

Actress Aishwarya Rai Bachchan visits Mangaluru

ಮದುವೆಯಲ್ಲಿ ಎಲ್ಲರೊಂದಿಗೆ ಮಾತೃ ಭಾಷೆ ತುಳುವಿನಲ್ಲಿಯೇ ಐಶ್ವರ್ಯಾ ರೈ ಮಾತನಾಡಿದರು. ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳಾದ ಕೋರಿ ಸುಕ್ಕ ಹಾಗೂ ಅಂಜಲ್ ಫ್ರೈ ಸವಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood actress Aishwarya Rai Bachchan visited the Mangaluru city on December 2, 2017. Along with her mother Brinda Rai, daughter Aaradhya Aishwarya Rai participated at family marriage function.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ