'ಕಿರಿಕ್ ಪಾರ್ಟಿ' ರಕ್ಷಿತ್ ಶೆಟ್ಟಿಯಿಂದ ವಿದ್ಯಾರ್ಥಿಗಳಿಗೆ ಫಿಲ್ಮ್ ಮೇಕಿಂಗ್ ಪಾಠ

Subscribe to Oneindia Kannada

ಮಂಗಳೂರು, ಮಾರ್ಚ್ 13: ಕಿರಿಕ್ ಪಾರ್ಟಿ ನಟ ರಕ್ಷಿತ್ ಶೆಟ್ಟಿ ಮಂಗಳೂರು ವಿದ್ಯಾರ್ಥಿಗಳಿಗೆ ಸಿನಿಮಾ ನಿರ್ಮಾಣದ ಕುರಿತು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಇಲ್ಲಿನ ದೇರಳಕಟ್ಟೆಯ ಪನ್ನೀರ್ ಕ್ಯಾಂಪಸಿನಲ್ಲಿರುವ ನಿಟ್ಟೆ ವಿದ್ಯಾರ್ಥಿಗಳಿಗೆ 'ಕ್ರಾಫ್ಟ್ ಆಫ್ ಫಿಲ್ಮ್ ಮೇಕಿಂಗ್' ವಿಷಯದ ಕುರಿತು ಉಪನ್ಯಾಸ ನೀಡಿಲಿದ್ದಾರೆ.

ನಾಳೆ ಅಂದರೆ ಮಾರ್ಚ್ 14ರಂದು ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಆಯೋಜನೆಯಾಗಿದೆ. ವಿದ್ಯಾರ್ಥಿಳಲ್ಲದೆ ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳೂ ಭಾಗವಹಿಸಿ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಜತೆ ಸಂವಾದವನ್ನೂ ಮಾಡಬಹುದು.[ತುಂಬೆ ಡ್ಯಾಂನಲ್ಲಿ ನೀರು ಇಳಿಕೆ: ಕರಾವಳಿಯಲ್ಲೂ ಜಲಕ್ಷಾಮ..?]

 actor-director Rakshit Shetty’s Film Making class ti Nitte students

ನಿಟ್ಟೆ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಈ ಕಾರ್ಯಕ್ರಮ ಆಯೋಜಿಸಿದೆ. ಈ ಹಿಂದೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯಮ ಉತ್ಸವಗಳನ್ನೂ ಆಯೋಜಿಸಿದ್ದ ಕಾಲೇಜು ಇದೀಗ ವಿದ್ಯಾರ್ಥಿಗಳಿಗೆ ಸಿನಿಮಾ ನಿರ್ದೇಶಕರಿಂದಲೇ ಸಿನಿಮಾ ನಿರ್ಮಾಣದ ಅನುಭವಗಳನ್ನು ಕಲಿತುಕೊಳ್ಳುವ ಅವಕಾಶ ಕಲ್ಪಿಸಿದೆ.[ಪುತ್ತೂರು ಬಳಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರು ಅಪಘಾತ]

"ಜನಪ್ರಿಯ ಸಿನಿಮಾ ನಿರ್ದೇಶಕ ಮತ್ತು ಭಿನ್ನ ಹಾದಿಯ ನಟ ರಕ್ಷಿತ್ ಶೆಟ್ಟಿ ನಮ್ಮ ಜತೆಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಿನಿಮಾ ಮತ್ತು ಮನನರಂಜನಾ ಉದ್ಯಮದ ಅಂತರಾಳವನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ," ಎಂದು ವಿಭಾಗದ ಮುಖ್ಯಸ್ಥರಾದ ಫ್ರೊ ರವಿರಾಜ್ ಕಿಣಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rakshit Shetty who is floating in the success of Kirik Party will be in Nitte Institute of Communication college at 10:00am on March 14. And also he will address students on “Craft of Film Making”. An hour of interaction is open for students, general public and media.
Please Wait while comments are loading...